ಟೋಕಿಯೋ ಒಲಿಂಪಿಕ್ಸ್: ಐರ್ಲೆಂಡ್ ವಿರುದ್ಧ ಜಯ ಸಾಧಿಸಿದ ಭಾರತೀಯ ಮಹಿಳಾ ಹಾಕಿ ತಂಡ

ಭಾರತೀಯ ಮಹಿಳಾ ಹಾಕಿ ತಂಡ ಐರ್ಲೆಂಡ್ ಮಹಿಳಾ ಹಾಕಿ ತಂಡವನ್ನು ಸೋಲಿಸುವುದರ ಮೂಲಕ ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ತನ್ನ ಮೊದಲ ಜಯವನ್ನು ಸಾಧಿಸಿದೆ.
ಶುಕ್ರವಾರದಂದು ನಡೆದ ಈ ಪಂದ್ಯದಲ್ಲಿ ಎ ಗುಂಪಿನ ತಂಡಗಳಾದ ಐರ್ಲೆಂಡ್ ಮತ್ತು ಭಾರತ ಆರಂಭದಿಂದಲೇ ಪೈಪೋಟಿ ನೀಡುತ್ತಾ ಜಿದ್ದಾಜಿದ್ದಿನ ಹೋರಾಟವನ್ನು ಮಾಡುತ್ತಾ ಬಂದರು. ಪಂದ್ಯದ ಕೊನೆಯ ಹಂತದವರೆಗೂ ಎರಡೂ ತಂಡಗಳ ಯಾವುದೇ ಆಟಗಾರರೂ ಗೋಲ್ ಬಾರಿಸಲಿಲ್ಲ. ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತದ ನವನೀತ್ ಕೌರ್ 57ನೇ ನಿಮಿಷದಲ್ಲಿ ಗೋಲು ಬಾರಿಸುವುದರ ಮೂಲಕ ಭಾರತ ತಂಡ ಐರ್ಲೆಂಡ್ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿತು.
ಇತ್ತ ಭಾರತೀಯ ಮಹಿಳಾ ಹಾಕಿ ತಂಡ ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿದ್ದರೆ ಅತ್ತ ಭಾರತೀಯ ಪುರುಷರ ಹಾಕಿ ತಂಡ ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಪಡೆದುಕೊಂಡಿದೆ. ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಆರಂಭವಾದಾಗಿನಿಂದ ಇದೇ ಮೊದಲ ಪಂದ್ಯದಲ್ಲಿ ಜಯ ಗಳಿಸಿರುವ ಭಾರತೀಯ ವನಿತೆಯರ ಹಾಕಿ ತಂಡ ಪದಕದ ಆಸೆಯನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿದೆ.

ಸತತ 3 ಸೋಲು, ನಂತರ ಗೆಲುವು
ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಆರಂಭವಾದಾಗಿನಿಂದ ಭಾರತೀಯ ಮಹಿಳಾ ತಂಡ ಸತತವಾಗಿ 3 ಸೋಲುಗಳನ್ನು ಕಂಡಿತ್ತು.ಹೀಗೆ ಸತತವಾಗಿ 3 ಸೋಲುಗಳನ್ನು ಕಂಡ ನಂತರ ನಾಲ್ಕನೇ ಪಂದ್ಯವನ್ನು ಟೀಮ್ ಇಂಡಿಯಾ ವನಿತೆಯರ ಹಾಕಿ ತಂಡ ಗೆಲ್ಲುವುದರ ಮೂಲಕ ಪದಕದ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. ಮೊದಲನೇ ಪಂದ್ಯವನ್ನು ನೆದರ್ಲೆಂಡ್ಸ್ ವಿರುದ್ಧ ಸೋತಿದ್ದ ಭಾರತೀಯ ವನಿತೆಯರ ಹಾಕಿ ತಂಡ ಎರಡನೇ ಪಂದ್ಯದಲ್ಲಿ ಜರ್ಮನಿ ಮಹಿಳಾ ಹಾಕಿ ತಂಡದ ಮುಂದೆ ಶರಣಾಗಿತ್ತು ಹಾಗೂ ಮೂರನೇ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮಹಿಳಾ ತಂಡದ ವಿರುದ್ಧ ಸೆಣಸಾಡಿದ್ದ ಭಾರತೀಯ ಮಹಿಳಾ ಹಾಕಿ ತಂಡ ಅದರಲ್ಲಿಯೂ ಸೋಲುಂಡಿತ್ತು. ಹೀಗೆ ಸಾಲು ಸಾಲು ಸೋಲುಗಳ ನಂತರ ಶುಕ್ರವಾರ ನಡೆದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತೀಯ ಮಹಿಳೆಯರ ಹಾಕಿ ತಂಡ ಗೆಲುವು ದಾಖಲಿಸಿದೆ.

ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ ಭಾರತೀಯ ಮಹಿಳಾ ಹಾಕಿ ತಂಡ
ಸತತ 3 ಪಂದ್ಯಗಳಲ್ಲಿ ಸೋತು ನಾಲ್ಕನೇ ಪಂದ್ಯವನ್ನು ಗೆದ್ದಿರುವ ಭಾರತೀಯ ವನಿತೆಯರ ಹಾಕಿ ತಂಡ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ತನ್ನ ಗೆಲುವಿನ ಖಾತೆಯನ್ನು ತೆರೆದಿದೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ಮಹಿಳಾ ಹಾಕಿ ಪಂದ್ಯಾವಳಿಯ ಗ್ರೂಪ್ ಎ ಅಂಕಪಟ್ಟಿಯಲ್ಲಿ ಭಾರತ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಗೂ ಗ್ರೂಪ್ ಎ ಅಂಕಪಟ್ಟಿಯಲ್ಲಿ ಯಾವುದೇ ಸೋಲನ್ನು ಕಾಣದ ನೆದರ್ಲೆಂಡ್ಸ್ ಮತ್ತು ಜರ್ಮನಿ ತಂಡಗಳು ಕ್ರಮವಾಗಿ ಒಂದನೇ ಮತ್ತು ಎರಡನೇ ಸ್ಥಾನಗಳನ್ನು ಪಡೆದುಕೊಂಡಿವೆ.

ಪುರುಷರ ಹಾಕಿ ತಂಡ ಅಬ್ಬರಿಸುತ್ತಿದೆ
ಇತ್ತ ಭಾರತೀಯ ಮಹಿಳಾ ಹಾಕಿ ತಂಡ ಸಾಲು ಸಾಲು ಸೋಲುಗಳಿಂದ ಕಂಗೆಟ್ಟು ಕೊನೆಗೆ ನಾಲ್ಕನೇ ಪಂದ್ಯವನ್ನು ಗೆಲ್ಲುವುದರ ಮೂಲಕ ಪದಕದ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದರೆ, ಅತ್ತ ಭಾರತೀಯ ಪುರುಷರ ಹಾಕಿ ತಂಡ ಮಾತ್ರ ಭರ್ಜರಿ ಪ್ರದರ್ಶನವನ್ನು ನೀಡುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದೆ. ಪ್ರಸ್ತುತ ನಡೆಯುತ್ತಿರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇದುವರೆಗೂ 4 ಪಂದ್ಯಗಳನ್ನಾಡಿರುವ ಭಾರತೀಯ ಪುರುಷರ ಹಾಕಿ ತಂಡ 3 ಪಂದ್ಯಗಳಲ್ಲಿ ಜಯ ಸಾಧಿಸಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಸೋಲುಂಡಿದೆ.ಹೀಗೆ 4 ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸಿರುವ ಭಾರತ ಪುರುಷರ ಹಾಕಿ ತಂಡ ಗ್ರೂಪ್ ಎ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications