Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೋಕಿಯೋ ಒಲಿಂಪಿಕ್ಸ್: ಮಹಿಳಾ ಹಾಕಿಯಲ್ಲಿ ಜರ್ಮನಿ ವಿರುದ್ಧ ಭಾರತಕ್ಕೆ ಸೋಲು

Tokyo Olympics 2021: India lose 0-2 against Germany in womens hockey

ಟೋಕಿಯೋ: ಭಾರತ ಮತ್ತು ಜರ್ಮನಿ ನಡುವಿನ ಮಹಿಳಾ ಫೀಲ್ಡ್ ಹಾಕಿ ಪಂದ್ಯದಲ್ಲಿ ಜರ್ಮನಿ ತಂಡ ಸುಲಭ ಜಯ ಗಳಿಸಿದೆ. ಭಾರತವನ್ನು ಜರ್ಮನಿ 2-0ಯಿಂದ ಸೋಲಿಸಿದೆ. ಗ್ರೂಪ್‌ ಬಿಯಲ್ಲಿದ್ದ ಭಾರತ ತನ್ನ ಎರಡನೇ ಪಂದ್ಯದಲ್ಲೂ ನೀರಸ ಪ್ರದರ್ಶನದೊಂದಿಗೆ ಪಂದ್ಯ ಸೋತಿದೆ.

ಇದು ಭಾರತಕ್ಕೆ ಲಭಿಸಿದ ಸತತ ಎರಡನೇ ಸೋಲು. ಇದಕ್ಕೂ ಮುನ್ನ ನೆದರ್ಲ್ಯಾಂಡ್ಸ್‌ ವಿರುದ್ಧ ಭಾರತದ ಮಹಿಳಾ ತಂಡ 5-1ರ ಸೋಲು ಅನುಭವಿಸಿತ್ತು. ಇದರೊಂದಿಗೆ ಹಾಕಿಯಲ್ಲಿ ಭಾರತದ ಮಹಿಳಾ ಮತ್ತು ಪುರುಷರ ತಂಡಗಳು ನಿರಾಸೆಯ ಪ್ರದರ್ಶನ ನೀಡಿದಂತಾಗಿದೆ.

ಭಾರತೀಯ ಪುರುಷರ ತಂಡವೂ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿತ್ತು. ಮಹಿಳಾ ತಂಡವೂ ಈ ಸೋತು ಪದಕದಾಸೆ ಕೈಚೆಲ್ಲಿದೆ. ಫೆಬ್ರವರಿ 2015ರ ಬಳಿಕ ಭಾರತದ ಮಹಿಳಾ ತಂಡ ಇದೇ ಮೊದಲ ಬಾರಿಗೆ ಜರ್ಮನಿ ವಿರುದ್ಧ ಹಾಕಿ ಪಂದ್ಯ ಆಡಿತ್ತು. ಹಿಂದಿನ ಮುಖಾಮುಖಿಯಲ್ಲಿ ಭಾರತ 2-1ರಿಂದ ಗೆದ್ದಿತ್ತು.

ಜರ್ಮನಿಯಿಂದ ಆನ್ ಕಟಾರಿನಾ ಶ್ರೋಡರ್ ಮತ್ತು ನೈಕ್ ಲೊರೆನ್ಜ್ ಗೋಲ್ ಬಾರಿಸಿ ತಂಡದ ಗೆಲುವು ಸಾರಿದ್ದಾರೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ದೇಶಕ್ಕೆ ಬೆಳ್ಳಿ ಪದಕ ಗೆದ್ದಿದ್ದು ಬಿಟ್ಟರೆ ಭಾರತಕ್ಕೆ ಬೇರೆ ಪದಕಗಳು ಬಂದಿಲ್ಲ.

Story first published: Monday, July 26, 2021, 19:56 [IST]
Other articles published on Jul 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+