Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಕಿಯಲ್ಲಿ ನೆದರ್ಲ್ಯಾಂಡ್ಸ್‌ ವಿರುದ್ಧ ತಲೆ ಬಾಗಿದ ಭಾರತದ ಮಹಿಳೆಯರು

Tokyo Olympics 2021: India women lose Netherlands 1-5 in hockey opener

ಟೋಕಿಯೋ: ಭಾರತೀಯ ಮಹಿಳಾ ಹಾಕಿ ತಂಡ ಫೀಲ್ಡ್ ಹಾಕಿ ಸ್ಪರ್ಧೆಯಲ್ಲಿ ನೆದರ್ಲ್ಯಾಂಡ್ಸ್‌ ಮಹಿಳಾ ತಂಡದ ವಿರುದ್ಧ 5-1 ಅಂತರದಿಂದ ಸೋತಿದೆ. ವಿಶ್ವ ನಂ.1 ತಂಡ ನೆದರ್ಲ್ಯಾಂಡ್ಸ್‌ ಆರಂಭಿಕ ಪಂದ್ಯದಲ್ಲೇ ಮುನ್ನಡೆ ಸಾಧಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಭಾರತೀಯ ವನಿತಾ ಹಾಕಿ ತಂಡ ನೀರಸ ಪ್ರದರ್ಶನ ನೀಡಿದೆ.

ನೆದರ್ಲ್ಯಾಂಡ್ಸ್‌ನ ಫೆಲಿಸ್ ಆಲ್ಬರ್ಸ್ 6ನೇ ನಿಮಿಷ ಮತ್ತು 43ನೇ ನಿಮಿಷಗಳಲ್ಲಿ ಗೋಲ್ ಬಾರಿಸಿದರೆ, ಅದೇ ತಂಡದ ಮಾರ್ಗಾಟ್ ವ್ಯಾನ್ ಜೆಫೆನ್ 33ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. 45ನೇ ನಿಮಿಷದಲ್ಲಿ ಫ್ರೆಡೆರಿಕ್ ಮಾಟ್ಲಾ ಮತ್ತೊಂದು ಗೋಲ್ ಸಿಡಿಸಿದರು.

ನೆದರ್ಲ್ಯಾಂಡ್ಸ್ ಮಹಿಳಾ ತಂಡದ ವಿಜಯದ ಕೇಕೆ ಅಲ್ಲಿಗೆ ನಿಲ್ಲಲಿಲ್ಲ. ಕೈಯಾ ಜಾಕ್ವೆಲಿನ್ ವ್ಯಾನ್ ಮಾಸಕ್ಕರ್ ಅವರು 52ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಬಾರಿಸಿ ತಂಡದ ಭರ್ಜರಿ ಗೆಲುವನ್ನು ಸಾರಿದರು. ಅಲ್ಲಿಗೆ ನೆದರ್ಲ್ಯಾಂಡ್ಸ್ ಭರ್ಜರಿ 5 ಗೋಲ್‌ಗಳಿಂದ ಪಾರಮ್ಯ ಮೆರೆಯಿತು.

ಭಾರತೀಯ ವನಿತಾ ಹಾಕಿ ತಂಡದ ಪರ ಏಕಮಾತ್ರ ಗೋಲ್ ಬಾರಿಸಿ ತಂಡದ ಹಿರಿಮೆ ಸ್ವಲ್ಪಮಟ್ಟಿಗಾದರೂ ಕಾಪಾಡಿದ್ದೆಂದರೆ ಅದು ನಾಯಕಿ ರಾಂಪಾಲ್. 10ನೇ ನಿಮಿಷದಲ್ಲಿ ಗೋಲ್ ಬಾರಿಸಿದ ರಾಂಪಾಲ್ ಸೋಲಿನ ಅಂತರವನ್ನು ಕಡಿಮೆ ಮಾಡಿದ್ದಾರೆ.

Story first published: Saturday, July 24, 2021, 20:22 [IST]
Other articles published on Jul 24, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+