ಟೋಕಿಯೋ ಒಲಿಂಪಿಕ್ಸ್: ಮಾನಸಿಕ ಮತ್ತು ದೈಹಿಕವಾಗಿ ಹಾಕಿ ತಂಡ ಬಲಿಷ್ಠವಾಗಿದೆ: ಮನ್‌ದೀಪ್ ಸಿಂಗ್

ಭಾರತೀಯ ಹಾಕಿ ತಂಡದ ಸ್ಟಾರ್ ಆಟಗಾರ ಮನ್‌ದೀಪ್ ಸಿಂಗ್ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಆಡಲು ಸಜ್ಜಾಗಿದ್ದಾರೆ. ಕಳೆದ ಭಾನುವಾರ ಟೋಕಿಯೋಗೆ ಬಂದಿಳಿದ ಬಳಿಕ ಪ್ರತಿಕ್ಷಣವನ್ನು ಕೂಡ ಸಾಕಷ್ಟು ಅನಂದಿಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಆಡುವ ಮುನ್ನ ತಂಡದ ಸಾಮರ್ಥ್ಯದ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಒಲಿಂಪಿಕ್ಸ್‌ನ ಪಂದ್ಯಗಳ ಆರಂಭಕ್ಕೆ ಮುನ್ನ ಮನ್‌ದೀಪ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. "ಈವರೆಗೆ ಎಲ್ಲವೂ ತುಂಬಾ ಅದ್ಭುತವಾಗಿ ನಡೆದುಕೊಂಡು ಬಂದಿದೆ. ಕೊರೊನಾವೈರಸ್ ಪರೀಕ್ಷೆ ಹಾಗೂ ಇತರ ಕೆಲ ಪ್ರಕ್ರಿಯೆಗಳಿಂದಾಗಿ ವಿಮಾನ ನಿಲ್ದಾಣದಲ್ಲಿ ಹೆಚ್ಚು ಕಾಲ ಕಳೆಯಬೇಕಾಗಿತ್ತು. ಒಂದು ಬಾರಿ ಕ್ರೀಡಾ ಗ್ರಾಮಕ್ಕೆ ಪ್ರವೇಶಿಸಿದ ನಂತರ ಇದು ನಿಜಕ್ಕೂ ಅದ್ಭುತವಾಗಿದೆ. ಎಲ್ಲದರ ಬಗ್ಗೆಯೂ ಸಾಕಷ್ಟು ಮುತುವರ್ಜಿಯನ್ನು ವಹಿಸಲಾಗಿದೆ. ತುಂಬಾ ಸುಸಜ್ಜಿತವಾಗಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೊರೊನಾ ನೀತಿಸಂಹಿತೆಯ ಬಗ್ಗೆಯೂ ಬಹಳಷ್ಟು ಎಚ್ಚರಿಕೆಯನ್ನು ವಹಿಸಲಾಗುತ್ತಿದೆ" ಎಂದು ಮನ್‌ದೀಪ್ ಸಿಂಗ್ ಹೇಳಿದ್ದಾರೆ.
"ಕಳೆದ 15-16 ತಿಂಗಳುಗಳಿಂದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ, ಬೆಂಗಳೂರಿನಲ್ಲಿ ಬಯೋಬಬಲ್‌ನಲ್ಲಿಯೇ ಉಳಿದುಕೊಂಡಿದ್ದೇವೆ. ಹೀಗಾಗಿ ಕೋವಿಡ್ ಪ್ರೊಟೊಕಾಲ್‌ಗಳನ್ನು ಬಹಳಷ್ಟು ಪಾಲಿಸಿಕೊಂಡು ಬಂದಿದ್ದೇವೆ. ಇಲ್ಲಿಯೂ ಕೂಡ ಪ್ರತಿ ದಿನ ಬೆಳಗ್ಗೆಯೂ ನಾವು ಪರೀಕ್ಷೆಗೆ ಒಳಪಡುತ್ತಿದ್ದೇವೆ. ಅದು ತುಂಬಾ ಸುಲಭ ಪ್ರಕ್ರಿಯೆಯಾಗಿದ್ದು ಸಂಜೆಯಷ್ಟರಲ್ಲಿ ಪರೀಕ್ಷೆಯ ಫಲಿತಾಂಶಗಳು ದೊರೆಯುತ್ತದೆ" ಎಂದಿದ್ದಾರೆ ಮನ್‌ದೀಪ್ ಸಿಂಗ್.
"ಎಲ್ಲಾ ವ್ಯವಸ್ಥೆಗಳು ಕೂಡ ತುಂಬಾ ಅದ್ಭತವಾಗಿದೆ. ಆಹಾರಗಳು ಕೂಡ ತುಂಬಾ ಉತ್ತ, ಗುಣಮಟ್ಟದಲ್ಲಿದೆ. ಭಾರತೀಯ ಆಹಾರಗಳನ್ನು ಕೂಡ ಪ್ರತಿದಿನವೂ ನೀಡಲಾಗುತ್ತದೆ. ಹೀಗಾಗಿ ನಮ್ಮ ಮೊದಲ ಪಂದ್ಯಕ್ಕೂ ಮುನ್ನ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಲಿಷ್ಠವಾಗಿ ಸಿದ್ಧರಾಗಿದ್ದೇವೆ" ಎಂದು ಮನ್‌ದೀಪ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಶನಿವಾರ ಭಾರತ ಹಾಕಿ ತಂಡ ನ್ಯೂಜಿಲೆಂಡ್ ವಿರುದ್ಧ ಈ ಬಾರಿಯ ಒಲಿಂಪಿಕ್ಸ್‌ನ ಮೊದಲ ಪಂದ್ಯವನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications