ಟೋಕಿಯೋ ಒಲಿಂಪಿಕ್ಸ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮಹಿಳಾ ಹಾಕಿ ತಂಡಕ್ಕೆ ಜಯ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ಫೀಲ್ಡ್ ಹಾಕಿ ಸ್ಪರ್ಧೆಯಲ್ಲಿ ಭಾರತದ ವನಿತಾ ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶದ ಸಾಧ್ಯತೆ ಗಟ್ಟಿಯಾಗಿಸಿಕೊಂಡಿದೆ. ಶನಿವಾರ (ಜುಲೈ 31) ನಡೆದ ಗ್ರೂಪ್ 'ಎ' ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು 4-3ರ ಅಂತರದಿಂದ ಸೋಲಿಸಿರುವ ಭಾರತೀಯ ತಂಡ ಪದಕದಾಸೆ ಜೀವಂತವಾಗಿರಿಸಿಕೊಂಡಿದೆ.
ವಂದನಾ ಕಟಾರಿಯಾ ಅವರ ಹ್ಯಾಟ್ರಿಕ್ ಗೋಲ್‌ಗಳ ಸಹಾಯದಿಂದ ಭಾರತೀಯ ಮಹಿಳಾ ತಂಡ ಶನಿವಾರದ ಪಂದ್ಯದಲ್ಲಿ ಪದಕದಾಸೆ ಜೀವಂತವಾಗಿರಿಸಿಕೊಂಡಿದೆ. ಗ್ರೂಪ್ 'ಬಿ'ಯ ಕೊನೇ ಪಂದ್ಯದಲ್ಲಿ ಒಂದು ವೇಲೆ ಐರ್ಲೆಂಡ್ ತಂಡ ಗ್ರೇಟ್ ಬ್ರಿಟನ್ ವಿರುದ್ಧ ಸೋತರೆ ಅಥವಾ ಡ್ರಾ ಸಾಧಿಸಿದರೆ ಭಾರತೀಯ ತಂಡ ಕ್ವಾರ್ಟರ್ ಫೈನಲ್ ಮೂಲಕ ಸ್ಪರ್ಧಿಸಲಿದೆ.
ಒಂದು ವೇಳೆ ಗ್ರೂಪ್ ಬಿ ಕೊನೇ ಪಂದ್ಯದಲ್ಲಿ ಐರ್ಲೆಂಡ್ ಏನಾದರೂ ಗೆದ್ದರೆ ಭಾರತ ತಂಡ ಕ್ರೀಡಾಕೂಟದಿಂದ ಹೊರ ಬೀಳಲಿದೆ. ಪಂದ್ಯದಲ್ಲಿ ಭಾರತದ ವಂದನಾ ಕಟಾರಿಯಾ 49, 17, 4ನೇ ನಿಮಿಷಗಳಲ್ಲಿ ಗೋಲ್ ಬಾರಿಸಿ ಭಾರತದ ಗೆಲುವಿನ ರುವಾರಿ ಎನಿಸಿದರು.
ವಂದನಾ ಬಿಟ್ಟು ಭಾರತ ಪರ ಇನ್ನೊಂದು ಗೋಲ್ ಬಾರಿಸಿದವರೆಂದರೆ ನೇಹಾ ಗೋಯಲ್. ಗೋಯಲ್ 32ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಭರ್ಜರಿ ಮುನ್ನಡೆಗೆ ಕಾರಣರಾದರು. ದಕ್ಷಿಣ ಆಫ್ರಿಕಾ ಪರ 7ನೇ ನಿಮಿಷದಲ್ಲಿ ಮಾರಿಜೆನ್ ಮಾರೈಸ್, 16ನೇ ನಿಮಿಷದಲ್ಲಿ ಎರಿನ್ ಹಂಟರ್, 29ನೇ ನಿಮಿಷದಲ್ಲಿ ಟಾರಿನ್ ಗ್ಲಾಸ್ಬಿ ಗೋಲ್ ಬಾರಿಸಿ ಭಾರತಕ್ಕೆ ಪೈಪೋಟಿ ನೀಡಲು ನೆರವಾದರು.
ಅಂದ್ಹಾಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಪದಕ ಲಭಿಸುವ ನಿರೀಕ್ಷೆಯಿದೆ. ಮಹಿಳಾ ವಿಭಾಗದ ಡಿಸ್ಕಸ್ ಥ್ರೋನಲ್ಲಿ ಭಾರತದ ಕಮಲ್‌ಪ್ರೀತ್ ಕೌರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಶನಿವಾರ (ಜುಲೈ) ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಕೌರ್ ಅತ್ಯುತ್ತಮ ಪ್ರದರ್ಶನದೊಂದಿಗೆ ದ್ವಿತೀಯ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿ ಅಂತಿಮ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.
ಅತ್ಯುತ್ತಮ ಸಾಧನೆ
ಕೌರ್‌ಗೆ ಪದಕ ಯಾಕೆ ಖಾತ್ರಿಯೆಂದರೆ, 2016 ರಿಯೋ ಒಲಿಂಪಿಕ್ಸ್‌ಮತ್ತು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಡಿಸ್ಕಸ್ ಥ್ರೋನಲ್ಲಿ ಬಂಗಾರ ಗೆದ್ದಿದ್ದ ಸಾಂಡ್ರಾ ಪೆರ್ಕೊವಿಕ್ 63.75 ಮೀ. ಅತ್ಯುತ್ತಮ ಸಾಧನೆ ತೋರಿದ್ದಾರೆ. ಹೀಗಾಗಿ ಭಾರತಕ್ಕೆ ಪದಕದ ನಿರೀಕ್ಷೆಯಿದೆ. ಕೌರ್‌ಗೆ ಪದಕ ಸಿಕ್ಕರೆ ಇದು ಈ ಒಲಿಂಪಿಕ್ಸ್‌ನಲ್ಲಿ ಈವರೆಗೆ ಭಾರತಕ್ಕೆ ಲಭಿಸುತ್ತಿರುವ ಮೂರನೇ ಪದಕ ಇದಾಗಲಿದೆ. ಮಹಿಳಾ ವಿಭಾಗದ ಡಿಸ್ಕಸ್ ಥ್ರೋ ಫೈನಲ್ ಪಂದ್ಯ ಆಗಸ್ಟ್ 2ರಂದು ನಡೆಯಲಿದೆ ಹೀಗಾಗಿ ಕಮಲ್‌ಪ್ರೀತ್ ಕೌರ್ ಪ್ರದರ್ಶನ ತೀವ್ರ ಕುತೂಹಲ ಮೂಡಿಸಿದೆ. ಈವರೆಗಿನ ಕೌರ್ ಪ್ರದರ್ಶನ ನೋಡಿದರೆ ಭಾರತಕ್ಕೆ ಮಹಿಳಾ ಡಿಸ್ಕಸ್ ಥ್ರೋನಲ್ಲಿ ಬಹುತೇಕ ಪದಕ ಖಚಿತವೆನಿಸಿದೆ.
ಮೀರಾಬಾಯಿ ಚಾನು ಬೆಳ್ಳಿ ಪದಕ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ 9ನೇ ದಿನ ಕಳೆದರೂ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದು ಬಿಟ್ಟರೆ ಬೇರೆ ಪದಕಗಳು ಲಭಿಸಿಲ್ಲ. ಆದರೆ ಮಹಿಳಾ 69 ಕೆಜಿ ವಿಭಾಗದ ವೆಲ್ಟರ್‌ವೇಟ್ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಪದಕ ಖಾತರಿಪಡಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲವ್ಲಿನಾ ಬೊರ್ಗೊಹೈನ್ ಅವರು ಚೈನೀಸ್ ತೈಪೆಯ ಚೆನ್ ನಿಯೆನ್-ಚಿನ್ ವಿರುದ್ಧ 4-1 ಅಂತರದಲ್ಲಿ ಜಯ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications