ಹಾಕಿ: ನ್ಯೂಜಿಲೆಂಡ್ ವಿರುದ್ಧ 3-2 ಅಂತರದಿಂದ ಗೆದ್ದು ಭಾರತ ಶುಭಾರಂಭ

ಟೋಕಿಯೋ, ಜುಲೈ, 24: ಒಲಿಂಪಿಕ್ಸ್ ಕ್ರೀಡಾಕೂಟದ ಹಾಕಿ ಪಂದ್ಯಾವಳಿಯಲ್ಲಿ ಭಾರತ ಮೊದಲ ಸವಾಲನ್ನು ಯಶಸ್ವಿಯಾಗಿ ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಹಾಕಿ ತಂಡ 3-2 ಅಂತರದಿಂದ ಎದುರಾಳಿ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.
ಭಾರತ ಈ ಪಂದ್ಯದಲ್ಲಿ ಗಳಿಸಿದ ಮೂರು ಗೋಲುಗಳು ಕೂಡ ಪೆನಾಲ್ಟಿ ಕಾರ್ನರ್‌ಗಳಿಂದ ಬಂದಿದೆ. ಹರ್ಮನ್‌ಪ್ರೀತ್ ಎರಡು ಬಾರಿ ಗೋಲು ಗಳಿಸಲು ಸಫಲರಾದರೆ ಮತ್ತೊಂದು ಗೋಲನ್ನು ರೂಪಿಂದರ್ ಮೂಲಕ ಭಾರತ ತಂಡ ಗಳಿಸಿತು. ಈ ಮೂಲಕ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ಗೆಲುವು ಸಾಧಿಸಿದೆ.
ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಕೇನ್ ರಸ್ಸೆಲ್ ಮೊದಲ ಗೋಲ್ ಗಳಿಸುವ ಮೂಲಕ ಆರಂಬಿಕ ಮುನ್ನಡೆಯನ್ನು ಕಿವೀಸ್ ತಂಡ ಪಡೆದಿತ್ತು. ರೂಪಿಂದರ್ ಪಾಲ್ ಸಿಂಗ್ ಇದನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾದರು. ಮೊದಲಾರ್ಧದಲ್ಲಿ ನ್ಯೂಜಿಲೆಂಡ್ ತಂಡ ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದುಕೊಂಡಿತ್ತು. ಆದರೆ ಭಾರತ ಎಲ್ಲವನ್ನೂ ತಡೆಯುವಲ್ಲಿ ಯಶಸ್ವಿಯಾಯಿತು.
ದ್ವಿತೀಯಾರ್ಧದಲ್ಲಿ ಭಾರತದ ಪ್ರದರ್ಶನ ಮತ್ತಷ್ಟು ಉತ್ತಮವಾಗಿತ್ತು. ಪಂದ್ಯದಲ್ಲಿ ಉತ್ತಮ ನಿಯಂತ್ರಣ ಸಾಧಿಸುವಲ್ಲಿ ತಂಡ ಯಶಸ್ವಿಯಾಯಿತು. ತಂಡದ ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟ್ ಕಾರ್ನ್ ಅವಕಾಶದಲ್ಲಿ ಎರಡು ಗೋಲು ಬಾರಿಸಿ ತಮಡದ ಮುನ್ನಡೆಯನ್ನು 3-1ಕ್ಕೇರಿಸುವಲ್ಲಿ ಯಶಸ್ವಿಯಾದರು.
ಭಾರತ ದ್ವಿತೀಯಾರ್ಧದ ಉದ್ದಕ್ಕೂ ಉತ್ತಮ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಅಂತಿಮ ಹಂತದಲ್ಲಿ ಸಣ್ಣ ಎಡವಟ್ಟು ಮಾಡಿಕೊಂಡಿತು. ಇದನ್ನು ಬಳಸಿಕೊಂಡ ನ್ಯೂಜಿಲೆಂಡ್ ತಂಡ ಮತ್ತೊಂದು ಗೋಲು ಗಳಿಸುವಲ್ಲಿ ಯಶಸ್ವಿಯಾಗಿತ್ತು. 43ನೇ ನಿಮಿಷಲ್ಲಿ ನ್ಯೂಜಿಲೆಂಡ್ ತಂಡ ಈ ಗೋಲು ಬಾರಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಅಂತರ 3-2ಕ್ಕೆ ತಗ್ಗಿಸಿಕೊಳ್ಳಲು ನ್ಯೂಜಿಲೆಂಡ್ ಯಶಸ್ವಿಯಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications