ಹಾಕಿ: ಗ್ರೇಟ್ ಬ್ರಿಟನ್ ಮಣಿಸಿ ಮೊದಲ ಪದಕ ಗೆಲ್ಲಲು ಮಹಿಳಾ ತಂಡ ಸಜ್ಜು

ಟೋಕಿಯೋ, ಜುಲೈ 5: ಪುರುಷರ ಹಾಕಿ ತಂಡ ಜರ್ಮನಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದ ಮರು ದಿನವೇ ಭಾರತೀಯ ಮಹಿಳಾ ಹಾಕಿ ತಂಡವೂ ಅಗ್ನಿ ಪರೀಕ್ಷೆಗೆ ಇಳಿಯಲಿದೆ. ಇದೇ ಮೊದಲ ಬಾರಿಗೆ ಪದಕ ಗೆಲ್ಲುವ ಅವಕಾಶ ಭಾರತೀಯ ಮಹಿಳಾ ತಂಡಕ್ಕಿದೆ. ಪ್ರಥಮ ಬಾರಿಗೆ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದ ಭಾರತೀಯ ಮಹಿಳಾ ಹಾಕಿ ತಂಡ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಆದರೆ ಕಂಚಿನ ಪದಕ ಗೆಲ್ಲುವ ಅವಕಾಶ ಭಾರತೀಯ ಮಹಿಳಾ ತಂಡಕ್ಕಿದೆ. ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಿ ಈ ಪದಕ ಮುಡಿಗೇರಿಸಿಕೊಳ್ಳಲು ಭಾರತೀಯ ತಂಡ ಹವಣಿಸುತ್ತಿದೆ.
ಮೂರನೇ ಸ್ಥಾನದಕ್ಕಾಗಿ ನಡೆಯುವ ಪ್ಲೇ ಆಫ್ ಪಂದ್ಯದಲ್ಲಿ ಭಾರತ ಆಡಲಿದೆ. ಗ್ರೇಟ್ ಬ್ರಿಟನ್ ತಂಡದ ವಿರುದ್ಧ ಈ ಪಂದ್ಯ ನಡೆಯಲಿದ್ದು ಇದರಲ್ಲಿ ಗೆದ್ದರೆ ಭಾರತ ಮಹಿಳಾ ಹಾಕಿ ತಂಡ ಕಂಚಿನ ಪದಕ ಕೊರಳಿಗೇರಿಸಿಕೊಳ್ಳಲಿದೆ. ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.
ಸೆಮಿಫೈನಲ್‌ನಲ್ಲಿ ಅರ್ಜೆಂಟಿನಾ ವಿರುದ್ಧ ಸೋಲು: ಮಹಿಳಾ ಹಾಕಿ ಸೆಮಿ ಫೈನಲ್‌ನಲ್ಲಿ ಭಾರತ ಮಹಿಳೆಯರ ತಂಡ ಬಲಿಷ್ಠ ಅರ್ಜೆಂಟಿನಾ ವಿರುದ್ಧ ಸೋಲು ಕಂಡಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಮುನ್ನಡೆಯನ್ನು ಸಾಧಿಸಿದತಾದರೂ ಬಳಿಕ ಎದುರಾಳಿಗೆ ಎರಡು ಗೋಲು ಬಿಟ್ಟುಕೊಡುವ ಮೂಲಕ ಹಿನ್ನೆಡೆಯನ್ನು ಅನುಭವಿಸಿತು. ಬಳಿಕ ಪಂದ್ಯವನ್ನು ಸಮಬಲಗೊಳಿಸಲು ಸಾಕಷ್ಟು ಪ್ರಯತ್ನ ನಡೆಸಿತಾದರೂ ಅದು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಭಾರತ ಮಹಿಳೆಯರ ತಂಡ 1-2 ಅಂತರದಿಂದ ಸೋಲು ಅನುಭವಿಸಿದ್ದು ಫೈನಲ್ ಪ್ರವೇಶಿಸಲು ವಿಫಲವಾಯಿತು.
ಭಾರತ ಮಹಿಳೆಯರ ಹಾಕಿ ತಂಡ ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್‌ಗೇರುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಈ ಸಾಧನೆಯನ್ನು ಫೈನಲ್‌ಗೇರುವ ಮೂಲಕ ಮತ್ತಷ್ಟು ಸ್ಮರಣಿಯಗೊಳಿಸುವ ಪ್ರಯತ್ನವನ್ನು ರಾಣಿ ರಾಂಪಾಲ್ ನೇತೃತ್ವದ ಭಾರತ ತಂಡ ನಡೆಸಿತು. ಆದರೆ ಇದು ಸೆಮಿಫೈನಲ್‌ನಲ್ಲಿ ಗೆಲುವು ಪಡೆಯಲು ವಿಫಲವಾಗುವ ಮೂಲಕ ಭಾರತ ನಿರಾಸೆ ಅನುಭವಿಸಿದೆ. ಆದರೆ ಭಾರತ ಮಹಿಳೆಯ ಈ ಸಾಧನೆ ಭಾರತ ಹಾಕಿ ತಂಡದ ಪಾಲಿಗೆ ನಿಜಕ್ಕೂ ಅತ್ಯಂತ ಮಹತ್ವದ್ದಾಗಿದೆ. ಸೆಮಿಫೈನಲ್‌ನಲ್ಲಿ ಭಾರತ ಸೋಲು ಕಂಡಿದ್ದರೂ ಕಂಚಿನ ಪದಕಕ್ಕೆ ಮುತ್ತಿಡುವ ಅವಕಾಶ ಭಾರತ ತಂಡಕ್ಕೆ ಇನ್ನೂ ಇದೆ. ಇದಕ್ಕಾಗಿ ಶುಕ್ರವಾರ ನಡೆಯುವ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಬೇಕಿದೆ.
3ನೇ ಸ್ಥಾನದ ಮೇಲೆ ಕಣ್ಣು: ಕಂಚಿನ ಪದಕವನ್ನು ಗೆಲ್ಲಬೇಕಾದರೆ ಭಾರತ ಪ್ಲೇಆಫ್ ಪಂದ್ಯದಲ್ಲಿ ಗೆಲ್ಲಬೇಕಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೂರನೇ ಸ್ಥಾನಿಯಾಗಿ ಕ್ರೀಡಾಕೂಟವನ್ನು ಮುಗಿಸಲಿದೆ. ಹೀಗಾಗಿ ಕಂಚಿನ ಪದಕ ಭಾರತದ ಪಾಲಾಗಲಿದೆ. ಈ ಪ್ಲೇ ಆಫ್ ಪಂದ್ಯದಲ್ಲಿ ಭಾರತಕ್ಕೆ ಗ್ರೇಟ್ ಬ್ರಿಟನ್ ತಂಡ ಎದುರಾಳಿಯಾಗಿದೆ. ಕಂಚಿನ ಪದಕ್ಕಾಗಿ ನಡೆಯಲಿರುವ ಈ ಸೆಣೆಸಾಟ ಶುಕ್ರವಾರ ನಡೆಯಲಿದ್ದು ಮುಂಜಾನೆ 7 ಗಂಟೆಗೆ ಪ್ರಾರಂಭವಾಗಲಿದೆ.
ಐತಿಹಾಸಿಕ ಸಾಧನೆ ಮಾಡಿದ ಪುರುಷರ ತಂಡ: ಇನ್ನು ಕಳೆದ 41 ವರ್ಷಗಳಲ್ಲಿ ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ವಿಫಲವಾಗಿದ್ದ ಭಾರತೀಯ ಪುರುಷರ ಹಾಕಿ ತಂಡ ಈ ಬಾರಿ ಐತಿಹಾಸಿಕ ಸಾಧನೆ ಮಾಡಿದೆ. ಜರ್ಮನಿ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದ ಸೆಣೆಸಾಟದಲ್ಲಿ ಭಾರತೀಯ ಪುರುಷರ ಹಾಕಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವು ಭಾರತೀಯ ಹಾಕಿಯ ಪುನರುಜ್ಜೀವನಕ್ಕೆ ವೇದಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಭಾರತದ ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿಯಲ್ಲಿ ಭಾರತ ತಂಡದ ಸಾಧನೆಗೆ ಇಡೀ ದೇಶ ಸಂಭ್ರಮಿಸುತ್ತಿದೆ. ಈ ಸಂಭ್ರಮ ಹೆಚ್ಚಾಗಲು ಮಹಿಳಾ ತಂಡದ ಸಾಧನೆಯೂ ಸೇರಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications