Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಒಲಿಂಪಿಕ್ಸ್ ಹಾಕಿಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು!

ಜುಲೈ 30 ಮಂಗಳವಾರ, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಗೆಲುವಿನ ಓಟ ಮುಂದುವರೆಸಿದೆ. ಗುಂಪು ಹಂತದ ಮೂರನೇ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 2-0 ಗೋಲುಗಳಿಂದ ಭಾರತ ಹಾಕಿ ತಂಡ ಸೋಲಿಸಿದೆ.

ಈ ಮೂಲಕ ಭಾರತ ಪ್ಯಾರಿಸ್‌ ಒಲಿಂಪಿಕ್ಸ್‌ ಹಾಕಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಭಾರತ ತನ್ನ ಎದುರಾಳಿ ಐರ್ಲೆಂಡ್‌ ತಂಡಕ್ಕೆ ಒಂದೇ ಒಂದು ಗೋಲು ಗಳಿಸುವ ಅವಕಾಶವನ್ನು ನೀಡಲಿಲ್ಲ. ಇದಕ್ಕೂ ಮುನ್ನ ಅರ್ಜೆಂಟೀನಾ ವಿರುದ್ಧದ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿತ್ತು.

Victory for Indian hockey team in Paris Olympics 2024

ಹರ್ಮನ್‌ಪ್ರೀತ್ ಪಡೆ ಪಂದ್ಯದಲ್ಲಿ ಏರಿಯಲ್‌ಗಳನ್ನು ಬಳಸುವ ಶೈಲಿಯನ್ನು ಉಳಿಸಿಕೊಂಡಿದ್ದು, ಕಡಿಮೆ ಪಾಸ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಐರ್ಲೆಂಡ್ ಕೆಲವು ಪ್ರತಿದಾಳಿಗಳೊಂದಿಗೆ ಪುನರಾಗಮನ ಮಾಡಲು ಪ್ರಯತ್ನಿಸಿತು.

ಆದರೆ ಯಾವುದೇ ಗೋಲು ಹೊಡೆಯುವಷ್ಟು ಅಪಾಯಕಾರಿಯಾಗಲಿಲ್ಲ. ಹೆಚ್ಚುವರಿಯಾಗಿ, ಪೆನಾಲ್ಟಿ ಕಾರ್ನರ್‌ಗಳನ್ನು ಪರಿವರ್ತಿಸುವಲ್ಲಿ ಐರ್ಲೆಂಡ್‌ ವೈಫಲ್ಯವಾಯಿತು. ಹೀಗಾಗಿ ಭಾರತ ಎದುರು ಐರ್ಲೆಂಡ್‌ ಹೀನಾಯವಾಗಿ ಸೋಲಿಗೆ ಶರಣಾಗಬೇಕಾಯಿತು.

ಭಾರತಕ್ಕೆ 11ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಮೊದಲ ಗೋಲು ಬಂದಿತು. ಭಾರತದ ನಾಯಕ ಚೆಂಡನ್ನು ನೆಟ್‌ಗೆ ಹೊಡೆಯುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ.

ಇದಾದ ಬಳಿಕ 19ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಿಂದ ಮತ್ತೊಂದು ಗೋಲು ಭಾರತ ಗಳಿಸಿತ್ತು. ಹರ್ಮನ್‌ಪ್ರೀತ್ ಅವರ ಬುಲೆಟ್ ಸ್ಟ್ರೋಕ್ ಐರಿಶ್ ಡಿಫೆಂಡರ್ ಸ್ಟಿಕ್‌ಗೆ ತಾಗಿ ಗೋಲ್ ಪೋಸ್ಟ್‌ಗೆ ಅಪ್ಪಳಿಸಿತು. ಇಲ್ಲಿಂದ ಐರ್ಲೆಂಡ್‌ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಿತು.

ಈ ಪಂದ್ಯದಲ್ಲಿ 9 ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದ ಭಾರತ ಕೇವಲ ಒಂದನ್ನು ಗೋಲಾಗಿ ಪರಿವರ್ತಿಸಿತು. ಆದರೆ ಐರ್ಲೆಂಡ್‌ ತಂಡವು ಯಾವುದೇ ಪೆನಾಲ್ಟಿ ಕಾರ್ನರ್‌ನ ಲಾಭವನ್ನು ಪಡೆಯಲು ವಿಫಲವಾಯಿತು.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇದು ಎರಡನೇ ಜಯವಾಗಿದ್ದು, ಇದಕ್ಕೂ ಮುನ್ನ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು. ಇದಾದ ಬಳಿಕ ತಂಡ ಅರ್ಜೆಂಟೀನಾ ವಿರುದ್ಧ 1-1 ಡ್ರಾ ಮಾಡಿಕೊಂಡಿತು.

ಇದೀಗ ಗೆಲುವು ಭಾರತಕ್ಕೆ ಕ್ವಾರ್ಟರ್‌ಫೈನಲ್‌ಗೆ ತಲುಪ ದಾರಿ ಸುಗಮವಾಗಿದೆ. ಏಕೆಂದರೆ ಪ್ರತಿ ಗುಂಪಿನಿಂದ ಅಗ್ರ ನಾಲ್ಕು ತಂಡಗಳು ಕ್ವಾರ್ಟರ್‌ಫೈನಲ್ ಆರ್ಹತೆ ಪಡೆಯಲಿವೆ. ಆಸ್ಟ್ರೇಲಿಯಾ ಮತ್ತು ಬೆಲ್ಜಿಯಂ ಭಾರತದ ಗುಂಪಿನಲ್ಲಿದ್ದು, ಆಗಸ್ಟ್ 1 ರಂದು ಬೆಲ್ಜಿಯಂ ಮತ್ತು ಆಗಸ್ಟ್ 2 ರಂದು ಆಸ್ಟ್ರೇಲಿಯಾವನ್ನು ಭಾರತ ಎದುರಿಸಲಿದೆ.

Story first published: Tuesday, July 30, 2024, 20:19 [IST]
Other articles published on Jul 30, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+