For Quick Alerts
ALLOW NOTIFICATIONS  
For Daily Alerts

ಮೂಲ ಸೌಕರ್ಯದ ವಿರುದ್ಧ ಹೋರಾಟ; ಕರ್ನಾಟಕ ಹಾಕಿ ಕಥೆ ವ್ಯಥೆ

ಒಂದು ಕಾಲದಲ್ಲಿ ಭಾರತ ಹಾಕಿ ತಂಡದಲ್ಲಿ ಕರ್ನಾಟಕದ ಆಟಗಾರರ ಬಳಗವೇ ಇತ್ತು. ಹಾಕಿ ಪ್ರತಿಭೆಗಳ ಮೂಲ ಕೇಂದ್ರವಾಗಿದ್ದ ಕರ್ನಾಟಕ ಈಗ ರಾಷ್ಟ್ರಮಟ್ಟದಲ್ಲಿ ತನ್ನ ಛಾಪು ಮೂಡಿಸಲು ಹೆಣಗಾಡುವ ಪರಿಸ್ಥಿತಿಗೆ ತಲುಪಿದೆ.

2016ರ ರಿಯೊ ಒಲಿಂಪಿಕ್ಸ್ ಬಳಿಕ ಕರ್ನಾಟಕದ ಯಾವುದೇ ಹಾಕಿ ಆಟಗಾರರು 2020ರ ಟೋಕಿಯೋ ಮತ್ತು 2024ರ ಪ್ಯಾರಿಸ್‌ ಕ್ರೀಡಾಕೂಟಗಳಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಸ್ಟಾರ್ ಫಾರ್ವರ್ಡ್ ಆಟಗಾರ ಎಸ್‌ವಿ ಸುನೀಲ್ ಟೋಕಿಯೊ ಒಲಿಂಪಿಕ್ಸ್‌ಗಾಗಿ ತಯಾರಿ ನಡೆಸುತ್ತಿದ್ದ ಕೋರ್ ಗುಂಪಿನ ಭಾಗವಾಗಿದ್ದರು. ಆದರೆ ಅಂತಿಮ ಆಯ್ಕೆಯಿಂದ ಅವರ ಹೆಸರನ್ನು ಕೈಬಿಡಲಾಯಿತು.

Why are Karnataka players not selected for Indian hockey team

ರಾಷ್ಟ್ರೀಯ ತಂಡದಲ್ಲಿ ಕರ್ನಾಟಕ ಆಟಗಾರರು ಕಡಿಮೆ ಆಗಲು ಹಲವು ಕಾರಣಗಳಿವೆ. ಇದಕ್ಕೆ ರಾಜ್ಯದಲ್ಲಿ ಹಾಕಿ ಕ್ರೀಡೆ ಅಭಿವೃದ್ದಿಗೆ ತಳಮಟ್ಟದ ಮೂಲಸೌಕರ್ಯಗಳ ಅಸಮರ್ಪಕತೆಯು ಒಂದು ಕಾರಣ.

ಈ ಬಗ್ಗೆ ಮಾಜಿ ಒಲಿಂಪಿಕ್ಸ್ ಪದಕ ವಿಜೇತ ಮತ್ತು ಹಾಲಿ ಹಾಕಿ ಕರ್ನಾಟಕ ಕಾರ್ಯದರ್ಶಿ ಎಬಿ ಸುಬ್ಬಯ್ಯನವರ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 'ರಾಜ್ಯದಲ್ಲಿರುವ ಕಳಪೆ ಮೂಲಸೌಕರ್ಯ ಮತ್ತು ಹಳೆಯ ತರಬೇತಿ ವಿಧಾನಗಳಿಂದ ಹಾಕಿ ಕ್ರೀಡೆ ಅಭಿವೃದ್ದಿಗೆ ಅಡ್ಡಿಯಾಗುತ್ತಿವೆ' ಎಂದು ಹೇಳಿದ್ದಾರೆ.

ರಾಜ್ಯದ 31 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಉತ್ತಮ ಗುಣಮಟ್ಟದ ಹಾಕಿ (ಪಿಚ್‌) ಟರ್ಫ್‌ಗಳಿವೆ. ರಾಷ್ಟ್ರೀಯ ತಂಡಗಳಿಗೆ ಮೀಸಲಾದ ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಸೌಲಭ್ಯಗಳನ್ನು ಹೊರತುಪಡಿಸಿ, ರಾಜ್ಯದ ಉಳಿದ ಪಿಚ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಅಭ್ಯಾಸಕ್ಕೆ ಸೂಕ್ತವಾಗಿಲ್ಲ. 1990ರ ದಶಕದಲ್ಲಿ ರಾಷ್ಟ್ರೀಯ ತಂಡದಲ್ಲಿ ನನ್ನನ್ನೂ ಸೇರಿದಂತೆ ಕರ್ನಾಟಕ ಐವರು ಆಟಗಾರರಿದ್ದರು ಎಂದು ಸುಬ್ಬಯ್ಯ ತಿಳಿಸಿದ್ದಾರೆ.

ಇದಲ್ಲದೆ, ಕಳಪೆ ತರಬೇತಿಯಿಂದ ಕರ್ನಾಟಕದಲ್ಲಿ ಹೇಗೆ ಹಾಕಿ ಮೇಲೆ ಪರಿಣಾಮ ಬೀರಲಿದೆ ಎಂಬುದರ ಬಗ್ಗೆಯೂ ಸುಬ್ಬಯ್ಯ ಮಾಹಿತಿ ನೀಡಿದ್ದಾರೆ. ' ಆರಂಭದ ವರ್ಷಗಳಲ್ಲಿ ಕಲಿತ ಕೆಟ್ಟ ಅಭ್ಯಾಸಗಳನ್ನು ಸರಿಪಡಿಸುವುದು ಕಷ್ಟ. ಹಾಕಿಯಲ್ಲಿನ ಸಾಮರ್ಥ್ಯ ಉಳಿಸಲು ತಳಮಟ್ಟದಲ್ಲಿ ಉತ್ತಮ ವ್ಯವಸ್ಥೆ ಬೇಕು. ಹುಲ್ಲಿನ ಮೇಲೆ ಕಲಿತ ಕೌಶಲ್ಯಗಳು ಸಿಂಥೆಟಿಕ್ ಟರ್ಫ್‌ಗಳಿಗೆ ಪ್ರದರ್ಶನ ನೀಡುವುದು ಸುಲಭವಲ್ಲ. ಹೀಗಾಗಿ ಸಿಂಥೆಟಿಕ್ ಟರ್ಫ್‌ಗಳಂತಹ ಆಧುನಿಕ ಸೌಲಭ್ಯಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.

'ಕರ್ನಾಟಕದಲ್ಲಿ ಹಾಕಿ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಕನಿಷ್ಠ 12 ಉತ್ತಮ ಗುಣಮಟ್ಟದ ಟರ್ಫ್‌ಗಳನ್ನು ಹೊಂದಿರಬೇಕು. ಪ್ರಸ್ತುತ ಬೆಂಗಳೂರಿನಲ್ಲಿ ಕೇವಲ ಎರಡು ಸಿಂಥೆಟಿಕ್ ಪಿಚ್‌ಗಳಿವೆ. ಎಸ್‌ಎಐನಲ್ಲಿರುವ ಒಂದನ್ನು ರಾಷ್ಟ್ರೀಯ ತಂಡಗಳಿಗೆ ಕಾಯ್ದಿರಿಸಲಾಗಿದೆ. ಇನ್ನೊಂದು ಪಿಚ್ 150 ಕ್ಕೂ ಹೆಚ್ಚು ಆಟಗಾರರಿಂದ ತುಂಬಿರುತ್ತದೆ. ಇದಕ್ಕೆ ಬದಲಿ ಪಿಚ್‌ಗಳ ಅಗತ್ಯವಿದೆ' ಎಂದು ಸುಬ್ಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂತಹ ಆನೇಕ ಸವಾಲುಗಳ ಹೊರತಾಗಿಯೂ, ಇತ್ತೀಚಿನ ಕರ್ನಾಟಕದ ಹಾಕಿ ತಾರೆ ಮೊಹಮ್ಮದ್ ರಹೀಲ್ ಮೌಸೀನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. 2022ರಲ್ಲಿ ಅವರು ಎಫ್‌ಐಹೆಚ್‌ ಪ್ರೊ ಹಾಕಿ ಲೀಗ್‌ನಲ್ಲಿ ಟೀಮ್ ಇಂಡಿಯಾ ಪರ ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವನ್ನಾಡಿದರು. ಆದರೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಇದಾದ ಬಳಿಕ ಅವರು 2024ರ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಭಾರತ ತಂಡದ ಭಾಗವಾಗಿದ್ದರು. ಫೈನಲ್‌ನಲ್ಲಿ ಚೀನಾವನ್ನು 1-0 ಅಂತರದಿಂದ ಭಾರತ ಸೋಲಿಸಿತ್ತು.

Story first published: Monday, September 23, 2024, 18:15 [IST]
Other articles published on Sep 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+