ನವದೆಹಲಿ, ಆಗಸ್ಟ್ 04: ಭಾರತೀಯ ಹಾಕಿ ತಂಡದ ಆಟಗಾರ್ತಿ ಜ್ಯೋತಿ ಗುಪ್ತಾ (20) ಅವರ ಶವ ರೆವಾರಿ ರೈಲ್ವೆ ನಿಲ್ದಾಣದ ಬಳಿಯ ಹಳಿಯಲ್ಲಿ ಪತ್ತೆಯಾಗಿದೆ.
ಸೋನಿಪತ್ ಜಿಲ್ಲೆಯ ಜ್ಯೋತಿ ಅವರು ಬುಧವಾರ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಜ್ಯೋತಿ ಅವರ ಕುಟುಂಬಸ್ಥರು ತನಿಖೆಗೆ ಆಗ್ರಹಿಸಿದ್ದಾರೆ.
