ಮಹಿಳಾ ಹಾಕಿ ವಿಶ್ವಕಪ್: ಇಟಲಿ ಸೋಲಿಸಿದ ಭಾರತ ಕ್ವಾ.ಫೈನಲ್ ಗೆ

ಲಂಡನ್, ಆಗಸ್ಟ್ 1: ಇಂಗ್ಲೆಂಡ್ ನ ಲಂಡನ್ ನಲ್ಲಿರುವ ಲೀ ವ್ಯಾಲಿ ಹಾಕಿ & ಟೆನಿಸ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಹಾಕಿ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಇಟಲಿಯನ್ನು 3-0 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಭಾರತ ತಂಡ ಗುರುವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರುರಿಸಲಿದೆ. ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧ ಸೋತು ಪಂದ್ಯದಿಂದ ಹೊರ ನಡೆಯುವ ಭೀತಿ ಅನುಭವಿಸಿತ್ತು. ಆದರೆ ಅನಂತರ ಅಮೆರಿಕಾ ಎದುರಿನ ಪಂದ್ಯವನ್ನು ಸಮಬಲ ಗೊಳಿಸಿಕೊಂಡಿದ್ದ ಭಾರತ ಪ್ರಶಸ್ತಿಯಾಸೆಯನ್ನು ಜೀವಂತವಾಗಿರಿಸಿಕೊಂಡಿತ್ತು.
ಐರ್ಲೆಂಡ್ ಎದುರಿನ ಪಂದ್ಯ ಸೋತರೆ ಭಾರತ ಟೂರ್ನಿಯಿಂದ ಹೊರ ಬೀಳುವುದರಿಲ್ಲಿತ್ತು. ಆದರೆ ಎಚ್ಚರಿಕೆ ಆಟವಾಡಿದ ಭಾರತದ ವನಿತೆಯರು ಪಂದ್ಯ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು.
ಭಾರತದ ಲಾಲ್ರೆಂಸಿಯಾಮಿ ಮೊದಲು ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಪಂದ್ಯ ಆರಂಭಗೊಂಡ 9ನೇ ನಿಮಿಷದಲ್ಲಿ ಲಾಲ್ರೆಂಸಿಯಾಮಿ ಗೋಲ್ ದಾಖಲಿಸಿದರು. 45ನೇ ನಿಮಿಷದ ಹೊತ್ತಿಗೆ ನೇಹಾ ಗೋಯಲ್ ಎರಡನೇ ಗೋಲ್ ಬಾರಿಸಿ ಭಾರತಕ್ಕೆ 2-0ಯ ಮುನ್ನಡೆ ಕೊಡ್ಡರು. ಅದಾಗಿ ಪಂದ್ಯ ಮುಗಿಯಲು ಇನ್ನು 5 ನಿಮಿಷಗಳಿದ್ದಾಗ ವಂದನಾ ಕಟಾರಿಯಾ ಮೂರನೇ ಗೋಲ್ ಸಿಡಿಸಿ ಭಾರತದ ಭರ್ಜರಿ ಮುನ್ನಡೆಗೆ ಕಾರಣರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications