WPL 2024: 16 ವರ್ಷದಲ್ಲಿ ವಿರಾಟ್ ಕೊಹ್ಲಿ ಮಾಡದ ಸಾಧನೆಯನ್ನು ಎರಡೇ ವರ್ಷದಲ್ಲಿ ಸ್ಮೃತಿ ಮಾಡಿದ್ದು ಹೇಗೆ?
ನಿಜಕ್ಕೂ ಈ ಫೋಟೋ, ಈ ವಿಡಿಯೋವನ್ನೇ ನೋಡಲು ಅಭಿಮಾನಿಗಳು ಸತತ 16 ವರ್ಷದಿಂದ ತಪಸ್ಸು ಮಾಡಿದ್ದರು. ಅಂತಿಮವಾಗಿ ಈ ಕ್ಷಣಕ್ಕೆ ದೆಹಲಿಯ ಅರುಣ್ ಜೆಟ್ಲಿ ಮೈದಾನ ಸಾಕ್ಷಿಯಾಗಿದೆ. ರಿಚಾ ಘೋಷ್ ಚೆಂಡನ್ನು ಬೌಂಡರಿಗೆ ಅಟ್ಟುತ್ತಿದ್ದಂತೆ ಇತ್ತ ಅಭಿಮಾನಿಗಳು ಸಂಭ್ರಮ ಮುಗಿಲು ಮುಟ್ಟಿತ್ತು.
ಸತತ 16 ವರ್ಷದಿಂದ ಪುರಷರ ತಂಡ ಮಾಡದ ಸಾಧನೆಯನ್ನು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ವನಿತೆಯರು ಮಾಡಿ ತೋರಿಸಿದ್ದಾರೆ. ಈ ಸಂಭ್ರಮವನ್ನು ಅಭಿಮಾನಿಗಳ ಪಟಾಕಿ ಹಚ್ಚಿ ಸಂಭ್ರಮಿಸಿದರು. ನಿಜಕ್ಕೂ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

ಆರ್‌ಸಿಬಿಗೆ ವಿರಾಟ್ ಕೊಹ್ಲಿ ಎಂಟ್ರಿ ನೀಡಿದಾಗ ಇನ್ನು ಚಿಗುರು ಮೀಸೆ ಆತನ ಮುಖದ ಮೇಲೆ ಬೆಳೆದಿರಲಿಲ್ಲ. ಈಗಿನ ಸ್ಟಾರ್ ಗಿರಿ ಸಹ ಆತನ ಪಕ್ಕಕೆ ಇರಲಿಲ್ಲ. ಆದರೆ ತಂಡ ಯಂಗ್ ಪ್ಲೇಯರ್ ಮೇಲೆ ನಂಬಿಕೆ ಇಟ್ಟು ತಂಡದಲ್ಲಿ ಸ್ಥಾನ ನೀಡಿತು. ವಿರಾಟ್ ಸಹ ಈ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ತಂಡಕ್ಕೆ ಹಾಗೂ ವ್ಯಕ್ತಿಕ ಆಟದ ಗುಣಮಟ್ಟವನ್ನು ಸುಧಾರಿಸಿಕೊಂಡರು.
ಸ್ಟಾರ್‌ಗಳ ತವರು
ಆರ್‌ಸಿಬಿ ಎಂದರೆ ಸ್ಟಾರ್ ಆಟಗಾರರ ತವರು ಮನೆ ಎಂದರೆ ತಪ್ಪಾಗಲಾರದು. ಆರಂಭದ ವರ್ಷದಿಂದ ಹಿಡಿದು ಈಗಲೂ ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರ ಗೊಂಚಲೇ ಇದೆ. ಆರ್‌ಸಿಬಿ ತಂಡದ ಬ್ಯಾಟಿಂಗ್‌ಗೆ ಶಕ್ತಿ ತುಂಬಿದ ಪ್ಲೇಯರ್ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್. ಕ್ರಿಸ್ ಗೇಲ್ ಅಕ್ಷರಶಃ ಆರ್‌ಸಿಬಿ ಪರ ಸುನಾಮಿ ಪ್ರದರ್ಶನ ನೀಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಪ್ಲೇಯರ್ ಎಬಿಡಿ ವಿಲಿಯರ್ಸ್ ಸಹ ಈ ತಂಡದೊಂದಿಗೆ ಸಂಬಂಧ ಹೊಂದಿದ್ದಾರೆ. ಇವರ ಆಟಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಹೀಗಾಗಿ ಈ ಸ್ಟಾರ್ ಆಟಗಾರರು ತಮ್ಮ ಎರಡನೇ ತವರು ಬೆಂಗಳೂರು ಎಂದೇ ಹೇಳಿಕೊಳ್ಳುತ್ತಾರೆ.

ಮೂರು ಬಾರಿ ಫೈನಲ್‌ಗೆ ಅರ್ಹತೆ ಪಡೆದಿರುವ ಆರ್‌ಸಿಬಿ
ಆರ್‌ಸಿಬಿ ಫೈನಲ್‌ಗೆ ಮೂರು ಬಾರಿ ಎಂಟ್ರಿ ನೀಡಿದೆ. ಮೂರು ಬಾರಿ ನಿರಾಸೆಯನ್ನು ಅನುಭವಿಸಿದೆ. ಸ್ಟಾರ್‌ಗಳ ದಂಡೇ ಇದ್ದರೂ ಸಹ ಮಹತ್ವದ ಪಂದ್ಯದಲ್ಲಿ ಸಂಘಟಿತ ಆಟ ಕಾಣಿಸದೇ ಸೋಲು ಕಂಡಿದೆ. ಇಷ್ಟಾದ್ರೂ ಆರ್‌ಸಿಬಿ ಅಭಿಮಾನಿಗಳು ಎಂದಿಗೂ ತಮ್ಮ ತಂಡವನ್ನು ಬಿಟ್ಟು ಕೊಡಲಿಲ್ಲ. ಸೋತರೂ, ಮುಂದಿನ ಬಾರಿಯಾದರೂ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಆತ್ಮವಿಶ್ವಾಸದಿಂದಲೇ ಸಪೋರ್ಟ್ ಮಾಡ್ತಾ ಇದ್ದಾರೆ. ಆರ್‌ಸಿಬಿ ಅಭಿಮಾನಿಗಳ ಹರಕೆ ಕೊನೆಗೂ ವನಿತೆಯರು ತೀರಿಸಿದ್ದಾರೆ.
ವಿರಾಟ್ ಮಾಡದನ್ನು ಸ್ಮೃತಿ ಮಾಡಿದ್ದು ಹೇಗೆ
ಈ ಒಂದು ಪ್ರಶ್ನೆ ಎಲ್ಲರ ಮನದಲ್ಲಿ ಮೂಡುವುದು ಸಹಜ. ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಪರ 16 ಬಾರಿ ಕಣಕ್ಕೆ ಇಳಿದು ಮಾಡದ ಸಾಧನೆಯನ್ನು ಸ್ಮೃತಿ ಎರಡನೇ ಪ್ರಯತ್ನದಲ್ಲೇ ಹೇಗೆ ಮಾಡಿದರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಉತ್ತರ ಸಿಂಪಲ್ ಆಗಿದೆ. ಮಹಿಳಾ ಆರ್‌ಸಿಬಿ ತಂಡದ ಸಂಘಟಿತ ಆಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಭಾರತದ ಆಟಗಾರ್ತಿಯರು ಪ್ರತಿಯೊಂದು ಜಯದಲ್ಲಿ ತಮ್ಮದೇ ಪಾತ್ರವನ್ನು ವಹಿಸಿದ್ದಾರೆ. ಹೀಗಾಗಿ ಆರ್‌ಸಿಬಿ ಈ ಬಾರಿ ಕಪ್ ಗೆಲ್ಲುವಲ್ಲಿ ಸಾಧ್ಯವಾಗಿದೆ.
ಮಹಿಳೆಯರನ್ನು ನೋಡಿ ಏನ್ ಕಲಿಬೇಕು
ಆರ್‌ಸಿಬಿ ಪುರುಷರ ತಂಡ ಮಹಿಳಾ ತಂಡವನ್ನು ನೋಡಿ ಕಲಿಯಬೇಕಾದ ಅಂಶ ಎಂದರೆ, ಭಾರತೀಯ ಯುವ ಆಟಗಾರರಿಗೆ ಅವಕಾಶ ನೀಡಿದರೆ, ನಿಶ್ಚಿತವಾಗಿಯೂ ಅದು ಫಲ ನೀಡುತ್ತದೆ. ಇದರಿಂದ ಸ್ಟಾರ್ ಆಟಗಾರರ ಮೇಲೆ ಒತ್ತಡ ಸಹ ಬೀಳುವುದಿಲ್ಲ. ಸಂಘಟಿತ ಆಟವನ್ನು ಆಡಲು ಸಾಧ್ಯವಾಗುತ್ತದೆ. 2024 ಆರ್‌ಸಿಬಿ ಪಾಲಿಗೆ ಹರ್ಷದವನ್ನು ಮಹಿಳಾ ಆಟಗಾರ್ತಿಯರು ಮಾಡಿದ್ದಾರೆ. ಈಗ ಈ ಸಾಧನೆಯನ್ನು ಪುರುಷರ ತಂಡ ಮಾಡುವುದು ಬಾಕಿ ಇದೆ. ಈಗ ಎಲ್ಲರ ಕಣ್ಣು ಐಪಿಎಲ್‌ನತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications