ಯೂತ್ ಒಲಿಂಪಿಕ್: ಭಾರತದ ಪುರುಷರ, ಮಹಿಳೆಯರ ಹಾಕಿ ತಂಡಕ್ಕೆ ಬೆಳ್ಳಿ

ಬ್ಯೂನಸ್ ಏರ್ಸ್, ಅಕ್ಟೋಬರ್ 15: ಅರ್ಜೆಂಟೀನಾದ ಬ್ಯೂನಸ್ ಏರ್ಸ್ ನಲ್ಲಿ ನಡೆಯುತ್ತಿರುವ 2018ನೇ ಯೂತ್ ಒಲಿಂಪಿಕ್ ಗೇಮ್ಸ್ ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡ ಬೆಳ್ಳಿ ಪದಕ ಜಯಿಸಿದೆ. ಪುರುಷರು ಮಲೇಷ್ಯಾ ವಿರುದ್ಧ, ಮಹಿಳೆಯರು ಅರ್ಜೆಂಟೀನಾ ವಿರುದ್ಧ ಫೈನಲ್ ನಲ್ಲಿ ಸೆಣಸಾಡಿದರು.
ಸೋಮವಾರ (ಅಕ್ಟೋಬರ್ 15) ನಡೆದ 18ರ ಹರೆಯದವರ ಹಾಕಿ ಫೈನಲ್ ಸ್ಪರ್ಧೆಯಲ್ಲಿ ಪುರುಷರ ತಂಡ ಮಲೇಷ್ಯಾ ಎದುರು 2-4ರ ಸೋಲನುಭವಿಸಿದರೆ, ಮಹಿಳಾ ತಂಡ ಆತಿಥೇಯ ಅರ್ಜೆಂಟೀನಾ ಎದುರು 1-3ರ ಹಿನ್ನಡೆ ಅನುಭವಿಸಿತು. ವನಿತಾ ವಿಭಾಗದಲ್ಲಿ ಚಿನ್ನ ಗೆದ್ದ ಅರ್ಜೆಂಟೀನಾ ಯೂತ್ ಒಲಿಂಪಿಕ್ಸ್ ನಲ್ಲಿ ಬಂಗಾರ ಜಯಿಸಿದ ಇತಿಹಾಸ ನಿರ್ಮಿಸಿತು.
ಮಹಿಳಾ ವಿಭಾಗದಲ್ಲಿ ಅರ್ಜೆಂಟೀನಾ ಪರ ಗಿಯೆಲ್ಲಲ್ಲಾ ಪಾಲೆಟ್, ಸೋಫಿಯಾ ರಾಮಾಲ್ಲೊ ಮತ್ತು ಬ್ರಿಸಾ ಬ್ರುಗ್ಸೆಸರ್ ಗೋಲ್ ಬಾರಿಸಿ ಐತಿಹಾಸಿಕ ಚಿನ್ನ ಗೆಲ್ಲಲು ಕಾರಣರಾದರೆ, ಭಾರತ ಪರ ಮುಮ್ತಾಝ್ ಖಾನ್ ಗೋಲ್ ಬಾರಿಸಿ ಅಂತರ ಕಿರಿದುಗೊಳಿಸಿದರು.
Story first published: Monday, October 15, 2018, 16:16 [IST]
Other articles published on Oct 15, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications