Pro Kabaddi: 11ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿ ಅಕ್ಟೋಬರ್ 18ರಿಂದ ಆರಂಭ
ಮುಂಬೈ: ಪ್ರೊ ಕಬಡ್ಡಿ ಲೀಗ್‌ನ ಆಯೋಜಕರಾದ ಮಶಾಲ್ ಸ್ಪೋರ್ಟ್ಸ್ ಪಿಕೆಎಲ್ 11ನೇ ಆವೃತ್ತಿಯು 2024ರ ಅಕ್ಟೋಬರ್ 18ರಂದು ಪ್ರಾರಂಭವಾಗಲಿದೆ ಎಂದು ಘೋಷಿಸಿದೆ. ಈ ವರ್ಷದ ಆರಂಭದಲ್ಲಿ ಪ್ರೊ ಕಬಡ್ಡಿ ಲೀಗ್‌ನ ಹತ್ತು ಋುತುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ವಿಶ್ವದ ಅತಿದೊಡ್ಡ ಕಬಡ್ಡಿ ಲೀಗ್ ಅಕ್ಟೋಬರ್‌ನಲ್ಲಿ ಮತ್ತೊಂದು ಆವೃತ್ತಿಯನ್ನು ಆರಂಭಿಸಲಿದೆ.
11ನೇ ಆವೃತ್ತಿಯಲ್ಲಿ ಪ್ರೊ ಕಬಡ್ಡಿ ಲೀಗ್ ಮೂರು ನಗರಗಳ ಕಾರವಾನ್ ಸ್ವರೂಪದಲ್ಲಿ ನಡೆಯಲಿದೆ. 2024ರ ಆವೃತ್ತಿಯು ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿಅಕ್ಟೋಬರ್ 18ರಂದು ಪ್ರಾರಂಭವಾಗಲಿದ್ದು, ನವೆಂಬರ್ 10ರಿಂದ ಎರಡನೇ ಚರಣಕ್ಕಾಗಿ ನೋಯ್ಡಾ ಒಳಾಂಗಣ ಕ್ರೀಡಾಂಗಣ ಸಿದ್ಧವಾಗಿದೆ. ಮೂರನೇ ಚರಣ ಡಿಸೆಂಬರ್ 3ರಿಂದ ಪುಣೆಯ ಬಾಳೆವಾಡಿ ಕ್ರೀಡಾಂಗಣದಲ್ಲಿನಡೆಯಲಿದೆ. ಪ್ಲೇಆಫ್‌ಗಳ ದಿನಾಂಕಗಳು ಮತ್ತು ಸ್ಥಳವನ್ನು ಇನ್ನು ನಿರ್ಧರಿಸಲಾಗಿಲ್ಲ.

8 ಆಟಗಾರರಿಗೆ 1 ಕೋಟಿ ರೂ. ಹೆಚ್ಚು
ಪ್ರೊ ಕಬಡ್ಡಿ ಲೀಗ್ ಸೀಸನ್ 11ರ ಹರಾಜು 2024ರ ಆಗಸ್ಟ್ 15ರಿಂದ 16ರವರೆಗೆ ಮುಂಬೈನಲ್ಲಿ ನಡೆಯಿತು, ಎಂಟು ಆಟಗಾರರು 1 ಕೋಟಿ ರೂ.ಗೆ ಬೇರೆ ಬೇರೆ ತಂಡಗಳಿಗೆ ಮಾರಾಟವಾಗಿದ್ದಾರೆ.
11ನೇ ಆವೃತ್ತಿಯ ದಿನಾಂಕಗಳನ್ನು ಘೋಷಿಸಿದ ಬಳಿಕ ಪ್ರೊ ಕಬಡ್ಡಿ ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ ಮಾತನಾಡಿದರು. ಟೂರ್ನಿಯ ವೇಳಾಪಟ್ಟಿ ಹಾಗೂ ಸ್ಥಳಗಳನ್ನು ಘೋಷಿಸಲಾಗಿದೆ. ಯಶಸ್ವಿಯಾಗಿ 10 ಆವೃತ್ತಿಗಳನ್ನು ಪೂರ್ಣಗೊಳಿಸಿದ ಪಿಕೆಎಲ್, 11ನೇ ಆವೃತ್ತಿಯನ್ನು ಹೊಸ ಮೈಲುಗಲ್ಲು ಮುಟ್ಟಲಿದೆ. ವಿಶ್ವದಲ್ಲಿ ಕಬಡ್ಡಿ ಕ್ರೀಡೆ ಬೆಳವಣಿಗೆಗೆ ಈ ಲೀಗ್ ಪೂರಕವಾಗಿದೆ ಎಂದು ತಿಳಿಸಿದ್ದಾರೆ.
ಮಶಾಲ್ ಸ್ಪೋರ್ಟ್ಸ್ ಮತ್ತು ಡಿಸ್ನಿ ಸ್ಟಾರ್ ಪ್ರೊ ಕಬಡ್ಡಿ ಲೀಗ್‌ನ್ನು ಭಾರತದ ಅತ್ಯಂತ ಯಶಸ್ವಿ ಕ್ರೀಡಾ ಲೀಗ್‌ಗಳಲ್ಲಿಒಂದನ್ನಾಗಿ ನಿರ್ಮಿಸಿವೆ. ಪಿಕೆಎಲ್‌ನಲ್ಲಿ ತಮ್ಮ ಅನೇಕ ಆಟಗಾರರ ಭಾಗವಹಿಸುವಿಕೆ ನೋಡಿದ ನಂತರ, ಹಲವಾರು ಕಬಡ್ಡಿ ಆಡುವ ರಾಷ್ಟ್ರಗಳು ತಮ್ಮ ದೇಶೀಯ ಕಬಡ್ಡಿ ಕಾರ್ಯಕ್ರಮಗಳನ್ನು ಬಲಪಡಿಸಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications