ಪ್ರೋ ಕಬಡ್ಡಿ: ಮುಂಬೈ ಮಣಿಸಿ ಕಪ್ ಎತ್ತಿದ ಜೈಪುರ
ಮುಂಬೈ, ಸೆ.1: ಸ್ಟಾರ್ ಸ್ಪೋರ್ಟ್ ಪ್ರೋ ಕಬಡ್ಡಿ ಲೀಗ್ ಭರ್ಜರಿ ಯಶಸ್ಸು ಕಂಡಿದೆ. ಸೆಲೆಬ್ರಿಟಿಗಳನ್ನು ಸೂಜಿಗಲ್ಲಿನಂತೆ ಸೆಳೆದ ಕಬಡ್ಡಿ ಪಂದ್ಯಾವಳಿಗಳು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. ಮೊಟ್ಟ ಮೊದಲ ಕಬಡ್ಡಿ ಲೀಗ್ ನ ಅಂತಿಮ ಹಣಾಹಣಿಯಲ್ಲಿ ಯು ಮುಂಬಾ ತಂಡವನ್ನು ಅಭಿಷೇಕ್ ಬಚ್ಚನ್ ಒಡೆತನದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಭರ್ಜರಿಯಾಗಿ ಸೋಲಿಸಿ ಕಪ್ ಎತ್ತಿ ಕುಣಿದಾಡಿದೆ.
ಸೆಮಿಫೈನಲ್ ನಲ್ಲಿ ತಂತ್ರಗಾರಿಕೆ ಮೂಲಕವೇ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿ ಫೈನಲ್ ತಲುಪಿದ್ದ ಯೂ ಮುಂಬಾ ತಂಡ ಅಂತಿಮ ಹಣಾಹಣಿಯಲ್ಲಿ ಮಂಕಾಯಿತು. ಬಲಿಷ್ಠ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ 35-24 ಅಂತರದಿಂದ ಗೆಲುವು ಸಾಧಿಸಿ ವಿಜಯೋತ್ಸವ ಆಚರಿಸಿತು.[ಐಪಿಎಲ್ ನಂತರ ಸಚಿನ್ ರಿಂದ 'ಐಎಸ್ಎಲ್' ಕಿಕ್]
ಮುಂಬೈನ ಎಎಸ್ ಸಿಐ ಸ್ಟೇಡಿಯಂನಲ್ಲಿ ನಡೆದ ಪಂದ್ಯಾವಳಿಯನ್ನು ನೋಡಲು ಉದ್ಯಮಿ ನೀತು ಅಂಬಾನಿ, ನಟಿ ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಅನೇಕ ಗಣ್ಯರು ಬಂದಿದ್ದರು. ಮುಂಬೈ ತಂಡವನ್ನು ತವರು ನೆಲದಲ್ಲೇ ಬಗ್ಗುಬಡಿದ ಜೈಪುರ ತಂಡ ತನ್ನ ಡಿಫೆನ್ಸ್ ಶಕ್ತಿಯ ಪ್ರದರ್ಶನ ನೀಡಿ ಕಪ್ ಎತ್ತಿದರು.
ರೋಚಕ ಪಂದ್ಯಾವಳಿ ನಿರೀಕ್ಷೆ ಇದ್ದ ಪ್ರೇಕ್ಷಕರಿಗೆ ಎರಡನೇ ಅವಧಿಯಲ್ಲಿ ಜೈಪುರದ ಕೈ ಮೇಲಾಗುತ್ತಿರುವುದು ಸ್ಪಷ್ಟವಾಯಿತು. ಮುಂಬೈನ ಶಬ್ಬೀರ್ ಬಾಪು ಗಾಯಾಳುವಾಗಿದ್ದು, ನಾಯಕ ಅನೂಪ್ ಕುಮಾರ್ ಏಕೈಕ ಯಶಸ್ವಿ ರೈಡರ್ ಎನಿಸಿದ್ದು ತಂಡಕ್ಕೆ ಮುಳುವಾಯಿತು. ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ವಿಜಯೋತ್ಸವ, ಅಭಿಷೇಕ್ ಬಚ್ಚನ್ ಅವರ ಟ್ವೀಟ್ ಗಳನ್ನು ಮುಂದೆ ನೋಡಿ...

ಪಿಂಕ್ ಪ್ಯಾಂಥರ್ಸ್ ತಂಡ ಜೊತೆ ಅಭಿಷೇಕ್ ಬಚ್ಚನ್
ಸ್ಟಾರ್ ಸ್ಫೋರ್ಟ್ಸ್ ಪ್ರಾಯೋಜಕತ್ವದ ಪ್ರೋ ಕಬಡ್ಡಿ ಲೀಗ್ ನ ಮೊದಲ ಚಾಂಪಿಯನ್ ಜೈಪುರದ ಪಿಂಕ್ ಪ್ಯಾಂಥರ್ಸ್ ತಂಡದ ಜೊತೆ ತಂಡದ ಒಡೆಯ ಅಭಿಷೇಕ್ ಬಚ್ಚನ್.

ನವನೀತ್ ಗೌತಮ್ ಜೊತೆ ಅಭಿಷೇಕ್
ಚಿತ್ರದಲ್ಲಿ : ನಾಯಕ ನವನೀತ್ ಗೌತಮ್ ಅವರು ಅಣ್ಣ ಎಂದು ಕರೆಯುವ ತಂಡದ ಒಡೆಯ ಅಭಿಷೇಕ್ ಅವರು ಎತ್ತಿ ಸಂಭ್ರಮಿಸಿದರು.
ಎಲ್ಲರಿಗೂ ಥ್ಯಾಂಕ್ಸ್ ಎಂದ ಅಭಿಷೇಕ್
ಜೈಪುರ ತಂಡಕ್ಕೆ ಶುಭಹಾರೈಸಿದ ಎಲ್ಲರಿಗೂ ಥ್ಯಾಂಕ್ಸ್ ಎಂದು ಟ್ವೀಟ್ ಮಾಡಿದ ಅಭಿಷೇಕ್ ಬಚ್ಚನ್

ಜೈಪುರ ತಂಡಕ್ಕೆ ಜೈ ಎಂದ ಎದುರಾಳಿ ನಾಯಕ
ಜೈಪುರ ತಂಡದ ಡಿಫೆನ್ಸ್ ಕಂಡು ಮೆಚ್ಚುಗೆ ಮಾತನಾಡಿದ ಎದುರಾಳಿ ನಾಯಕ ಅನೂಪ್ ಕುಮಾರ್, ಜೈಪುರ ತನ್ನ ರೈಡ್ ಹಾಗೂ ಡಿಫೆನ್ಸ್ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡಿತು. ಜೊತೆಗೆ ದ್ವಿತೀಯಾರ್ಧದಲ್ಲಿ ಸಮಯದ ಸದ್ಬಳಕೆ ಮಾಡಿಕೊಂಡು ನಮ್ಮನ್ನು ಮಣಿಸಿದರು ಎಂದಿದ್ದಾರೆ.

ಕಬಡ್ಡಿ ನೋಡಲು ಸೆಲೆಬ್ರಿಟಿಗಳ ದಂಡು
ಕಬಡ್ಡಿ ನೋಡಲು ಸೆಲೆಬ್ರಿಟಿಗಳ ದಂಡು ಮುಂಬೈ ನಿವಾಸಿ ಅಭಿಷೇಕ್ ಬಚ್ಚನ್ ಅವರು ಜೈಪುರ ತಂಡ ಖರೀದಿಸಿ ಗೆಲುವು ಸಾಧಿಸಿದ್ದಕ್ಕೆ ಬಾಲಿವುಡ್ ತಾರೆಯರು ಮೆಚ್ಚುಗೆ ಸೂಚಿಸಿದ್ದಾರೆ. ಅನುಪಮ್ ಖೇರ್, ಬಿಪಾಶಾ ಬಸು, ಉದ್ಯಮಿ ನೀತೂ ಅಂಬಾನಿ ಕೂಡಾ ಜೈಪುರ ತಂಡದ ಜೊತೆ ಕಾಣಿಸಿಕೊಂಡಿದ್ದರು, ಸಚಿನ್ ಕೂಡಾ ಮುಂಬೈ ಹಾಗೂ ಜೈಪುರ ಎರಡಕ್ಕೂ ಜೈಕಾರ ಹಾಕಿದ್ದರು

ಅಂತಿಮ ಪಂದ್ಯದ ಸ್ಕೋರ್ ಕಾರ್ಡ್
ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಯು ಮುಂಬಾ ತಂಡದ ಅಂತಿಮ ಹಣಾಹಣಿಯ ಸ್ಕೋರ್ ಕಾರ್ಡ್
ಕನಸಿನಂತೆ ಎಲ್ಲವೂ ನಡೆದುಹೋಯಿತು
ಪ್ರೋ ಕಬಡ್ಡಿ ಲೀಗ್ ಗೆದ್ದಿದ್ದೇನೆ ಎಂಬುದು ಇನ್ನೂ ಕನಸಿನಂತೆ ಇದೆ. ಹುಡುಗರ ಪರಿಶ್ರಮ, ಕೋಚ್ ಗಳ ತಂತ್ರಗಾರಿಕೆಗೆ ನಾನು ತಲೆದೂಗುತ್ತೇನೆ ಎಂದು ಅಭಿಷೇಕ್ ಟ್ವೀಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications