PKL 2025: ಅಲಿರಾಜ್ ಮಿಂಚಿನ ಆಟ: ಬುಲ್ಸ್‌ಗೆ ಭರ್ಜರಿ ಜಯ
ಸ್ಟಾರ್ ಆಲ್‌ರೌಂಡರ್ ಅಲಿರೆಜಾ ಮಿರ್ಜಾಯನ್ ಅವರ ಆಲ್‌ರೌಂಡರ್ ಆಟದ ಪರಿಣಾಮ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಮತ್ತೊಂದು ಗೆಲುವು ದಾಖಲಿಸಿದೆ. ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 7 ಅಂಕಗಳ ಅಂತರದಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಬುಲ್ಸ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವಿನ ನಗೆ ಬೀರಿದೆ.
ವೈಜಾಗ್‌ನ ವಿಶ್ವನಾಥ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 40-33 ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಆರಂಭದಿಂದಲೂ ಬುಲ್ಸ್ ಭರ್ಜರಿ ಆಟದ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಿಂಚಿತು.

ಮಾಜಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ಆರಂಭದಿಂದಲೂ ಅಮೋಘ ಆಟದ ಪ್ರದರ್ಶನ ನೀಡಿತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಮಬಲದ ಪ್ರದರ್ಶನ ನೀಡಿದ ಬುಲ್ಸ್ ಅಂಕಗಳನ್ನು ಕಲೆ ಹಾಕುತ್ತಾ ಸಾಗಿತು. ಇದೇ ಅವಧಿಯಲ್ಲಿ ಬುಲ್ಸ್ ಹಾಗೂ ಸ್ಟೀಲರ್ಸ್ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು. ಬುಲ್ಸ್ ಈ ವೇಳೆ ದಾಳಿಯಲ್ಲಿ 10, ಟ್ಯಾಕಲ್‌ನಲ್ಲಿ 7 ಅಂಕವನ್ನು ಸೇರಿಸಿತು.
ಅಲಿರೆಜಾ ಮಿರ್ಜಾಯನ್ ಅಬ್ಬರ
ಎರಡನೇ ಅವಧಿಯ ಆಟದಲ್ಲೂ ಬುಲ್ಸ್ ಸೊಗಸಾದ ಪ್ಲ್ಯಾನಿಂಗ್ ಮೂಲಕ ಅಂಗಳಕ್ಕೆ ಎಂಟ್ರಿ ನೀಡಿತು. ಈ ವೇಳೆ ಬುಲ್ಸ್ ಒಮ್ಮೆ ಎದುರಾಳಿ ತಂಡದ ಅಂಗಳವನ್ನು ಖಾಲಿ ಮಾಡಿತು. ಎರಡನೇ ಅವಧಿಯಲ್ಲಿ ಬುಲ್ಸ್ 19-15 ರಿಂದ ಹರಿಯಾಣ ಸ್ಟೀಲರ್ಸ್ ತಂಡದ ವಿರುದ್ಧ ಮುನ್ನಡೆ ಕಾಯ್ದುಕೊಂಡಿತು. ಈ ಅವಧಿಯಲ್ಲಿ ಬೆಂಗಳೂರು ತಂಡದ ಆಲ್‌ರೌಂಡರ್ ಆಟ ಅಂಕ ಗಳಿಕೆಯಲ್ಲಿ ಮುನ್ನಡೆ ಸಾಧಿಸುವಂತೆ ಮಾಡಿತು. ಬೆಂಗಳೂರು ತಂಡದ ಸ್ಟಾರ್ ರೈಡರ್ ಅಲಿರೆಜಾ ಮಿರ್ಜಾಯನ್ 18 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 12 ಟಚ್ ಪಾಯಿಂಟ್ ಗಳಿಸಿದರು. ಡಿಫೆಂಡರ್ ಯೋಗೇಶ್ 6 ಅಂಕ ಸೇರಿಸಿ ಗೆಲುವಿನಲ್ಲಿ ಮಿಂಚಿದರು. ಪರಾಜಿತ ತಂಡದ ಪರ ಶಿವಂ 7 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.
ಪಾಟ್ನಾಗೆ ಜಯ
ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 48-37 ರಿಂದ ಪುಣೇರಿ ಪಲ್ಟನ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಈ ಮೂಲಕ ಸತತ ಸರಣಿ ಸೋಲುಗಳ ಸರಪಳಿಯನ್ನು ಪಾಟ್ನಾ ಕಳಚಿಕೊಂಡಿದೆ. ಪಾಟ್ನಾ ತಂಡದ ಪರ ಆಯಾನ್ 21 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡ ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿ ಪಂದ್ಯದಲ್ಲಿ ಮುನ್ನಡೆ ಸಾಧಿಸಿತು. ದಾಳಿ ಹಾಗೂ ಟ್ಯಾಕಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಪೈರೇಟ್ಸ್ ಅರ್ಹ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಸೋಲು ಕಂಡರೂ ಪುಣೇರಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications