Asian Games 2023: ಬಾಂಗ್ಲಾದೇಶ ವಿರುದ್ಧ ಭಾರೀ ಅಂತರದ ಗೆಲುವು ಸಾಧಿಸಿದ ಭಾರತ ಕಬಡ್ಡಿ ತಂಡ
2023ರ ಏಷ್ಯನ್ ಗೇಮ್ಸ್ ಚಿನ್ನದ ಪದಕಕ್ಕಾಗಿ ಭಾರತದ ಪುರುಷರ ಕಬಡ್ಡಿ ತಂಡವು ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಚೀನಾದ ಹ್ಯಾಂಗ್‌ಝೌನಲ್ಲಿರುವ ಕ್ಸಿಯೋಶನ್ ಗುವಾಲಿ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ 55-18 ಗೆಲುವು ಸಾಧಿಸಿತು.

ಏಷ್ಯನ್ ಗೇಮ್ಸ್‌ನ ಏಳು ಬಾರಿ ಚಾಂಪಿಯನ್ ಆಗಿರುವ ದಾಖಲೆಯೊಂದಿಗೆ ಭಾರತೀಯ ಕಬಡ್ಡಿ ತಂಡವು 2018ರ ಆವೃತ್ತಿಯಲ್ಲಿ ಕಂಚಿನ ಪದಕಕ್ಕೆ ಜಾರಿದ ನಂತರ, ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಮರಳಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.
ಪಂದ್ಯದ ಮೊದಲಾರ್ಧದಲ್ಲಿ ಭಾರತ ತಂಡ 24-9 ಅಂತರದಿಂದ ಮುನ್ನಡೆ ಸಾಧಿಸಿತು. ತಂಡದ ಆಕ್ರಮಣಕಾರಿ ಆಟವನ್ನು ನವೀನ್ ಕುಮಾರ್ ಗೋಯತ್ ಮತ್ತು ಅರ್ಜುನ್ ದೇಶ್ವಾಲ್ ಮುನ್ನಡೆಸಿದರು. ಭಾರತದ ರೈಡರ್‌ಗಳು ತಮ್ಮ ದಾಳಿಗಳನ್ನು ಅಸಾಧಾರಣವಾಗಿ ನಿರ್ವಹಿಸಿದರು. ಇದರ ಪರಿಣಾಮವಾಗಿ ಬಾಂಗ್ಲಾದೇಶ 12ನೇ ನಿಮಿಷದಲ್ಲಿ ಮೊದಲ ಆಲೌಟ್ ಆಯಿತು.

ಬಾಂಗ್ಲಾದೇಶವು ಪವನ್ ಸೆಹ್ರಾವತ್ ಮತ್ತು ನಂತರ ನವೀನ್ ಕುಮಾರ್ ವಿರುದ್ಧ ಎರಡು ಸೂಪರ್-ಟ್ಯಾಕಲ್‌ಗಳನ್ನು ಗಳಿಸಿದರೂ, ಭಾರತ ಕಬಡ್ಡಿ ತಂಡ ಮೊದಲ 20 ನಿಮಿಷಗಳಲ್ಲಿ 12 ಪಾಯಿಂಟ್‌ಗಳ ಮುನ್ನಡೆ ಕಾಯ್ದುಕೊಂಡಿತು.
ದ್ವಿತೀಯಾರ್ಧದಲ್ಲಿ ಬಾಂಗ್ಲಾದೇಶದ ದಾಳಿಯ ಪ್ರಯತ್ನಗಳು ವಿಫಲವಾದವು. ಭಾರತವು ತನ್ನ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಿತು. ಪಂದ್ಯವನ್ನು ತಮ್ಮ ಪರವಾಗಿ ಮಾಡಿಕೊಂಡು ಅಂತಿಮವಾಗಿ ಗೆದ್ದು ಬೀಗಿತು.
ಇನ್ನು ಇದಕ್ಕೆ ವ್ಯತಿರಿಕ್ತವಾಗಿ ಹಿಂದಿನ ಆವೃತ್ತಿಯಲ್ಲಿ ಬೆಳ್ಳಿ ಪದಕ ವಿಜೇತ ಭಾರತೀಯ ಮಹಿಳಾ ಕಬಡ್ಡಿ ತಂಡ ನಿರಾಶಾದಾಯಕ ಆರಂಭ ಕಂಡಿತು. ಸೋಮವಾರ ನಡೆದ ಪಂದ್ಯದಲ್ಲಿ ಚೈನೀಸ್ ತೈಪೆ ಎದುರು 34-34 ಅಂಕಗಳಿಂದ ಡ್ರಾ ಮಾಡಿಕೊಂಡಿತು.
ಪಂದ್ಯಗಳು ಮುಂದುವರಿದಂತೆ, ಪುರುಷರ ಕಬಡ್ಡಿ ಸ್ಪರ್ಧೆಯಲ್ಲಿ ಭಾರತ ತಂಡವು ಬಾಂಗ್ಲಾದೇಶ, ಚೈನೀಸ್ ತೈಪೆ, ಥೈಲ್ಯಾಂಡ್ ಮತ್ತು ಜಪಾನ್ ಜೊತೆಗೆ ಎ ಗುಂಪಿನಲ್ಲಿ ತನ್ನನ್ನು ಕಂಡುಕೊಂಡಿದೆ. ಬಿ ಗುಂಪಿನಲ್ಲಿ ಇರಾನ್, ಕೊರಿಯಾ, ಪಾಕಿಸ್ತಾನ ಮತ್ತು ಮಲೇಷ್ಯಾ ತಂಡಗಳಿವೆ.
ಭಾರತ ಕಬಡ್ಡಿ ತಂಡವು ಬುಧವಾರದಂದು ತನ್ನ ಎರಡನೇ ಗುಂಪಿನ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದ್ದು, ಗುರುವಾರದ ತನ್ನ ಅಂತಿಮ ಗುಂಪಿನ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು ಎದುರಿಸಲಿದೆ.
ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಶುಕ್ರವಾರ ನಡೆಯುವ ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಏಷ್ಯನ್ ಗೇಮ್ಸ್ 2023ರ ಪುರುಷರ ಕಬಡ್ಡಿ ಫೈನಲ್ ಪಂದ್ಯ ಕೂಡ ಶುಕ್ರವಾರವೇ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications