ಸತತ ಏಳನೇ ಬಾರಿ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನ
ಇಂಚಿಯಾನ್, ಅ. 3 : ಭಾರೀ ಪೈಪೋಟಿಯಿಂದ ಕೂಡಿದ ಕಬಡ್ಡಿ ಪಂದ್ಯದಲ್ಲಿ ಇರಾನ್ ತಂಡವನ್ನು ಮಣಿಸಿರುವ ಭಾರತ ತಂಡ ಸತತ ಏಳನೇ ಬಾರಿಗೆ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನವನ್ನು ಗಳಿಸಿದೆ. ಇರಾನ್ ತಂಡವನ್ನು 27-25 ಅಂಕಗಳಿಂದ ಪರಾಭವಗೊಳಿಸಿದ ಭಾರತ ಕಬಡ್ಡಿಯಲ್ಲಿ ತಾನೆಂಥ ಪ್ರಭಾವಶಾಲಿ ಎಂದು ಮತ್ತೊಮ್ಮೆ ಸಾಬೀತುಪಡಿಸಿತು.
ಕಬಡ್ಡಿಯಲ್ಲಿ ಭಾರತಕ್ಕೆ ಇದು ಡಬಲ್ ಧಮಾಕಾ. ಮಹಿಳೆಯರ ತಂಡ ಕೂಡ ಫೈನಲ್ ಪಂದ್ಯದಲ್ಲಿ ಇರಾನ್ ರಾಷ್ಟ್ರವನ್ನು 31-21 ಅಂಕಗಳಿಂದ ಸದೆಬಡಿತು ಚಿನ್ನದ ಪದಕವನ್ನು ಕೊರಳಿಗೆ ಧರಿಸಿದೆ. 2010ರಲ್ಲಿ ಕೂಡ ಭಾರತದ ಪುರುಷರು ಇರಾನ್ ರಾಷ್ಟ್ರವನ್ನು ಕಬಡ್ಡಿಯಲ್ಲಿ ಮಣ್ಣುಮುಕ್ಕಿಸಿತ್ತು.
1990ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಕಬಡ್ಡಿಯನ್ನು ಆರಂಭಿಸಿದ ನಂತರ ಪ್ರತಿಬಾರಿ ಬಂಗಾರದ ಪದಕವನ್ನು ಪಡೆದಿದೆ. ಭಾರತ ತಂಡದ ಕ್ಯಾಪ್ಟನ್ ರಾಕೇಶ್ ಕುಮಾರ್ ಅವರಿಗೆ ಇದು ಹ್ಯಾಟ್ರಿಕ್ ಸಂಭ್ರಮ. ದೋಹಾದಲ್ಲಿ 2006ರಲ್ಲಿ ಮತ್ತು ಗ್ವಾಂಜೌದಲ್ಲಿ 2010ರಲ್ಲಿ ಗೆದ್ದ ಭಾರತ ತಂಡದ ಕ್ಯಾಪ್ಟನ್ ರಾಕೇಶ್ ಕುಮಾರ್ ಆಗಿದ್ದರು. [ಹಾಕಿಯಲ್ಲಿ ಭಾರತದ ಚಿನ್ನದ ಕೇಕೆ]

ತುರುಸಿನಿಂದ ಕೂಡಿದ ಪಂದ್ಯ : ಆರಂಭದಲ್ಲಿ ಭಾರೀ ಪ್ರಾಬಲ್ಯ ಮೆರೆದ ಇರಾನ್ ತಂಡ ಮೊದಲಾರ್ಧದಲ್ಲಿ 21-13 ಅಂಕಗಳಿಂದ ಮುಂದಿತ್ತು. ಆದರೆ ನಂತರ ತನ್ನ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಆಡಿದ ಭಾರತ ದ್ವಿತೀಯಾರ್ಧದಲ್ಲಿ ಇರಾನ್ ವಿರುದ್ಧ ತಿರುಗಿಬಿದ್ದಿತು. ಮುಂದಿನ 20 ನಿಮಿಷಗಳಲ್ಲಿ ಭಾರತ 14 ಅಂಕ ಗಳಿಸಿದರೆ, ಇರಾನ್ ಕೇವಲ 4 ಅಂಕ ಪಡೆದು ಹಿಂದೆಬಿದ್ದಿತು.
ಅಂತಿಮ ಹಂತಗಳಲ್ಲಿ ಯಾವ ತಂಡದ ಪರವಾಗಿಯೂ ಪಂದ್ಯ ವಾಲುವ ಸಾಧ್ಯತೆಯಿತ್ತು. ಆದರೆ, ಚಾಕಚಕ್ಯತೆಯಿಂದ ಆಡಿದ ಭಾರತ ಅಂತಿಮವಾಗಿ ಗೆಲುವಿನ ನಗೆ ಬೀರಿತು.
ಒಟ್ಟಾರೆಯಾಗಿ ಭಾರತ 11 ಚಿನ್ನ, 9 ಬೆಳ್ಳಿ ಮತ್ತು 37 ಕಂಚಿನ ಪದಕಗಳೊಂದಿಗೆ ಒಟ್ಟು 57 ಪದಕಗಳನ್ನು ಗೆದ್ದಿದ್ದು, 6ನೇ ಸ್ಥಾನದಲ್ಲಿದೆ. ಮೊದಲಿನ ಐದು ಸ್ಥಾನಗಳನ್ನು ಚೀನಾ, ಕೊರಿಯಾ, ಜಪಾನ್, ಕಜಕಸ್ತಾನ್ ಮತ್ತು ಇರಾನ್ ತಂಡಗಳಿವೆ. [ಪದಕಗಳ ಪಟ್ಟಿ]
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications