Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಗೆದ್ದ ಭಾರತ: 8ನೇ ಬಾರಿಗೆ ಚಾಂಪಿಯನ್ ಕಿರೀಟ

11ನೇ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಇರಾನ್ ತಂಡವನ್ನು ಮಣಿಸಿದ್ದು ಚಾಂಪಿಯನ್ ಪಟ್ಟವನ್ನು ಪುಡಿಗೇರಿಸಿಕೊಂಡಿದೆ. ಕೊರಿಯಾದ ಬುಸಾನ್‌ನಲ್ಲಿ ನಡೆದ ಫ ಫೈನಲ್ ಸೆಣೆಸಾಟದಲ್ಲಿ ಭಾರತ ಪವನ್ ಶೆರಾವತ್ ನೇತೃತ್ವದಲ್ಲಿ ಕಣಕ್ಕಿಳಿದಿದ್ದು 42-32 ಭರ್ಜರಿ ಅಂತರದಿಂದ ಸೋಲಿಸಿದೆ. ಈ ಮೂಲಕ ಕಾಂಟಿನೆಂಟರ್ ಚಾಂಪಿಯನ್‌ಶಿಪ್‌ನಲ್ಲಿ 8ನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿದೆ.

ಬರೊಬ್ಬರಿ ಆರು ವರ್ಷಗಳ ನಂತರ ನಡೆದ ಏಷ್ಯನ್ ಸ್ಪರ್ಧೆಯಲ್ಲಿ ಇದು 11ನೇ ಆವೃತ್ತಿಯಾಗಿದ್ದಿ ಭಾರತ, ಇರಾನ್, ಕೊರಿಯಾ, ಜಪಾನ್, ಚೈನೀಸ್ ತೈಪೆ ಮತ್ತು ಹಾಂಕಾಂಗ್ ಈ ಆರು ರಾಷ್ಟ್ರಗಳು ಭಾಗವಹಿಸಿದ್ದವು. ಈ ಟೂರ್ನಿಯಲ್ಲಿ ಭಾರತ ಹಾಗೂ ಇರಾನ್ ತಂಡಗಳು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದವು.

Asian Kabaddi Championship 2023: India win against Iran in Final to lift title for 8th time

ಕಬಡ್ಡಿಯಲ್ಲಿ ಭಾರತ ಹಾಗೂ ಇರಾನ್ ಎರಡು ಬಲಿಷ್ಠ ತಂಡಗಳು. ನಿರೀಕ್ಷೆಯಂತೆಯೇ ಈ ಎರಡು ತಂಡಗಳು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದವು. ಏಷ್ಯನ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಿರೀಕ್ಷೆಗಳು ಇತ್ತು. ತೀವ್ರ ಪೈಪೋಟಿಯಿಂದ ಈ ಪಂದ್ಯದಲ್ಲಿ ಭಾರತೀಯ ತಂಡ ಅದ್ಭುತ ಪ್ರದರ್ಶನ ನೀಡಿ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಅಂತಿಮವಾಗೊ ಭಾರತ 10 ಅಂಕಗಳ ಅಂತರದಿಂದ ಗೆಲುವು ಸಾಧಿಸಿದರೂ ಈ ಪಂದ್ಯದಲ್ಲಿ ಭಾರತದ ಗೆಲುವು ಇಷ್ಟು ಸುಲಭವಾಗಿರಲಿಲ್ಲ. ಮೊಹಮ್ಮದ್ರೇಜಾ ಚಿಯಾನೆಹ್ ಶಾಡ್ಲೌಯಿ ನೇತೃತ್ವದ ಇರಾನ್ ತಂಡ ಭಾರತಕ್ಕೆ ತೀವ್ರ ಪೈಪೋಟಿಯನ್ನು ನೀಡಿದೆ. ಮೊದಲಾರ್ಧ ಮುಗಿದಾಗ 23-11 ಅಂತರದಿಂದ ಪಂದ್ಯ ಭಾರತದ ಪರವಾಗಿಯೇ ಇತ್ತು. ಆರಂಭದಲ್ಲಿ ಪಡೆದ ಮುನ್ನಡೆಯ ಕಾರಣದಿಂದಾಗಿ ಮೊದಲಾರ್ಧದ ಸಂದರ್ಭದಲ್ಲಿ 12 ಅಂಕಗಳಿಂದ ಭಾರತ ಮುಂದಿತ್ತು. ನಂತರ ಇರಾನ್ ಕೂಡ ದ್ವಿತಿಯಾರ್ಧದಲ್ಲಿ ಸಮಬಲದ ಪೈಪೋಟಿ ನೀಡಿದ ಕಾರಣ ಲೀಗ್‌ನ ಅಂತರ ಹೆಚ್ಚಾಗಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಹತ್ತು ಅಂಕಗಳ ಅಂತರದಿಂದ ಗೆಲುವು ಸಾಧಿಸಿದೆ.

ಇದಕ್ಕೂ ಮುನ್ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಹಾಂಕಾಂಗ್ ವಿರುದ್ಧ 64-20 ಅಂಕಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಭಾರತದ ಕೆಲ ಪ್ರಮುಖ ಆಟಗಾರರು ಆರಂಭಿಕ ಆಡುವ ಬಳಗದಿಂದ ವಿಶ್ರಾಂತಿ ಪಡೆದುಕೊಂಡಿದ್ದರು. ಸ್ವತಃ ಪವನ್ ಶೆರಾವತ್, ಅಸ್ಲಾಮ್ ಇನಾಮ್ದಾರ್ ಮೊದಲಾದ ಆಟಗಾರರು ವಿಶ್ರಾಂತಿ ಪಡೆದುಕೊಂಡಿದ್ದು ಫೈನಲ್ ಪಂದ್ಯಕ್ಕೆ ವಿಶ್ರಾಂತಿ ಪಡೆದುಕೊಂಡಿದ್ದರು.

ಇನ್ನು ಈ ಬಾರಿಯ ಏಷ್ಯನ್ ಗೇಮ್ಸ್ 2023ಕ್ಕೆ ತಯಾರಿ ನಡೆಸುತ್ತಿರುವ ಭಾರತೀಯ ಕಬಡ್ಡಿ ತಂಡಕ್ಕೆ ಬುಸಾನ್‌ನಲ್ಲಿ ಪಡೆದ ಈ ಗೆಲುವು ಸಾಕಷ್ಟು ಹೆಚ್ಚಿನ ಆತ್ಮವಿಶ್ವಾಸ ತುಂಬಿಸಿದೆ. ಕಬಡ್ಡಿ ಕ್ರೀಡೆ ಕುಡ ಒಲಿಂಪಿಕ್ಸ್‌ನ ಭಾಗವಲ್ಲದ ಕಾರಣದಿಂದಾಗಿ ಬಹುಸ್ಪರ್ಧೆಯ ಕ್ರೀಡಾಕೂಟಗಳ ಪೈಕಿ ಏಷ್ಯನ್ ಗೇಮ್ಸ್ ಸ್ಪರ್ಧೆ ಕಬಡ್ಡಿಗೆ ದೊಡ್ಡ ವೇದಿಕೆಯಾಗಿದೆ. ಈ ಬಾರಿಯ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 23ರಂದು ಆರಂಬವಾಗಲಿದ್ದು ಅಕ್ಟೋಬರ್ 8 ರಂದು ಅಂತ್ಯವಾಗಲಿದ್ದು ಚೀನಾದ ಹ್ಯಾಂಗ್‌ಝೌನಲ್ಲಿ ಈ ಕ್ರೀಡಾಕೂಡದ ಆತಿಥ್ಯವನ್ನು ವಹಿಸಲಿದೆ.

Story first published: Friday, June 30, 2023, 15:39 [IST]
Other articles published on Jun 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+