ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023: ಬಲಿಷ್ಟ ತಂಡ ಪ್ರಕಟಿಸಿದ ಭಾರತ

ಕಬಡ್ಡಿ ಪ್ರಿಯರ ನೆಚ್ಚಿನ ಟೂರ್ನಿ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಆರು ವರ್ಷಗಳ ಅಂತರದ ಬಳಿಕ ಮತ್ತೆ ಬಂದಿದೆ. ಇದು ಹನ್ನೊಂದನೆ ಆವೃತ್ತಿಯ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಟೂರ್ನಿಯಾಗಿದ್ದು, ಈ ಬಾರಿಯ ಟೂರ್ನಿ ಕೊರಿಯಾದ ಬೂಸನ್‌ನಲ್ಲಿ ನಡೆಯಲಿದೆ.
ಜೂನ್ 27ರಂದು ಟೂರ್ನಿ ಆರಂಭಗೊಳ್ಳಲಿದ್ದು, ಜೂನ್ 30ರಂದು ಮುಕ್ತಾಯಗೊಳ್ಳಲಿದೆ. 2003ರಲ್ಲಿ ನಡೆದಿದ್ದ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಇರಾನ್ ಗೆದ್ದಿದ್ದು ಬಿಟ್ಟರೆ ಉಳಿದೆಲ್ಲಾ ಟೂರ್ನಿಯಲ್ಲಿಯೂ ಸಹ ಭಾರತ ತಂಡವೇ ಗೆದ್ದಿದೆ.
ಕೊನೆಯ ಬಾರಿಗೆ ಇರಾನ್‌ನ ಗೋರ್ಗನ್‌ನಲ್ಲಿ ನಡೆದಿದ್ದ 2017ರ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿಯೂ ಗೆದ್ದಿದ್ದ ಭಾರತ ಸದ್ಯ ಹಾಲಿ ಚಾಂಪಿಯನ್ ಆಗಿದ್ದು, ಈ ಬಾರಿಯೂ ಚಿನ್ನ ಗೆಲ್ಲಬೇಕೆಂಬ ಉದ್ದೇಶದಿಂದ ನವೀನ್ ಕುಮಾರ್ ಹಾಗೂ ಪವನ್ ಸೆಹ್ರಾವತ್ ಇಬ್ಬರ ನಾಯಕತ್ವವಿರಿವ 12 ಆಟಗಾರರ ತಂಡವನ್ನು ಪ್ರಕಟಿಸಿದೆ.
ಪ್ರೊ ಕಬಡ್ಡಿ ಲೀಗ್‌ನ ಲೀಡಿಂಗ್ ರೈಡರ್ ಪ್ರದೀಪ್ ನರ್ವಲ್ ಈ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳದಿದ್ದು, ಕಳೆದ ಬಾರಿಯ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದ ದೀಪಕ್ ನಿವಾಸ್ ಹೂಡ ಸಹ ತಂಡದಿಂದ ಹೊರಬಿದ್ದಿದ್ದಾರೆ.
ಇನ್ನು ಪ್ರಕಟಗೊಂಡಿರುವ ಸ್ಕ್ವಾಡ್‌ನಲ್ಲಿ ಯಾವೆಲ್ಲಾ ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಭಾರತೀಯ ಕಬಡ್ಡಿ ತಂಡ: ಅರ್ಜುನ್ ದೇಶ್ವಾಲ್, ನವೀನ್ ಕುಮಾರ್, ಸಚಿನ್, ಅಸ್ಲಾಂ ಇನಾಮದಾರ್, ಮೋಹಿತ್ ಗೋಯತ್, ಸುನೀಲ್ ಕುಮಾರ್, ಪರ್ವೇಶ್ ಭೈನ್ಸ್ವಾಲ್, ನಿತಿನ್ ರಾವಲ್, ನಿತೇಶ್ ಕುಮಾರ್, ಸುರ್ಜೀತ್ ಸಿಂಗ್, ವಿಶಾಲ್ ಭಾರದ್ವಾಜ್, ಪವನ್ ಸೆಹ್ರಾವತ್
ಸ್ಟ್ಯಾಂಡ್ ಬೈ ಆಟಗಾರರು: ವಿಜಯ್ ಮಲಿಕ್, ಶುಭಂ ಶಿಂಧೆ
ತರಬೇತುದಾರರು: ಅಶನ್ ಕುಮಾರ್, ಸಂಜೀವ್ ಕುಮಾರ್
ವ್ಯವಸ್ಥಾಪಕರು: ಭಾಸ್ಕರನ್ ಎಡಚೇರಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications