Pro Kabaddi: ವಾರಿಯರ್ಸ್, ಸ್ಟೀಲರ್ಸ್‌ಗೆ ಭರ್ಜರಿ ಜಯ
11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬಂಗಾಳ ವರಿಯರ್ಸ್, ಹರಿಯಾಣ ಸ್ಟೀಲರ್ಸ್ ತಂಡಗಳು ಭರ್ಜರಿ ಜಯ ದಾಖಲಿಸಿವೆ.
ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್ 32-29 ಅಂಕಗಳಿಂದ ಯು.ಪಿ ಯೋಧಾಸ್ ತಂಡವನ್ನು, ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 37-25 ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿತು. ಪಂದ್ಯದಲ್ಲಿ ಯುಪಿ ಸೋತರೂ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಹರಿಯಾಣ ಸ್ಟೀಲರ್ಸ್ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.

ಜಿದ್ದು ಗೆದ್ದ ವಾರಿಯರ್ಸ್
ಮೊದಲಾವಧಿಯಲ್ಲಿ ಉಭಯ ತಂಡಗಳು ಅಬ್ಬರದ ಪ್ರದರ್ಶನ ನೀಡಿದವು. ಈ ವೇಳೆ ಬಂಗಾಳ 12-11 ಅಂಕಗಳಿಂದ ಯುಪಿ ತಂಡದ ವಿರುದ್ಧ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಉಭಯ ತಂಡಗಳು ರೈಡಿಂಗ್ ಹಾಗೂ ಟ್ಯಾಕಲ್‌ನಲ್ಲಿ ಸಮಬಲದ ಸಾಧನೆ ಮಾಡಿದವು.
ಎರಡನೇ ಅವಧಿಯಲ್ಲೂ ಜಿದ್ದಾಜಿದ್ದಿನ ಕಾಳಗ ಕಂಡು ಬಂದಿತು. ಈ ವೇಳೆ ಬಂಗಾಳ 20-18 ಅಂಕಗಳಿಂದ ಯುಪಿ ವಿರುದ್ಧ ಮುನ್ನಡೆ ಸಾಧಿಸಿ ಜಯ ಸಾಧಿಸಿತು. ಯುಪಿ ರೈಡಿಂಗ್‌ನಲ್ಲಿ 13 ಅಂಕಗಳನ್ನು ಕಲೆ ಹಾಕಿದರೆ, ಬಂಗಾಳ ಟ್ಯಾಕಲ್‌ನಲ್ಲಿ ಆರು ಅಂಕಗಳನ್ನು ಸೇರಿಸಿತು. ಈ ವೇಳೆ ಯುಪಿ ಒಂದು ಬಾರಿ ಆಲೌಟ್ ಆಯಿತು.
ಬಂಗಾಳ ಪರ ಮಣಿಂದರ್ ಸಿಂಗ್ 8, ಸುಶೀಲ್ ಹಾಗೂ ನಿತೀನ್ ತಲಾ ಏಳು ಅಂಕಗಳನ್ನು ಕಲೆ ಹಾಕಿದರು. ಯುಪಿ ಪರ ಭರತ್ 13 ಅಂಕ ಸೇರಿಸಿದರು.

ಹರಿಯಾಣ ಅಬ್ಬರ
ಹರಿಯಾಣ ಮೊದಲಾವಧಿಯ 20 ನಿಮಿಷದಲ್ಲಿ ಅಮೋಘ ಪ್ರದರ್ಶನ ನೀಡಿತು. ಈ ವೇಳೆ ದಾಳಿಯಲ್ಲಿ 12, ಟ್ಯಾಕಲ್‌ನಲ್ಲಿ 4 ಅಂಕಗಳನ್ನು ಕಲೆ ಹಾಕಿ ಆರ್ಭಟಿಸಿತು. ಇನ್ನು ಈ ಅವಧಿಯಲ್ಲಿ ಒಂದು ಬಾರಿ ಜೈಪುರ ಪಿಂಕ್ ಪ್ಯಾಂಥರ್ಸ್ ಆಲ್ ಔಟ್ ಆಯಿತು.
ಎರಡನೇ ಅವಧಿಯಲ್ಲೂ ಹರಿಯಾಣ ಸ್ಥಿರ ಪ್ರದರ್ಶನವನ್ನು ಮುಂದುವರೆಸಿತು. ಮೊದಲಾವಧಿಯಲ್ಲಿ ಅಂಕಗಳಿಕೆಯಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದ ಜೈಪುರ ಈ ಅವಧಿಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ನೀಡಿದರು. ಈ ಅವಧಿಯಲ್ಲಿ ಜೈಪುರ ದಾಳಿಯಲ್ಲಿ ಅಮೋಘ ಪ್ರದರ್ಶನ ನೀಡಿತು. ಆದರೆ ಹರಿಯಾಣ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡಿತು. ಈ ವೇಳೆ ಜೈಪುರ ಒಂದು ಬಾರಿ ಆಲೌಟ್ ಆಯಿತು. ಹರಿಯಾಣ ಪರ ವಿನಯ್ 10 ಅಂಕ ಕಲೆ ಹಾಕಿದರು.
ಮೊದಲ ಗೆಲುವಿನ ಕನಸಿನಲ್ಲಿ ಬುಲ್ಸ್
ಆಡಿದ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಬೆಂಗಳೂರು ಬುಲ್ಸ್, ನಾಲ್ಕನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಕಾದಾಟ ನಡೆಸಲಿದೆ. ಇದಕ್ಕೂ ಮೊದಲು ಪಾಟ್ನಾ ಪೈರೇಟ್ಸ್ ಹಾಗೂ ತಮಿಳು ತಲೈವಾಸ್ ವಿರುದ್ಧ ಫೈಟ್ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications