Bengaluru Bulls: ತಲೈವಾಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಬುಲ್ಸ್
12ನೇ ಅವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ 33-29 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಗೆಲುವಿನ ಮೂಲಕ ಬೆಂಗಳೂರು ಆಡಿದ 12 ಪಂದ್ಯಗಳಲ್ಲಿ 6 ಜಯ ಸಾಧಿಸಿದ್ದು 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಮೊದಲಾವಧಿಯ ಆಟದಿಂದ ಆತಿಥೇಯ ತಮಿಳು ತಲೈವಾಸ್ ವಿರುದ್ಧ ಬುಲ್ಸ್ ಆರಂಭದಲ್ಲಿ ಮುನ್ನಡೆ ಸಾಧಿಸಿತು. ಆದರೆ ಈ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ. ಈ ಅವಧಿಯಲ್ಲಿ ತಲೈವಾಸ್ ಜಿದ್ದಿನ ಆಟವನ್ನು ಆಡಿ ಬುಲ್ಸ್ ತಂತ್ರವನ್ನು ಮೆಟ್ಟಿ ನಿಂತಿತು. ಪರಿಣಾಮ ಬುಲ್ಸ್ ಈ ಅವಧಿಯಲ್ಲಿ ಅಂಕಗಳನ್ನು ಬಿಟ್ಟುಕೊಟ್ಟಿತು. ಅಲ್ಲದೆ ಒಮ್ಮೆ ಅಂಗಳವನ್ನು ಸಹ ಖಾಲಿ ಮಾಡಿತು. ಪರಿಣಾಮ ಈ ಅವಧಿಯ ಆಟದಲ್ಲಿ ತಮಿಳು ತಲೈವಾಸ್ 18-17 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ಅವಧಿಯ ಆಟದಲ್ಲಿ ತಲೈವಾಸ್ ದಾಳಿಯಲ್ಲಿ 11 ಅಂಕ ಕಲೆ ಹಾಕಿದರೆ, ಬುಲ್ಸ್ ರೈಡಿಂಗ್‌ನಲ್ಲಿ 12 ಅಂಕವನ್ನು ಸೇರಿಸಿತು.

ಎರಡನೇ ಅವಧಿಯ ಆಟದಲ್ಲಿ ಬುಲ್ಸ್ ಮನಮೋಹಕ ಆಟವನ್ನು ಪ್ರದರ್ಶಿಸಿ ಪುಟಿದೇಳುವ ಸೂಚನೆಯನ್ನು ನೀಡಿತು. ಆರಂಭದಿಂದಲೂ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದ ಬುಲ್ಸ್ ತಲೈವಾಸ ತಂಡದ ಯೋಜನೆಯನ್ನು ಬುಡಮೇಲು ಮಾಡಿತು. ಈ ಅವಧಿಯ ಆಟದಲ್ಲಿ ಬುಲ್ಸ್ ಟ್ಯಾಕಲ್‌ನಲ್ಲಿ ಹೆಚ್ಚಿನ ಅಂಕವನ್ನು ಕಲೆ ಹಾಕಿತು. ಅಲ್ಲದೆ ಒಮ್ಮೆ ತಲೈವಾಸ್ ಅಂಗಳವನ್ನು ಖಾಲಿ ಮಾಡಿ ಬೋನಸ್ ಅಂಕವನ್ನು ಸಹ ಕಲೆ ಹಾಕಿತು. ಈ ಅವಧಿಯ ಆಟದಲ್ಲಿ ಬುಲ್ಸ್ ಜಿದ್ದಾಜಿದ್ದಿನ ಆಟವನ್ನು ಆಡಿ 16-11 ಅಂಕಗಳಿಂದ ಮುನ್ನಡೆ ಸಾಧಿಸಿ ಜಯ ತನ್ನದಾಗಿಸಿಕೊಂಡಿತು.
ಅಲಿರಾಜ್ ಅಬ್ಬರ
ಬೆಂಗಳೂರು ತಂಡದ ಪರ ಅಲಿರಾಜ್ ಅಬ್ಬರಿಸಿದರು. ಇವರು 17 ಬಾರಿ ದಾಳಿಯನ್ನು ನಡೆಸಿ 10 ಅಂಕ ಕಲೆ ಹಾಕಿದರು. ಉಳಿದಂತೆ ಸಂಜಯ 5 ಅಂಕವನ್ನು ತಮ್ಮದಾಗಿಸಿಕೊಂಡರು. ಪರಾಜಿತ ತಂಡದ ಪರ ಅರ್ಜುನ್ ದೇಶ್ವಾಲ್ 9 ಅಂಕ ಪೇರಿಸಿದರು.
ಟೈಟಾನ್ಸ್‌ಗೆ 3ನೇ ಸ್ಥಾನ
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ತೆಲಗು ಟೈಟಾನ್ಸ್ 40-35 ಅಂಕಗಳಿಂದ ಯುಪಿ ಯೋಧಾಸ್ ತಂಡವನ್ನು ಮಣಿಸಿತು. ಪಂದ್ಯದ ಯಾವುದೇ ಹಂತದಲ್ಲೂ ಯುಪಿ, ಟೈಟಾನ್ಸ್‌ಗೆ ಸವಾಲು ಎಸೆಯಲೇ ಇಲ್ಲ. ದಾಳಿಯಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದವು. ಆದರೆ ಟ್ಯಾಕಲ್‌ನಲ್ಲಿ ಟೈಟಾನ್ಸ್ ತಂಡ ಆರ್ಭಟಿಸಿತು. ಒಟ್ಟಾರೆ ಪಂದ್ಯದಲ್ಲಿ ಟೈಟಾನ್ಸ್ 6 ಟ್ಯಾಕಲ್ ಅಂಕವನ್ನು ತನ್ನದಾಗಿಸಿಕೊಂಡಿತು. ಅಲ್ಲದೆ 4 ಬಾರಿ ಸೂಪರ್ ಟ್ಯಾಕಲ್ ಮಾಡಿ ಬೀಗಿತು. ಟೈಟಾನ್ಸ್ ತಂಡದ ಪರ ಭರತ್ 14 ಅಂಕವನ್ನು ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಈ ಗೆಲುವಿನ ಮೂಲಕ ಟೈಟಾನ್ಸ್ 14 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
'
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications