ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಮತ್ತೊಂದು ಸೋಲು ಕಂಡಿದೆ. 11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 30ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 35-38 ರಿಂದ ತೆಲಗು ಟೈಟನ್ಸ್ ವಿರುದ್ಧ ಮತ್ತೊಂದು ಸೋಲು ಕಂಡಿತು.
ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಬುಲ್ಸ್ ಎರಡನೇ ಗೆಲುವಿನ ಖಾತೆ ತೆರೆಯುವ ಆಸೆ ಫಲಿಸಲಿಲ್ಲ. ಈ ಸೋಲಿನ ಮೂಲಕ ಬೆಂಗಳೂರು ಏಳು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಗೆಲುವಿನ ಮೂಲಕ ತೆಲಗು ಟೈಟನ್ಸ್ ಆಡಿದ 6 ಪಂದ್ಯಗಳಲ್ಲಿ 3 ಜಯ, 3 ಸೋಲು ಕಂಡಿದ್ದು, 16 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಮೊದಲಾವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ಈ ಅವಧಿಯಲ್ಲಿ ಟೈಟಾನ್ಸ್ 23-12 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ತೆಲುಗು 13 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು. ಅಲ್ಲದೆ ಅಂಕಗಳನ್ನು ಬಿಟ್ಟುಕೊಟ್ಟು ನಿರಾಸೆ ಅನುಭವಿಸಿತು. ಈ ಅವಧಿಯಲ್ಲಿ ಉಭಯ ತಂಡಗಳು ಟ್ಯಾಕಲ್ ನಲ್ಲಿ ಸಮ ಅಂಕಗಳನ್ನು ಕಲೆ ಹಾಕಿದವು. ಮೊದಲ 20 ನಿಮಿಷದಲ್ಲಿ ಬೆಂಗಳೂರು ಒಮ್ಮೆ ಆಲೌಟ್ ಆಯಿತು.
ಎರಡನೇ ಅವಧಿಯ ಆಟದಲ್ಲಿ ಬುಲ್ಸ್ ಅಬ್ಬರದ ಆಟವನ್ನು ಪ್ರದರ್ಶಿಸಿತು. ಈ ಅವಧಿಯಲ್ಲಿ ಸ್ಟಾರ್ ಆಟಗಾರರು ಸಂಘಟಿತ ಆಟದ ಪ್ರದರ್ಶನ ನೀಡಿದರೂ, ಗೆಲುವಿಗೆ ಬೇಕಾದಷ್ಟು ಸಾಕಾಗಲಿಲ್ಲ. ಈ ಅವಧಿಯಲ್ಲಿ ಬುಲ್ಸ್ 23-15 ಅಂಕಗಳನ್ನು ಗಳಿಸಿತು. ಈ ಅವಧಿಯಲ್ಲಿ ಬೆಂಗಳೂರು 14 ರೈಡಿಂಗ್ ಪಾಯಿಂಟ್ ಕಲೆ ಹಾಕಿತು. ಈ ಅವಧಿಯಲ್ಲಿ ಟೈಟನ್ಸ್ ಎರಡು ಬಾರಿ ಆಲೌಟ್ ಆಯಿತು.

ಬುಲ್ಸ್ ಪರ ಅಜಿಂಕ್ಯ ಪವಾರ್, ಪಂಕಜ್ 9 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು. ಪವನ್ ಶೇರವಾತ್ 14 ಅಂಕಗಳನ್ನು ಕಲೆ ಹಾಕಿ ಗೆಲುವಿನ ರುವಾರಿ ಆದರು.
ಶನಿವಾರ ನಡೆದ ಒಂದನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 42-37 ಅಂಕಗಳಿಂದ ಯುಪಿ ಯೋಧಾಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಪಾಟ್ನಾ ಆಡಿದ 5 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿದ್ದು, 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪಾಟ್ನಾ ತಾನಾಡಿದ ಮೊದಲಾವಧಿಯಲ್ಲಿ ಅಮೋಘ ಪ್ರದರ್ಶನ ನೀಡಿತು. ರೈಡಿಂಗ್‌ನಲ್ಲಿ ಪಾಟ್ನಾ ಅಬ್ಬರದ ಪ್ರದರ್ಶನ ನೀಡಿತು. ಎರಡನೇ ಅವಧಿಯ ಆಟ ಜಿದ್ದಾಜಿದ್ದಿನಿಂದ ಕೂಡಿತ್ತು. ಈ ಅವಧಿಯಲ್ಲಿ ಉಭಯ ತಂಡಗಳು ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸೊಬಗಿನ ಆಟವಾಡಿದ ಪಾಟ್ನಾ ಜಯ ಸಾಧಿಸಿತು.
ಪಾಟ್ನಾ ಪರ ದೇವಾಂಕ್ 11 ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ಇನ್ನು ಲೆಫ್ಟ್ ರೈಡರ್ ಆಯನ್ 09 ಅಂಕ ಸೇರಿಸಿ ಅಬ್ಬರಿಸಿದರು. ಪರಾಜಿತ ತಂಡದ ಪರ ಗಗನ್ ಗೌಡ್ 9 ಅಂಕಗಳನ್ನು ಸೇರಿಸಿ ಸೋಲಿನಲ್ಲಿ ಮಿಂಚಿದರು.