Pro Kabaddi: ಮೊದಲ ಪಂದ್ಯದಲ್ಲಿ ಬುಲ್ಸ್‌ಗೆ ಆಘಾತ
ಹೈದರಾಬಾದ್: ಬೆಂಗಳೂರು ಬುಲ್ಸ್ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 29-27 ಅಂಕಗಳಿಂದ ತೆಲಗು ಟೈಟನ್ಸ್ ತಂಡವನ್ನು ಮಣಿಸಿತು. ಈ ಮೂಲಕ ತೆಲುಗು ಗೆಲುವಿನ ಅಭಿಯಾನವನ್ನು ಆರಂಭಿಸಿದೆ.
ಶುಕ್ರವಾರದಿಂದ ಆರಂಭವಾದ ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬುಲ್ಸ್ ಅಂಕಣವನ್ನು ಆಯ್ಕೆ ಮಾಡಿಕೊಂಡಿತು. ತೆಲುಗು ಟೈಟನ್ಸ್ ಮೊದಲ ಅವಕಾಶದಲ್ಲಿ ಅಂಗಳನ್ನು ಕಲೆ ಹಾಕಿತು. ಬೆಂಗಳೂರು ಈ ಪಂದ್ಯದ ಆರಂಭದಲ್ಲಿ ರೈಡ್‌ನಲ್ಲಿ ಕೊಂಚ ಹಿನ್ನಡೆ ಅನುಭವಿಸಿತು.

ಬುಲ್ಸ್ ತಂಡಕ್ಕೆ ಆರಂಭಿಕ ಹಿನ್ನಡೆ
ಬೆಂಗಳೂರು ಬುಲ್ಸ್ ಮೊದಲಾವಧಿಯ ಆಟ ಮುಕ್ತಾಯವಾದಾಗ 11-20 ಅಂಕಗಳಿಂದ ತೆಲಗು ಟೈಟನ್ಸ್ ತಂಡದ ವಿರುದ್ಧ ಹಿನ್ನಡೆ ಅನುಭವಿಸಿತು. ಈ ಹಂತದಲ್ಲಿ ಬೆಂಗಳೂರು ಬುಲ್ಸ್ ದಾಳಿಯಲ್ಲಿ ಹಿನ್ನಡೆ ಅನುಭವಿಸಿತು. ಈ ಅವಧಿಯಲ್ಲಿ ಟೈಟನ್ಸ್ ದಾಳಿಯಲ್ಲಿ 11 ಅಂಕಗಳನ್ನು ಕಲೆ ಹಾಕಿದರೆ, ಬುಲ್ಸ್ 5 ಅಂಕವನ್ನು ಸೇರಿಸಿತು. ಟ್ಯಾಕಲ್‌ನಲ್ಲಿ ಉಭಯ ತಂಡಗಳು ಸಮಯೋಚಿತ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದವು. ಈ ಅವಧಿಯಲ್ಲಿ ಬೆಂಗಳೂರು ಬುಲ್ಸ್ ಒಂದು ಬಾರಿ ಅಂಕಣವನ್ನು ಖಾಲಿ ಮಾಡಿತು.
ಎರಡನೇ ಅವಧಿಯಲ್ಲಿ ಉಭಯ ತಂಡಗಳ ಆರ್ಭಟ
ಎರಡನೇ ಅವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್ ಅಬ್ಬರದ ಪ್ರದರ್ಶನ ನೀಡಿತು. ಅಲ್ಲದೆ ರನ್ ಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಆದರೆ ಈ ಮುನ್ನಡೆ ಪಂದ್ಯ ಗೆಲ್ಲುವಷ್ಟು ಸಾಕಾಗಲಿಲ್ಲ. ಈ ಅವಧಿಯಲ್ಲಿ ಬೆಂಗಳೂರು 18-17 ಅಂಕಗಳನ್ನು ಕಲೆ ಹಾಕಿತು. ದಾಳಿಯ ಹಾಗೂ ಟ್ಯಾಕಲ್‌ನಲ್ಲಿ ಉಭಯ ತಂಡಗಳು ಅಮೋಘ ಪ್ರದರ್ಶನ ನೀಡಿದವು. ಇದೇ ಅವಧಿಯಲ್ಲಿ ತೆಲಗು ಟೈಟನ್ಸ್ ತಂಡವನ್ನು ಬೆಂಗಳೂರು ಆಲೌಟ್ ಮಾಡಿತು. ಇದೇ ಅವಕಾಶವನ್ನು ಬಳಸಿಕೊಂಡು ಅಬ್ಬರದ ಪ್ರದರ್ಶನ ನೀಡಿ ಮುನ್ನಡೆ ಸಾಧಿಸುವ ಬುಲ್ಸ್ ಆಸೆಗೆ ಪೆಟ್ಟು ನೀಡಿತು.
ಪವನ್ 1200
ತೆಲಗು ಟೈಟನ್ಸ್ ತಂಡದ ಸ್ಟಾರ್ ಆಟಗಾರ ಪವರ ಶೆರಾವತ್ ಅಮೋಘ ಪ್ರದರ್ಶನ ನೀಡಿದರು. ಇವರು ಈ ಪಂದ್ಯದಲ್ಲಿ 13 ಅಂಕಗಳನ್ನು ಕಲೆ ಹಾಕಿದರು. ಈ ಮೂಲಕ ಪ್ರೊ ಕಬಡ್ಡಿ ಲೀಗ್‌ನಲ್ಲಿ 1200 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು.
ದೆಹಲಿಗೆ ಜಯ
ಇನ್ನೊಂದು ಪಂದ್ಯದಲ್ಲಿ ದೆಹಲಿ ದಬಾಂಗ್ ಕೆ.ಸಿ 36-28 ರಿಂದ ಯು ಮುಂಬಾ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಆಶು ಮಲಿಕ್ 10 ಅಂಕವನ್ನು ಕಲೆ ಹಾಕಿದರು. ಮುಂಬಾ ತಂಡದ ಪರ ಅಮೀರ್ಮೊಹಮ್ಮದ್ 11, ಅಜಿತ್ ಚೌಹಾಣ್ 10 ಅಂಕ ಪಡೆದು ಅಬ್ಬರಿಸಿದರು. ಉಭಯ ತಂಡಗಳು ದಾಳಿಯಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದವು. ಮೊದಲಾವಧಿಯಲ್ಲಿ ಮುಂಬಾ ಒಂದು ಬಾರಿ ಆಲ್ ಔಟ್ ಆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications