PKL 2025: ಪ್ಯಾಂಥರ್ಸ್‌ಗೆ ಗುದ್ದಿದ ಬುಲ್ಸ್‌ಗೆ ಹ್ಯಾಟ್ರಿಕ್ ಜಯ
ಜೈಪುರ: ಮೊದಲ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್, ಜೈಪುರದಲ್ಲಿ ಅಮೋಘ ಪ್ರದರ್ಶನ ನೀಡಿ ಆತಿಥೇಯ ಜೈಪುರ ಪಿಂಕ್ ಪ್ಯಾಥರ್ಸ್ ತಂಡವನ್ನು 28-23 ಅಂಕಗಳಿಂದ ಮಣಿಸಿ ಅಬ್ಬರಿಸಿತು. ಈ ಮೂಲಕ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡದ ರಕ್ಷಣಾ ಆಟದ ಪರಿಣಾಮ ಬುಲ್ಸ್ ತಂಡ ಅಬ್ಬರಿಸಿದ್ದಾರೆ.
12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಅಮೋಘ ಆಟದ ಪ್ರದರ್ಶನ ನೀಡಿತು. ಟಾಸ್ ಗೆದ್ದು ಅಂಗಳವನ್ನು ಆಯ್ಕೆ ಮಾಡಿಕೊಂಡಿತು. ಈ ಅವಧಿಯಲ್ಲಿ ಬುಲ್ಸ್ ಸ್ಥಿರ ಪ್ರದರ್ಶನ ನೀಡಿತು ಅಲಿರಾಜ್ ಸೊಗಸಾದ ದಾಳಿ ನಡೆಸಿ ಆರಂಭದಲ್ಲಿ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಬುಲ್ಸ್ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿತು. 16ನೇ ನಿಮಿಷದ ಆಸುಪಾಸಿನಲ್ಲಿ ಬುಲ್ಸ್ ಆಲೌಟ್ ಆಗುವ ಸ್ಥಿತಿಯಲ್ಲಿತ್ತು. ಈ ವೇಳೆ ಬೆಂಗಳೂರು ಬುಲ್ಸ್ ತಂಡದ ರಕ್ಷಣಾ ಆಟಗಾರರು ಅಬ್ಬರದ ಪ್ರದರ್ಶನ ನೀಡಿದರು. ಈ ವೇಳೆ ಬ್ಯಾಕ್ ಟು ಬ್ಯಾಕ್ ಸೂಪರ್ ಟ್ಯಾಕಲ್ ಮಾಡಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು.

ಮೊದಲಾವಧಿಯಲ್ಲಿ ಆಶು ಮಲಿಕ್ ದಾಳಿಯ ವೇಳೆ ಗಾಯಕ್ಕೆ ತುತ್ತಾದರು. ಆದರೂ ಯಾವುದೇ ಒತ್ತಡಕ್ಕೆ ಒಳಗಾಗದ ಬೆಂಗಳೂರು ಬುಲ್ಸ್ ಆಟಗಾರರು ಸ್ಥಿರ ಪ್ರದರ್ಶನ ನೀಡಿದರು. ಈ ಅವಧಿಯ ಕೊನೆಯ ಕ್ಷಣದಲ್ಲಿ ಬುಲ್ಸ್ ಒಮ್ಮೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಆಲೌಟ್ ಮಾಡಿ ಬೋನಸ್ ಅಂಕವನ್ನು ಕಲೆ ಹಾಕಿತು. ಮೊದಲಾವಧಿಯ ಅಂತ್ಯಕ್ಕೆ ಬೆಂಗಳೂರು 16-9 ಅಂಕಗಳಿಂದ ಮುನ್ನಡೆ ಸಾಧಿಸಿತು.
ಭರ್ಜರಿ ಪ್ರದರ್ಶನ
ಎರಡನೇ ಅವಧಿಯ ಆಟದಲ್ಲೂ ಬೆಂಗಳೂರು ಬುಲ್ಸ್ ಮೊದಲಾವಧಿಯಲ್ಲಿ ತೋರಿಸಿದ ಪ್ರದರ್ಶನವನ್ನು ತೋರಿಸಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಆತಿಥೇಯ ತಂಡ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸುವ ಪ್ಲ್ಯಾನ್ ಎಲ್ಲ ಕೈ ಕೊಟ್ಟಿತು. ಪರಿಣಾಮ ಬುಲ್ಸ್ ಅಂಕಗಳನ್ನು ಸುಲಭವಾಗಿ ಗಳಿಸುತ್ತಾ ಸಾಗಿತು. ಕೊನೆಯ ಕ್ಷಣದ ವರೆಗೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತು. ಕೊನೆಯ ಅವಧಿಯಲ್ಲಿ ಅಂಕಗಳಿಕೆಯಲ್ಲಿ ಮೇಲುಗೈ ಸಾಧಿಸಿ ಅಬ್ಬರಿಸುವ ಆತಿಥೇಯ ಜೈಪುರ ತಂಡದ ಆಸೆ ಮಣ್ಣು ಪಾಲಾಯಿತು. ಪರಿಣಾಮ ಈ ಅವಧಿಯಲ್ಲೂ ಬೆಂಗಳೂರು ಬುಲ್ಸ್ ಅಬ್ಬರಿಸಿತು. ಅಲ್ಲದೆ ಪಂದ್ಯವನ್ನು ಸುಲಭವಾಗಿ ಗೆದ್ದು ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications