Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇನ್ನು ಪ್ರೊ ಕಬಡ್ಡಿ ಹವಾ: ಇಲ್ಲಿದೆ ಬೆಂಗಳೂರು ಬುಲ್ಸ್ ತಂಡ ವೇಳಾಪಟ್ಟಿ

12ನೇ ಆವೃತ್ತಿಯ ಪ್ರೊ ಕಬಡ್ಡಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಒಟ್ಟು 12 ತಂಡಗಳು ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಕಾದಟ ನಡೆಸಲಿವೆ. ಗುಂಪು ಹಂತದಲ್ಲಿ ಒಟ್ಟು 108 ಪಂದ್ಯಗಳು ನಡೆಯಲಿದ್ದು, ಪ್ರತಿ ತಂಡವೂ ಸಹ 18 ಪಂದ್ಯಗಳನ್ನು ಆಡಲಿದೆ. ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ತಮಿಳು ತಲೈವಾಸ್‌ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಕಾದಾಟ ನಡೆಸಲಿದ್ದು, ಈ ಪಂದ್ಯಕ್ಕೆ ವೈಜಾಗ ಮೈದಾನ ಆತಿಥ್ಯ ನೀಡಲಿದೆ.

ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್ ಸಹ ಈ ಟೂರ್ನಿಯಲ್ಲಿ ಎರಡನೇ ಪ್ರಶಸ್ತಿಯ ಹುಡುಕಾಟದೊಂದಿಗೆ ಅಂಗಳ ಪ್ರವೇಶಿಸಲಿದೆ. ಈ ಬಾರಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಅಂಕುಶ್‌ ರಾಠೆ ಮುನ್ನಡೆಸಲಿದ್ದಾರೆ. ಅಂಕುಶ್ ರಾಠೆ ಬಲ ಕಾರ್ನರ್‌ ಡಿಫೆಂಡರ್‌. ಕನ್ನಡಿಗ ಬಿಸಿ ರಮೇಶ್‌ ತಂಡದ ಮುಖ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸ್ಟಾರ್ ಹಾಗೂ ಅನುಭವಿ ಆಟಗಾರರ ಬಳಗವನ್ನು ಹೊಂದಿರುವ ಬೆಂಗಳೂರು ಬುಲ್ಸ್‌ ಶುಭಾರಂಭ ಮಾಡುವ ಕನಸಿಲ್ಲಿದೆ. ಈ ಬಾರಿ ಬುಲ್ಸ್ ತಂಡದ ರಕ್ಷಣಾ ವಿಭಾಗ ಬಲಾಢ್ಯವಾಗಿದೆ. ರೈಡಿಂಗ್‌ನಲ್ಲಿ ಸ್ಟಾರ್ ಆಟಗಾರರು ಅಂಕ ಕಲೆ ಹಾಕಿದಲ್ಲಿ ಗೆಲುವಿನ ಆಸೆ ಚಿಗುರುತ್ತದೆ.

Bengaluru Bulls Pro Kabaddi League Schedule and Team Details

ಬೆಂಗಳೂರು ಬುಲ್ಸ್ ತಂಡದ ಲೀಗ್‌ ಹಂತದ ವೇಳಾ ಪಟ್ಟಿ

ಪುಣೇರಿ ಪಲ್ಟನ್, ಆ.29, ರಾತ್ರಿ 9ಕ್ಕೆ
ದಬಾಂಗ್ ದೆಹಲಿ, ಸೆ.2, ರಾತ್ರಿ 8ಕ್ಕೆ
ಯು ಮುಂಬಾ, ಸೆ.5, ರಾತ್ರಿ 8ಕ್ಕೆ
ಪಾಟ್ನಾ ಪೈರೇಟ್ಸ್‌, ಸೆ.6, ರಾತ್ರಿ 8ಕ್ಕೆ
ಹರಿಯಾಣ ಸ್ಟೀಲರ್ಸ್‌, ಸೆ.8, ರಾತ್ರಿ 8ಕ್ಕೆ
ಜೈಪೂರ್ ಪಿಂಕ್‌ ಪ್ಯಾಂಥರ್ಸ್‌, ಸೆ.12, ರಾತ್ರಿ ಕ್ಕೆ
ತೆಲುಗು ಟೈಟಾನ್ಸ್‌, ಸೆ.15, ರಾತ್ರಿ 9ಕ್ಕೆ
ತಮಿಳು ತಲೈವಾಸ್‌, ಸೆ.16, ರಾತ್ರಿ 9ಕ್ಕೆ
ಗುಜರಾತ್ ಟೈಟಾನ್ಸ್‌, ಸೆ.22, ರಾತ್ರಿ 8ಕ್ಕೆ
ಯುಪಿ ಯೋಧಾಸ್‌, ಸೆ.25, ರಾತ್ರಿ 8ಕ್ಕೆ
ಪುಣೇರಿ ಪಲ್ಟನ್‌, ಅ.2, ರಾತ್ರಿ 8ಕ್ಕೆ
ತಮಿಳು ತಲೈವಾಸ್‌, ಅ.5, ರಾತ್ರಿ 9ಕ್ಕೆ
ಜೈಪೂರ್ ಪಿಂಕ್‌ ಪ್ಯಾಂಥರ್ಸ್‌, ಅ.11, ರಾತ್ರಿ 8ಕ್ಕೆ
ಬಂಗಾಳ ವಾರಿಯರ್ಸ್‌, ಅ.12, ರಾತ್ರಿ 9ಕ್ಕೆ
ಪಾಟ್ನಾ ಪೈರೇಟ್ಸ್‌ಮ ಅ.16, ಸಂಜೆ 7.30ಕ್ಕೆ
ದಬಾಂಗ್‌ ದೆಹಲಿ, ಅ.18, ಸಂಜೆ 7.30ಕ್ಕೆ
ಬಂಗಾಳ ವಾರಿಯರ್ಸ್‌, ಅ.22, ರಾತ್ರಿ 8.30ಕ್ಕೆ
ಗುಜರಾತ್ ಟೈಟಾನ್ಸ್‌, ಅ.23, ಸಂಜೆ 7.30ಕ್ಕೆ

Story first published: Thursday, August 28, 2025, 16:00 [IST]
Other articles published on Aug 28, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+