Pro Kabaddi: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್ ಸೋಲು
ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ 11ನೇ ಆವೃತ್ತಿ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿನ ಕಹಿಯನ್ನು ಕಂಡಿದೆ. ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 36-57 ಅಂಕಗಳಿಂದ ಯುಪಿ ಯೋಧಾಸ್ ವಿರುದ್ಧ ಸೋಲು ಕಂಡಿತು. ಈ ಮೂಲಕ ಬೆಂಗಳೂರು ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲೂ ಆಘಾತ ಅನುಭವಿಸಿದೆ. ಯುಪಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
ಬೆಂಗಳೂರು ತಂಡದ ನ್ಯೂನತೆ ಅರಿತು ಆಡಿದ ಯುಪಿ ಯೋಧಾಸ್ ಮೊದಲಾವಧಿಯಿಂದ ಅಬ್ಬರದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಯು.ಪಿ ದಾಳಿಯ ಮೂಲಕ ಹೆಚ್ಚಿನ ಅಂಕವನ್ನು ಕಲೆ ಹಾಕಿತು. ಮೊದಲ 20 ನಿಮಿಷದ ಆಟದಲ್ಲಿ ಯು.ಪಿ 33-15 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ಬೆಂಗಳೂರು ಬುಲ್ಸ್ 2 ಬಾರಿ ಅಂಕಣವನ್ನು ಖಾಲಿ ಮಾಡಿತು.

ಕಳಪೆ ಟ್ಯಾಕಲ್
ಎರಡನೇ ಅವಧಿಯ ಆಟದಲ್ಲೂ ಬೆಂಗಳೂರು ಬುಲ್ಸ್ ಅಂಕಗಳ ಬೇಟೆಯನ್ನು ನಡೆಸಿತು. ಆದರೆ ಮೊದಲಾವಧಿಯಲ್ಲಿ ಸಾಧಿಸಿದ ಅಂಕಗಳ ಅಂತರವನ್ನು ಮ್ಯಾಚ್ ಮಾಡಲು ಆಗಲಿಲ್ಲ. ಈ ಅವಧಿಯಲ್ಲಿ ಬೆಂಗಳೂರು 21-24 ಅಂಕಗಳ ಹಿನ್ನಡೆ ಕಂಡಿತು. ಮೂರನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡದ ಟ್ಯಾಕಲ್ ಸಾಧಾರಣವಾಗಿತ್ತು. ಯುಪಿ ಯೋಧಾಸ್ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ವೇಳೆಯೂ ಬೆಂಗಳೂರು ಮತ್ತೊಮ್ಮೆ ಆಲೌಟ್ ಆಯಿತು.
ಸುರೇಂದ್ರ ಕಮಾಲ್
ಪಂದ್ಯದಲ್ಲಿ ಉಭಯ ತಂಡಗಳು ತಲಾ 42 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿದವು. ಈ ವೇಳೆ ಬುಲ್ಸ್ ದಾಳಿಯಲ್ಲಿ 22 ಬಾರಿ ಅಂಕಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಯಿತು. ಯು.ಪಿ 24 ಬಾರಿ ಎದುರಾಳಿ ಆಟಗಾರರನ್ನು ಔಟ್ ಮಾಡುವಲ್ಲಿ ಸಫಲವಾಯಿತು. ಆದರೆ ಯುಪಿ ಮಲ್ಟಿಪಲ್ ರೇಡ್ ಪಾಯಿಂಟ್‌ಗಳನ್ನು ತಂದಿದ್ದು, ಬೆಂಗಳೂರಿಗೆ ಹಿನ್ನಡೆಯಾಯಿತು. ಟ್ಯಾಕಲ್‌ನಲ್ಲಿ ಬುಲ್ಸ್ ಆಟ ಮಂಕಾಗಿತ್ತು.
ಬೆಂಗಳೂರು ಬುಲ್ಸ್ ತಂಡದ ಪರ ಪ್ರದೀಪ್ ನರ್ವಾಲ್ 16, ಜತೀನ್ 9 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು. ವಿಜೇತ ತಂಡದ ಪರ ಸುರೇಂದ್ರ ಗಿಲ್ 17, ಭರತ್ 14 ಅಂಕವನ್ನು ಬುಟ್ಟಿಗೆ ಹಾಕಿಕೊಂಡರು.

ಜೈಪುರಗೆ ಅಗ್ರಸ್ಥಾನ
ಇದಕ್ಕೂ ಮೊದಲು ನಡೆದ ಮೊದಲ ಪಂದ್ಯದಲ್ಲಿ ಜೈಪೂರ್ ಪಿಂಕ್ ಪ್ಯಾಂಥರ್ಸ್ 52-22ರಿಂದ ತೆಲುಗು ಟೈಟನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಜೈಪುರ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಮೊದಲಾವಧಿಯಲ್ಲಿ ಉಭಯ ತಂಡಗಳು ಸ್ಥಿರ ಪ್ರದರ್ಶನ ನೀಡಿದವು. ಆದರೆ ಎರಡನೇ ಅವಧಿಯ ಆಟದಲ್ಲಿ ಜೈಪುರ ಅಬ್ಬರದ ಆಟವನ್ನು ಪ್ರದರ್ಶಿಸಿತು. ಕೊನೆಯ 20 ನಿಮಿಷದಲ್ಲಿ ಪಿಂಕ್ ಪ್ಯಾಥರ್ಸ್ 34-9 ಅಂಕಗಳನ್ನು ಕಲೆ ಹಾಕಿತು. ಈ ಅವಧಿಯ ದಾಳಿಯಲ್ಲಿ 17, ಟ್ಯಾಕಲ್‌ನಲ್ಲಿ 10 ಅಂಕಗಳನ್ನು ಕಲೆ ಹಾಕಿದರೆ, ಎದುರಾಳಿಯನ್ನು ಮೂರು ಬಾರಿ ಜೈಪುರ ಆಲೌಟ್ ಮಾಡಿತು.
ಜೈಪುರ ಪರ ಅರ್ಜುನ್ ದೇಶ್ವಾಲ್ 19, ಅಭಿಜೀತ್ ಮಲಿಕ್ 8 ಅಂಕವನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ಪರಾಜಿತ ತಂಡದ ಪರ ಪವನ್ ಶೆರಾವತ್ 7 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications