Pro Kabaddi: ಮೂರನೇ ಗೆಲುವಿನ ಹುಡುಕಾಟದಲ್ಲಿ ಬುಲ್ಸ್: ಪಾಟ್ನಾ, ದಬಾಂಗ್‌ಗೆ ಭರ್ಜರಿ ಜಯ
ಶನಿವಾರ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಹಾಗೂ ಬಂಗಾಳ್ ವಾರಿಯರ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಉಭಯ ತಂಡಗಳು ಸ್ಥಿರ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಎರಡೂ ತಂಡಗಳು ಅಂಕಪಟ್ಟಿಯಲ್ಲಿ ಕೆಳಗಿದ್ದು, ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಪೂರ್ಣ ಅಂಕವನ್ನು ಕಲೆ ಹಾಕುವ ವಿಶ್ವಾಸವನ್ನು ಹೊಂದಿದೆ. ಬೆಂಗಳೂರು ತಂಡ ಟೂರ್ನಿಯಲ್ಲಿ ಮೂರನೇ ಗೆಲುವಿನ ಕನಸು ಕಾಣುತ್ತಿದೆ.
ಬೆಂಗಳೂರು ಬುಲ್ಸ್ ತಂಡ ಹಾಗೂ ಬಂಗಾಳ ತಂಡಗಳು ಈಗಾಗಲೇ ಟೂರ್ನಿಯಲ್ಲಿ 22 ಬಾರಿ ಮುಖಾಮುಖಿಯಾಗಿದ್ದು, ಬಂಗಾಳ್ 13 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಬುಲ್ಸ್ 9 ಗೆಲುವು ದಾಖಲಿಸಿದೆ. ಬಂಗಾಳ್ ತಂಡದ ಪರ ನಿತೀಶ್ ಕುಮಾರ್ ಹಾಗೂ ಮಣಿಂದರ್ ಸಿಂಗ್ ದಾಳಿಯಲ್ಲಿ ಅಂಕಗಳನ್ನು ಕಲೆ ಹಾಕಬಲ್ಲರು.

ಬುಲ್ಸ್ ಪರ ಪ್ರದೀಪ್ ನರ್ವಾಲ್, ಅಜಿಂಕ್ಯ ಪವಾರ್ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ ಅಂಕಗಳನ್ನು ಬಾಚಿಕೊಳ್ಳಬಹುದು. ಬೆಂಗಳೂರು ಪರ ನೀತಿನ್ ರಾವಲ್ ಟ್ಯಾಕಲ್‌ನಲ್ಲಿ ಬಲ ತುಂಬಿದ ಪ್ಲೇಯರ್. ಇವರು ಅತಿ ಹೆಚ್ಚು ಟ್ಯಾಕಲ್ ಪಾಯಿಂಟ್‌ಗಳನ್ನು ಕಲೆ ಹಾಕಿದ ಎರಡನೇ ಪ್ಲೇಯರ್ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರಿಗೆ ಸೌರಭ್ ನಂದಾಲ್ ಉತ್ತಮ ಸಾಥ್ ನೀಡಬಹುದು. ಬಂಗಾಳ್ ಪರ ಫಜಲ್ ಅತ್ತಾಚಲಿ ಟ್ಯಾಕಲ್‌ನಲ್ಲಿ ಬುಲ್ಸ್ ತಂಡವನ್ನು ಕಾಡಲು ಸಿದ್ಧರಾಗಿದ್ದಾರೆ. ಶನಿವಾರ ನಡೆಯುವ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು ಕಾದಾಟ ನಡೆಸಲಿವೆ.
ಮೂರನೇ ಸ್ಥಾನಕ್ಕೆ ದಬಾಂಗ್ ಬಡ್ತಿ
ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆಸಿ 39-26 ಅಂಕಗಳಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ದಬಾಂಗ್ ದೆಹಲಿ ಕೆಸಿ ಆಡಿದ 9 ಪಂದ್ಯಗಳಲ್ಲಿ 4 ಜಯ, 5 ಸೋಲು ಕಂಡಿದ್ದು, 24 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಬಡ್ತಿ ಪಡೆದಿದೆ. ತಲೈವಾಸ್ ನಾಲ್ಕನೇ ಗೆಲುವಿನ ಆಸೆ ದೂರ ಸರಿದಿದೆ.

ಮೊದಲಾವಧಿಯ ಆಟದಿಂದಲೂ ದಬಾಂಗ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಲ್ಲದೆ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾ ಸಾಗಿತು. ದಾಳಿ ಹಾಗೂ ಟ್ಯಾಕಲ್‌ನಲ್ಲಿ ದಬಾಂಗ್ ದೆಹಲಿ ಎರಡೂ ಅವಧಿಯಲ್ಲಿ ಸ್ಥಿರ ಪ್ರದರ್ಶನ ನೀಡಿತು. ಈ ಪಂದ್ಯದಲ್ಲಿ ತಮಿಳು ತಲೈವಾಸ್ ಒಂದು ಬಾರಿ ಆಲೌಟ್ ಆಯಿತು. ದಬಾಂಗ್ ಪರ ನಾಯಕ ಆಶು ಮಲಿಕ್ 12 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದರು.

ಜಿದ್ದು ಗೆದ್ದ ಪಾಟ್ನಾ
ಎರಡನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳ ನಡುವಿನ ಜಿದ್ದಾಜಿದ್ದಿನ ಕಾದಾಟದಲ್ಲಿ ಪಾಟ್ನಾ ಜಯ ಸಾಧಿಸಿದೆ. ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಪಾಟ್ನಾ ಅಂಕಗಳನ್ನು ಕೊಳ್ಳೆ ಹೊಡೆಯಿತು. ದಾಳಿಯಲ್ಲಿ ಪಾಟ್ನಾ 20 ಅಂಕ ಸೇರಿಸಿದರೆ, ಟ್ಯಾಕಲ್‌ನಲ್ಲಿ 10 ಅಂಕ ಸೇರಿಸಿತು. ವಿಜೇತ ತಂಡದ ಪರ ದೇವಾಂಕ್ 11 ಹಾಗೂ ಅಯಾನ್ 14 ಅಂಕ ಕಲೆ ಹಾಕಿ ಬೀಗಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications