For Quick Alerts
ALLOW NOTIFICATIONS  
For Daily Alerts

Pro Kabaddi: ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಎತ್ತಿದ್ದು ಯಾರು?

ಇನ್ನೇನು ಕೆಲವೇ ದಿನಗಳಲ್ಲಿ ಪ್ರೊ ಕಬಡ್ಡಿ ಲೀಗ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ತಮ್ಮ ಧಮಾಕೆದಾರ್ ಪ್ರದರ್ಶನವನ್ನು ನೀಡಿ ಚಾಂಪಿಯನ್ ಪಟ್ಟವನ್ನು ಪಡೆಯುವ ಕನಸು 12 ತಂಡಗಳದ್ದಾಗಿದೆ. ಈಗಾಗಲೇ ನಡೆದ ಹರಾಜಿನಲ್ಲಿ ಮಾಲೀಕರು ಆಟಗಾರರಿಗೆ ಹಣವನ್ನು ಹೂಡಿ, ತಂಡಕ್ಕೆ ಬರಮಾಡಿಕೊಂಡಿದ್ದಾರೆ.

ಪ್ರೊ ಕಬಡ್ಡಿ ಲೀಗ್‌ ಇತಿಹಾಸವನ್ನು ನೋಡುವುದಾದರೆ ಆರಂಭದಲ್ಲಿ ಎಂಟು ತಂಡಗಳು ಕಾದಾಟ ನಡೆಸಿದವು. ಈಗ ಒಟ್ಟು 12 ತಂಡಗಳು ಫೈಟ್ ನಡೆಸಲಿವೆ. ಈ ಮೆಗಾ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡಗಳ ಪಟ್ಟಿ ಇಲ್ಲಿದೆ.

Complete List of Pro Kabaddi League Champions and Runners-Up by Season

ಜೈಪುರ್‌ ಚಾಂಪಿಯನ್‌

ಮೊದಲ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಇತಿಹಾಸದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್‌ ತಂಡ 35-24ರಿಂದ ಯು-ಮುಂಬಾ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟಿದೆ.

ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಯು-ಮುಂಬಾ ತಂಡ ಅಮೋಘ ಪ್ರದರ್ಶನ ನೀಡಿ ಫೈನಲ್‌ಗೆ ಪ್ರವೇಶ ಪಡೆದಿತ್ತು. ಈ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಸಹ ಚೇತೋಹಾರಿ ಪ್ರದರ್ಶನ ನೀಡಿತ್ತು. ಉಭಯ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಿದವು. ಫೈನಲ್‌ ಪಂದ್ಯದಲ್ಲಿ ಮುಂಬಾ 36-30 ರಿಂದ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿತು.

ಪಾಟ್ನಾ ಹ್ಯಾಟ್ರಿಕ್

ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಮೂರು ಬಾರಿ ಸತತ ಪ್ರಶಸ್ತಿಗಳನ್ನು ಎತ್ತಿದ ಕೀರ್ತಿ ಪಾಟ್ನಾ ಪೈರೇಟ್ಸ್‌ ಪಾಲಾಗಿದೆ. ಈ ತಂಡ 3,4 ಹಾಗೂ ಐದನೇ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಸಾಧನೆ ಮಾಡಿದೆ. ಮೊದಲ ಫೈನಲ್‌ ಪಂದ್ಯದಲ್ಲಿ ಮುಂಬಾ ತಂಡವನ್ನು ಮಣಿಸಿದ ಪಾಟ್ನಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.

Complete List of Pro Kabaddi League Champions and Runners-Up by Season

ನಾಲ್ಕನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಫೈನಲ್‌ನಲ್ಲಿ ಜೈಪೂರ್ ಪಿಂಕ್ ಪ್ಯಾಂಥರ್ಸ್‌ ತಂಡವನ್ನು ಮಣಿಸಿದ್ದ ಪಾಟ್ನಾ ಎರಡನೇ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಐದನೇ ಆವೃತ್ತಿಯಲ್ಲೂ ಸಂಘಟಿತ ಆಟದ ಪ್ರದರ್ಶನ ನೀಡಿದ ಪಾಟ್ನಾ ಹ್ಯಾಟ್ರಿಕ್‌ ಪ್ರಶಸ್ತಿಯನ್ನು ಗೆದ್ದಿತು.

ಬುಲ್ಸ್‌ಗೆ ಪಟ್ಟ

ಆರನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಬೆಂಗಳೂರು ಬುಲ್ಸ್‌ ಚೊಚ್ಚಲ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು. ಫೈನಲ್‌ ಪಂದ್ಯದಲ್ಲಿ ಬೆಂಗಳೂರು 38-33 ರಿಂದ ಗುಜರಾತ್ ಪಾರ್ಚೂನ್‌ ಜೈಂಟ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು.

ಏಳನೇ ಆವೃತ್ತಿಯ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್‌ 39-34 ರಿಂದ ದಬಾಂಗ್‌ ದೆಹಲಿ ತಂಡವನ್ನು, ಎಂಟನೇ ಆವೃತ್ತಿಯಲ್ಲಿ ದಬಾಂಗ್ ದೆಹಲಿ 37-36ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು, ಒಂಬತ್ತನೇ ಆವೃತ್ತಿಯಲ್ಲಿ ಜೈಪೂರ್ ಪಿಂಕ್ ಪ್ಯಾಂಥರ್ಸ್ 33-29 ರಿಂದ ಪುಣೇರಿ ಪಲ್ಟನ್‌ ತಂಡವನ್ನು, 10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪುಣೇರಿ ಪಲ್ಟನ್‌ 28-25ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದವು.

Story first published: Wednesday, August 28, 2024, 17:57 [IST]
Other articles published on Aug 28, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+