Pro Kabaddi: ದಬಾಂಗ್ ದೆಹಲಿ ತಂಡಕ್ಕೆ "ಸೂಪರ್" ಜಯ
ಚೆನ್ನೈ: ಹಾಲಿ ಚಾಂಪಿಯನ್ಸ್ ಹರಿಯಾಣ ಸ್ಟೀಲರ್ಸ್ ವಿರುದ್ಧ ಸಂಘಟಿತ ಆಟದ ಪ್ರದರ್ಶನ ನೀಡಿದ ದಬಾಂಗ್ ದೆಹಲಿ ಕೆಸಿ ಟೈ ಬ್ರೇಕ್‌ರನಲ್ಲಿ ಸೂಪರ್ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ದಬಾಂಗ್ ದೆಹಲಿ ಟೂರ್ನಿಯಲ್ಲಿ 11ನೇ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆಸಿ ಹಾಗೂ ಹರಿಯಾಣ ಸ್ಟೀಲರ್ಸ್ ತಂಡಗಳು ನಿಗದಿತ ಸಮಯದಲ್ಲಿ ತಲಾ 33 ಅಂಕಗಳನ್ನು ಕಲೆ ಹಾಕಿದ್ದರಿಂದ ಫಲತಾಂಶ ಅರಿಯಲು ಟೈ ಬ್ರೇಕ್ ಮೊರ ಹೋಗಲಾಯಿತು. ಈ ಅವಧಿಯಲ್ಲಿ ದಬಾಂಗ್ ದೆಹಲಿ ತಂಡದ ಅಮೋಘ ಪ್ರದರ್ಶನವನ್ನು ನೀಡಿ 9-3 ಅಂಕಗಳಿಂದ ಮುನ್ನಡೆ ಸಾಧಿಸಿ ಜಯ ತನ್ನದಾಗಿಸಿಕೊಂಡಿತು. ಮೊದಲಾವಧಿಯ ಆಟ ಜಿದ್ದಾಜಿದ್ದಿನಿಂದ ಕೂಡಿತ್ತು. ಈ ಅವಧಿಯಲ್ಲಿ ಉಭಯ ತಂಡಗಳು ಸುಲಭವಾಗಿ ಅಂಕಗಳನ್ನು ಎದುರಾಳಿ ತಂಡಗಳಿಗೆ ಬಿಟ್ಟುಕೊಡಲಿಲ್ಲ. ಈ ಅವಧಿಯಲ್ಲಿ ಹರಿಯಾಣ ಒಮ್ಮೆ ದಬಾಂಗ್ ತಂಡವನ್ನು ಆಲೌಟ್ ಮಾಡಿತು. ಈ ವೇಳೆ ಸ್ಟೀಲರ್ಸ್ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ 18-17 ಅಂಕಗಳಿಂದ ಒಂದು ಅಂಕ ಮುನ್ನಡೆ ಸಾಧಿಸಿತು.

ಎರಡನೇ ಅವಧಿಯ ಆಟದಲ್ಲಿ ದಬಾಂಗ್ ದೆಹಲಿ ತಂಡ ಸೊಗಸಾದ ಆಟವನ್ನು ಆಡಿತು. ಈ ಅವಧಿಯಲ್ಲಿ ಹರಿಯಾಣ ದಾಳಿಯಲ್ಲಿ 11 ಅಂಕಗಳನ್ನು ಕಲೆ ಹಾಕಿತು. ಅಲ್ಲದೆ ಎರಡನೇ ಅವಧಿಯಲ್ಲಿ ದಬಾಂಗ್ ದಾಳಿಯಲ್ಲಿ 8 ಹಾಗೂ ಟ್ಯಾಕಲ್‌ನಲ್ಲಿ 6 ಅಂಕವನ್ನು ಸೇರಿಸಿತು. ಅಲ್ಲದೆ ದೆಹಲಿ ಈ ಅವಧಿಯಲ್ಲಿ ಒಮ್ಮೆ ಹರಿಯಾಣ ಸ್ಟೀಲರ್ಸ್ ತಂಡದ ಅಂಗಳವನ್ನು ಖಾಲಿ ಮಾಡಿತು. ದಬಾಂಗ್ ತಂಡದ ಪರ ಅಜಿಂಕ್ಯ ಪವಾರ್ 17 ಬಾರಿ ದಾಳಿ ನಡೆಸಿ 8 ಟಚ್ ಪಾಯಿಂಟ್ ಗಳಿಸಿದರು. ಹರಿಯಾಣ ತಂಡದ ಪರ ಶಿವಂ 10 ಅಂಕ ಕಲೆ ಹಾಕಿತು.
ಅರ್ಜುನ್ ಅಬ್ಬರ
ಇನ್ನೊಂದು ಪಂದ್ಯದಲ್ಲಿ ತಮಿಳು ತಲೈವಾಸ್ ತಂಡ ಭಾರೀ ಅಂತರದ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ತಮಿಳು 56-37 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು. ತಲೈವಾಸ್ ತಂಡದ ಏಕಾಂಗಿ ಆಟವನ್ನು ಪ್ರದರ್ಶಿಸಿತು. ಈ ವೇಳೆ ಸ್ಟಾರ್ ಆಟಗಾರ ಅರ್ಜುನ್ ದೇಶ್ವಾಲ್ 21 ಅಂಕವನ್ನು ಕಲೆ ಹಾಕಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications