Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi: ದೆಹಲಿ ಎದುರು ಡುಬ್ಕಿ ಹೊಡೆದ ವಾರಿಯರ್ಸ್

ಆಶು ಮಲಿಕ್, ವಿನಯ್‌ ಅವರ ಮನಮೋಹಕ ಆಟದ ನೆರವಿನಿಂದ ದಬಾಂಗ್‌ ದೆಹಲಿ ಕೆ.ಸಿ 33-30 ರಿಂದ ಬಂಗಾಳ ವಾರಿಯರ್ಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು. ಈ ಮೂಲಕ ದೆಹಲಿ ಆಡಿದ 8 ಪಂದ್ಯಗಳಲ್ಲಿ 3 ಜಯ, 5 ಸೋಲು ಕಂಡಿದ್ದು 19 ಅಂಕಗಳನ್ನು ಕಲೆ ಹಾಕಿದೆ. ಬಂಗಾಳ ವಾರಿಯರ್ಸ್ ಮೂರನೇ ಗೆಲುವಿನ ಕನಸು ನುಚ್ಚು ನೂರಾಯಿತು.

ದಬಾಂಗ್ ದೆಹಲಿ ಕೆ.ಸಿ ಆಡಿದ ಮೊದಲಾವಧಿಯ ಆಟದಲ್ಲಿ ಉತ್ತಮ ಮುನ್ನಡೆ ಸಾಧಿಸಿತು. ಬಂಗಾಳ ವಾರಿಯರ್ಸ್‌ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲವಾಯಿತು. ಈ ವೇಳೆ ದಬಾಂಗ್ ದೆಹಲಿ ಕೆಸಿ 12 ರೈಡಿಂಗ್ ಪಾಯಿಂಟ್ ಕಲೆ ಹಾಕಿದರೆ, 3 ಟ್ಯಾಕಲ್ ಪಾಯಿಂಟ್ ಬುಟ್ಟಿಗೆ ಹಾಕಿಕೊಂಡಿತು. ಅಲ್ಲದೆ ಒಂದು ಬಾರಿ ಎದುರಾಳಿ ತಂಡದ ಅಂಗಳ ಖಾಲಿ ಮಾಡಿ ಬೋನಸ್ ಅಂಕ ಕಲೆ ಹಾಕಿತು.

Dabang Delhi KC and Haryana Steelers Secure Victories in Pro Kabaddi League 2024

ದಬಾಂಗ್‌ ಅಬ್ಬರ

ಎರಡನೇ ಅವಧಿಯ ಆಟದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನೀಡಿದವು. ಅಲ್ಲದೆ ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ಈ ಅವಧಿಯಲ್ಲಿ ದಬಾಂಗ್‌ 14- 9 ಅಂಕಗಳಿಂದ ಮುನ್ನಡೆ ಸಾಧಿಸಿತು. ಅಲ್ಲದೆ ಸುಲಭವಾಗಿ ಪಂದ್ಯವನ್ನು ಗೆದ್ದು ಪೂರ್ಣ ಅಂಕವನ್ನು ಮಡಿಲಿಗೆ ಹಾಕಿಕೊಂಡಿತು.

ದೆಹಲಿ ತಂಡದ ಪರ ಆಶು ಮಲಿಕ್ 19 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 7 ಟಚ್, 3 ಬೋನಸ್‌ ಪಾಯಿಂಟ್‌ ಕಲೆ ಹಾಕಿದರು. ವಿನಯ್‌ ದಾಳಿಯಲ್ಲಿ 8 ಅಂಕಗಳನ್ನು ಬಾಚಿಕೊಂಡರು. ಪರಾಜಿತ ತಂಡದ ಪರ ನಿತೀನ್‌ ಕುಮಾರ್‌ 15 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

Dabang Delhi KC and Haryana Steelers Secure Victories in Pro Kabaddi League 2024

ಸ್ಟೀಲರ್ಸ್‌ಗೆ ಜಯ

ಹರಿಯಾಣ ಸ್ಟೀಲರ್ಸ್‌ 35-22 ರಿಂದ ಗುಜರಾತ ಜೈಂಟ್ಸ್‌ ವಿರುದ್ಧ ಜಯ ಸಾಧಿಸಿತು. ಈ ಮೂಲಕ ಹರಿಯಾಣ ಸ್ಟೀಲರ್ಸ್‌ ಆಡಿದ ಐದು ಪಂದ್ಯಗಳಲ್ಲಿ ಮೂರನೇ ಗೆಲುವು ಸಾಧಿಸಿದ್ದು, 16 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ. ಗುಜರಾತ್‌ ಜೈಂಟ್ಸ್‌ ತಂಡದ ಎರಡನೇ ಗೆಲುವಿನ ಆಸೆ ಕೈ ಕೊಟ್ಟಿದೆ.

ಮೊದಲಾವಧಿಯಿಂದಲೂ ಹರಿಯಾಟ ಸ್ಟೀಲರ್ಸ್‌ ಮುನ್ನಡೆ ಕಾಯ್ದುಕೊಂಡಿತು. ಈ ಅವಧಿಯಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಒಮ್ಮೆ ಆಲೌಟ್ ಮಾಡಿದ, ಹರಿಯಾಣ ಬೋನಸ್ ಅಂಕವನ್ನು ಕಲೆ ಹಾಕಿತು. ಎರಡನೇ ಅವಧಿಯ ಆಟದಲ್ಲೂ ಸ್ಟೀಲರ್ಸ್‌ ಅಂಕದ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ಅಲ್ಲದೆ ಸುಲಭವಾಗಿ ಪೂರ್ಣ ಅಂಕ ಸೇರಿಸಿತು. ಹರಿಯಾಣ ಸ್ಟೀಲರ್ಸ್‌ ಪರ ವಿನಯ್ 9 ಅಂಕ ಕಲೆ ಹಾಕಿದರು.

ಜೈಪುರ ಹಾಗೂ ಪಾಟ್ನಾ ಫೈಟ್‌

11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ 41ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಹಾಗೂ ಪಾಟ್ನಾ ಪೈರೇಟ್ಸ್‌ ವಿರುದ್ಧ ಕಾದಾಟ ನಡೆಸಲಿದ್ದು, ಎರಡನೇ ಪಂದ್ಯದಲ್ಲಿ ದಬಾಂಗ್‌ ದೆಹಲಿ ಕೆ.ಸಿ ಮತ್ತು ತಮಿಳು ತಲೈವಾಸ್ ತಂಡಗಳು ಫೈಟ್‌ ನಡೆಸಲಿವೆ.

Story first published: Thursday, November 7, 2024, 22:54 [IST]
Other articles published on Nov 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+