PKL 2025: ದೆಹಲಿಗೆ ಜಯ ಅಗ್ರ ಸ್ಥಾನಕ್ಕೆ ಬಡ್ತಿ: ಹ್ಯಾಟ್ರಿಕ್ ಜಯದ ಕನಸಿನಲ್ಲಿ ಬುಲ್ಸ್
ವೈಜಾಗ್: 12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ದಬಾಂಗ್ ದೆಹಲಿ ಕೆಸಿ ತಂಡ ಆಡಿದ ಐದೂ ಪಂದ್ಯಗಳಲ್ಲಿ ಜಯ ಸಾಧಿಸಿ 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ. ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡ 38-28 ರಿಂದ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಜಯ ಸಾಧಿಸಿತು.
ಮೊದಲಾವಧಿಯ 20 ನಿಮಿಷದಿಂದಲೂ ದಬಾಂಗ್ ದೆಹಲಿ ಭರ್ಜರಿ ಆಟವನ್ನು ಪ್ರದರ್ಶಿಸಿತು. ಈ ಅವಧಿಯಲ್ಲಿ ದಬಾಂಗ್ ದೆಹಲಿ ದಾಳಿಯಲ್ಲಿ 14, ಟ್ಯಾಕಲ್‌ನಲ್ಲಿ 4, ಆಲೌಟ್ ಮೂಲಕ 4 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು. ಅಲ್ಲದೆ ಮೊದಲ 20 ನಿಮಿಷದ ಆಟದಲ್ಲಿ ದಬಾಂಗ್ ದೆಹಲಿ 21-14 ಅಂಕಗಳಿಂದ ಮುನ್ನಡೆ ಸಾಧಿಸಿತು. ಗುಜರಾತ್ ಜೈಂಟ್ಸ್ ಈ ಅವಧಿಯಲ್ಲಿ ರಕ್ಷಣಾ ವಿಭಾಗದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿತು.

ಮೊದಲಾವಧಿಯಲ್ಲಿ ಮಾಡಿದ ತಪ್ಪುಗಳನ್ನು ಮೆಟ್ಟಿನಿಂತು ಗುಜರಾಟ್ ಟೈಟನ್ಸ್ ಸೆಕೆಂಡ್ ಹಾಫ್‌ನಲ್ಲಿ ಪ್ರದರ್ಶನ ನೀಡುವ ಲೆಕ್ಕಾಚಾರವನ್ನು ಹಾಕಿಕೊಂಡಿತು. ಈ ಅವಧಿಯಲ್ಲಿ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಗುಜರಾತ್ ಜೈಂಟ್ಸ್ ದಬಾಂಗ್ ದೆಹಲಿಗೆ ಸವಾಲು ಎಸೆಯುತು. ಆದರೆ ದಬಾಂಗ್ ದೆಹಲಿ ಈ ಅವಧಿಯಲ್ಲೂ ಸಂಘಟಿತ ಆಟದ ಪ್ರದರ್ಶನ ನೀಡಿ ಭರ್ಜರಿ ಜಯ ಸಾಧಿಸಿತು. ದಬಾಂಗ್ ದೆಹಲಿ ಕೆಸಿ ಪರ ಆಶು ಮಲಿಕ್ 20 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 12 ಟಚ್ ಪಾಯಿಂಟ್ ಹಾಗೂ 2 ಬೋನಸ್ ಪಾಯಿಂಟ್ ಪಡೆದುಕೊಂಡಿತು. ಅಜಿಂಕ್ಯ ಪವಾರ್ 5, ಫಜಲ್ ದಾಳಿಯಲ್ಲಿ 5 ಅಂಕವನ್ನು ಸಂಪಾದಿಸಿ ಗೆಲುವಿನಲ್ಲಿ ಮಿಂಚಿದರು.
ಪಾಟ್ನಾಗೆ ಸೋಲು
ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು-ಮುಂಬಾ ತಂಡ 40-39 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಗೆಲುವಿನ ಮೂಲಕ ಮುಂಬಾ ಟೂರ್ನಿಯಲ್ಲಿ ನಾಲ್ಕನೇ ಗೆಲುವು ದಾಖಲಿಸಿದ್ದು, ಅಮಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಮುಂಬಾ ತಂಡದ ಆರಂಭ ಮೊದಲಿನಿಂದ ಅಮೋಘವಾಗಿತ್ತು. ಈ ಅವಧಿಯಲ್ಲಿ ಮುಂಬಾ 23-15 ಅಂಕಗಳಿಂದ ಪಾಟ್ನಾ ಪೈರೇಟ್ಸ್ ವಿರುದ್ಧ ಮುನ್ನಡೆ ಸಾಧಿಸಿತು. ಈ ವೇಳೆ ಮುಂಬಾ ದಾಳಿಯಲ್ಲಿ 15 ಅಂಕಗಳನ್ನು ಕಲೆ ಹಾಕಿತು. ಅಲ್ಲದೆ ಪಾಟ್ನಾ ತಂಡವನ್ನು ಮುಂಬಾ ಒಮ್ಮೆ ಆಲೌಟ್ ಮಾಡಿತು. ಎರಡನೇ ಅವಧಿಯಲ್ಲಿ ಪಾಟ್ನಾ ಪೈರೇಟ್ಸ್ ಅಂಕಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿತು. ಆದರೆ ಮೊದಲಾವಧಿಯಲ್ಲಿ ಸಾಧಿಸಿದ್ದ ಮುನ್ನಡೆಯನ್ನು ಮೆಟ್ಟಿನಿಲ್ಲುವಲ್ಲಿ ಸಫಲವಾಗಲಿಲ್ಲ. ಸ್ಟಾರ್ ಆಲ್‌ರೌಂಡರ್ ಅಮೀರ್ ಮೊಹಮ್ಮದ್ ಹಾಗೂ ಅನಿಲ್ ಅಬ್ಬರಿಸಿ ಮಿಂಚಿದರು.
ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿ ಬುಲ್ಸ್
ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ಬುಲ್ಸ್, ಈಗ ಗೆಲುವಿನ ಲಯ ಕಂಡುಕೊಂಡಿದೆ. ಶುಕ್ರವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಬುಲ್ಸ್ ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಕಾದಾಟ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications