ಡೆಲ್ಲೀನ ಗೆಲ್ಲೋಕೆ ಬಿಡದ ಜೈಪುರ್, ಬಾಯಗಲಿಸಿ ಬಾಕಿಯಾದ ವೀಕ್ಷಕರು!

ಪಂಜಕುಲ, ಡಿಸೆಂಬರ್ 21: ಹರ್ಯಾಣದ ಪಂಚಕುಲದಲ್ಲಿರುವ ತೌ ದೇವಿ ಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ (ಡಿಸೆಂಬರ್ 20) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು 37-37ರ ಸಮಬಲ ಸಾಧಿಸಿದ್ದವು. ಗೆಲ್ಲೋ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಕ್ಕೆ ಡೆಲ್ಲಿ ಕೊಂಚ ಸಂಕಟ ಪಡಬೇಕಾಯ್ತು.
ಪಂದ್ಯಾರಂಭದಲ್ಲಿ ದಬಾಂಗ್ ಡೆಲ್ಲಿ ಮುಂಚೂಣಿಯಲ್ಲೇ ಇತ್ತು. ಕಡೇ 5 ನಿಮಿಷಕ್ಕೂ ಮೊದಲೂ ಡೆಲ್ಲಿಯೇ ಗೆಲ್ಲೋದು ಅಂತ ಕುಂತು ಪಂದ್ಯ ನೋಡುತ್ತಿದ್ದ ವೀಕ್ಷಕರು ಅಂದುಕೊಂಡಿದ್ದರೋ ಏನೊ, ಆದರೆ ಕಡೇ ಘಳಿಗೆಯಲ್ಲಿ ಪಂದ್ಯ ತಿರುವು ಪಡೆಯಿತು. ಅಂತಿಮ ಕಾದಾಟಕ್ಕಿಳಿದ ಅಭಿಷೇಕ್ ಬಚ್ಚನ್ ಮಾಲಕತ್ವದ ಜೈಪುರ್ ತಂಡ, ಪಂದ್ಯದ ಫಲಿತಾಂಶವನ್ನು ಹಿಡಿದಿಡುವಲ್ಲಿ ಯಶಸ್ವಿಯಾಯ್ತು.
ಜೈಪುರ್ ಪರ ಸೇಲ್ವ ಮಣಿ 11 ಅಂಕ, ದೀಪಕ್ ನಿವಾಸ್ ಹೂಡಾ 8 ಅಂಕ ಸೇರಿಸಿ ತಂಡವನ್ನು ಬೆಂಬಲಿಸಿದರೆ, ದಬಾಂಗ್ ಡೆಲ್ಲಿ ಪರ ಚಂದ್ರನ್ ರಂಜಿತ್ 11, ಪವನ್ ಕುಮಾರ್ ಕಡಿಯಾನ್ 9 ಪಾಯಿಂಟ್ ಕೂಡಿಸಿ ಇತ್ತಂಡಗಳ ರೋಚಕ ಪಂದ್ಯಕ್ಕೆ ಕಾರಣರಾದರು.
ಈ ಪಂದ್ಯದ ಬಳಿಕ ಎ ಝೋನ್‌ನಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್, ಯು ಮುಂಬಾ, ದಬಾಂಗ್ ಡೆಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ. ಬಿ ಝೋನ್‌ನಲ್ಲಿ ಬೆಂಗಳೂರು ಬುಲ್ಸ್, ಪಾಟ್ನಾ ಪೈರೇಟ್ಸ್, ತೆಲುಗು ಟೈಟಾನ್ಸ್ ತಂಡಗಳು ಅಗ್ರ ಮೂರು ಸ್ಥಾನದಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications