For Quick Alerts
ALLOW NOTIFICATIONS  
For Daily Alerts

PKL 2025: ಬಂಗಾಳ ಮಣಿಸಿದ ದೆಹಲಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ

12ನೇ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಹಾಗೂ ದಬಾಂಗ್‌ ದೆಹಲಿ ಕೆಸಿ ತಂಡಗಳು ಭರ್ಜರಿ ಜಯ ಸಾಧಿಸಿವೆ. ಈ ಗೆಲುವಿನ ಮೂಲಕ ದಬಾಂಗ್‌ ದೆಹಲಿ ಕೆಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ದಬಾಂಗ್ ದೆಹಲಿ ಕೆಸಿ 45-34 ರಿಂದ ಬಂಗಾಳ್ ವಾರಿಯರ್ಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ನಾಲ್ಕನೇ ಗೆಲುವಿನ ನಗೆ ಬೀರಿತು.

ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ದಬಾಂಗ್ ದೆಹಲಿ ತಂಡ ಮೊದಲಾವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ದಾಳಿಯಲ್ಲಿ 14 ಹಾಗೂ ಟ್ಯಾಕಲ್‌ನಲ್ಲಿ 6 ಅಂಕವನ್ನು ಕಲೆ ಹಾಕಿದ ದಬಾಂಗ್‌ ದೆಹಲಿ, ಒಂದು ಬಾರಿ ಎದುರಾಳಿಯ ಅಂಗಳವನ್ನು ಖಾಲಿ ಮಾಡಿತು. ಈ ಅವಧಿಯಲ್ಲಿ ಬಂಗಾಳ ಕೇವಲ 14 ಅಂಕಗಳನ್ನು ಗಳಿಸುವಲ್ಲಿ ಮಾತ್ರ ಸಫಲವಾಯಿತು. ಅಲ್ಲದೆ ರಕ್ಷಣಾ ವಿಭಾಗದಲ್ಲಿ ಆಟಗಾರರ ಹೆಚ್ಚಿನ ಅಂಕಗಳನ್ನು ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಪರಿಣಾಮ ದೆಹಲಿ 9 ಅಂಕಗಳ ಮುನ್ನಡೆ ಸಾಧಿಸಿತು.

Dabang Delhi Tops PKL Points Table with Win Jaipur Triumphs in Thriller

ಎರಡನೇ ಅವಧಿಯ ಆಟದಲ್ಲಿ ಬಂಗಾಳ ಪುಟಿದೇಳು ಸೂಚನೆ ನೀಡಿತು. ಆದರೆ ಮೊದಲ ಅವಧಿಯಲ್ಲಿ ಕಂಡಿದ್ದ ಅಂಕಗಳ ಹಿನ್ನಡೆಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಈ ಅವಧಿಯಲ್ಲೂ ದೆಹಲಿ 22-20 ರಿಂದ ಮುನ್ನಡೆ ಸಾಧಿಸಿ ಜಯ ಸಾಧಿಸಿತು. ಒಟ್ಟಾರೆ ಪಂದ್ಯದಲ್ಲಿ ದೆಹಲಿ 41 ಬಾರಿ ಎದುರಾಳಿ ಅಂಗಳವನ್ನು ಪ್ರವೇಶಿಸಿ 20 ಅಂಕಗಳ ಕಲೆ ಹಾಕಿದರೆ, ಬಂಗಾಳ 40 ಬಾರಿ ದಾಳಿ ನಡೆಸಿ 26 ಅಂಕ ಸೇರಿಸಿತು. ಇನ್ನು ಟ್ಯಾಕಲ್‌ನಲ್ಲಿ ದೆಹಲಿ ಕೈ ಮೇಲಾಯಿತು.

ದೆಹಲಿ ತಂಡದ ಪರ ಸ್ಟಾರ್ ರೈಡರ್ ಆಶು ಮಲಿಕ್‌ 25 ಬಾರಿ ದಾಳಿ ನಡೆಸಿ 11 ಟಚ್ ಪಾಯಿಂಟ್ ಹಾಗೂ 5 ಬೋನಸ್ ಪಾಯಿಂಟ್ ಗಳಿಸಿದರು. ಇನ್ನು ನೀರಜ್ ನರ್ವಾಲ್‌ 6, ಅಜಿಂಕ್ಯಾ ಪವಾರ್ 8 ಅಂಕ ಸೇರಿಸಿ ಜಯದಲ್ಲಿ ಮಿಂಚಿದರು. ಬಂಗಾಳ ತಂಡದ ಪರ ದೇವಾಂಕ್‌ 12 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

ರೋಚಕ ಪಂದ್ಯ ಗೆದ್ದ ಜೈಪುರ

ಮಂಗಳವಾರ ನಡೆದ ಎರಡನೇ ಪಂದ್ಯ ರೋಚಕತೆ ಹೆಚ್ಚಿಸಿತ್ತು. ಗುಜರಾತ್ ಟೈಟನ್ಸ್‌ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ನಿಗದಿತ ಅವಧಿಯಲ್ಲಿ 30 ಅಂಕಗಳನ್ನು ಕಲೆ ಹಾಕಿದ್ದರಿಂದ ಫಲಿತಾಂಶವನ್ನು ಅರಿಯಲು ಟೈಬ್ರೇಕ್‌ ಮೊರೆ ಹೋಗಲಾಯಿತು. ಈ ಅವಧಿಯಲ್ಲಿ ಜೈಪುರ 1 ಅಂಕ ಕಲೆ ಹಾಕಿ ಜಯ ಸಾಧಿಸಿತು. ಈ ಗೆಲುವಿನ ಮೂಲಕ ಜೈಪುರ ಟೂರ್ನಿಯಲ್ಲಿ ಎರಡನೇ ಗೆಲುವಿನ ನಗೆ ಬೀರಿತು. ಮೊದಲಾವಧಿಯ ಆಟದಿಂದಲೂ ಜಿದ್ದಾಜಿದ್ದು ಎದ್ದು ಕಂಡಿತು. ಈ ವೇಳೆ ಎರಡೂ ತಂಡಗಳು ಸುಲಭವಾಗಿ ಅಂಕಗಳನ್ನು ಬಿಟ್ಟು ಕೊಡಲಿಲ್ಲ. ಪರಿಣಾಂ ಈ ಅವಧಿಯಲ್ಲಿ ಗುಜರಾತ್ 16-15 ಅಂಕಗಳ ಮುನ್ನಡೆ ಸಾಧಿಸಿತು. ಎರಡನೇ ಅವಧಿಯ ಆಟದಲ್ಲಿ ಜೈಪುರ ಕೊಂಚ ಮುನ್ನಡೆ ಸಾಧಿಸಿ ಸಮಬಲ ಸಾಧಿಸಿತು. ಜೈಪುರ ತಂಡದ ಪರ ನಿತೀನ್ ಕುಮಾರ್ 15 ಅಂಕ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು.

Story first published: Tuesday, September 9, 2025, 23:53 [IST]
Other articles published on Sep 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+