Pro Kabaddi 2023: ಪಾಟ್ನಾ ವಿರುದ್ಧ ಜೈಪೂರ್‌ಗೆ ರೋಚಕ ಜಯ
10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಜೈಪೂರ್ ಪಿಂಕ್ ಪ್ಯಾಂಥರ್ಸ್ ರೋಚಕ ಗೆಲುವು ಸಾಧಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಜೈಪೂರ್ 29-28ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು.
ಈ ಗೆಲುವಿನೊಂದಿಗೆ ಜೈಪೂರ್ ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 2 ಸೋಲು, 1 ಡ್ರಾ ಸಾಧಿಸಿದ್ದು 15 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಾಟ್ನಾ ಪೈರೇಟ್ಸ್ ಈ ಸೋಲಿನೊಂದಿಗೆ ಅಂಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.

ಮೊದಲಾವಧಿಯ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ 16-08 ಮುನ್ನಡೆ ಸಾಧಿಸಿತ್ತು. ಈ ಅವಧಿಯಲ್ಲಿ ದಾಳಿಯಲ್ಲಿ 9, ಟ್ಯಾಕಲ್‌ನಲ್ಲಿ 5 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು.
ಎರಡನೇ ಅವಧಿಯ ಆಟದಲ್ಲಿ ಜೈಪೂರ್ ಅಮೋಘ ಪ್ರದರ್ಶನ ನೀಡಿತು. ಕೊನೆಯ 20 ನಿಮಿಷದಲ್ಲಿ ಜೈಪೂರ್ ಒಟ್ಟು 21 ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ಪಾಟ್ನಾ ಪೈರೇಟ್ಸ್ ತಂಡ 12 ಅಂಕಗಳನ್ನು ಕಲೆ ಹಾಕಿ ನಿರಾಸೆ ಅನುಭವಿಸಿತು. ಎರಡನೇ ಅವಧಿಯಲ್ಲಿ ಜೈಪೂರ್ ತಂಡದ ಸಂಘಟಿತ ಆಟವೇ ಅಂಕಗಳನ್ನು ವೃದ್ಧಿಸಿತು.
ಒಟ್ಟಾರೆ ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದು ಬಾರಿ ಅಲೌಟ್ ಆದವು. ಒಟ್ಟಾರೆ ಜೈಪೂರ್ ಹಾಗೂ ಪಾಟ್ನಾ 13 ರೇಡ್ ಪಾಯಿಂಟ್‌ಗಳನ್ನು ಗಳಿಸಿದವು. ಟ್ಯಾಕಲ್‌ನಲ್ಲೂ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದವು. ವಿಜೇತ ತಂಡದ ಪರ ವಿ ವಿಜೇತ 16 ಅಂಕಗಳನ್ನು ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಪಾಟ್ನಾ ಪರ ಸಚಿನ್, ಸಂದೀಪ್ ಕುಮಾರ್ ತಲಾ 7 ಅಂಕಗಳನ್ನು ಕಲೆ ಹಾಕಿದರು.

ಮುಂಬಾಗೆ ಜಯ
ಭಾನುವಾರ ನಡೆದ ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ತಂಡ 46-33 ಅಂಕಗಳೊಂದಿಗೆ ತಮಿಳು ತಲೈವಾಸ್ ತಂಡವನ್ನು ಮಣಿಸಿತು. ಈ ಮೂಲಕ ಮುಂಬಾ ಟೂರ್ನಿಯಲ್ಲಿ ಮೂರನೇ ಗೆಲುವಿನ ನಗೆ ಬೀರಿದ್ದು, ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ತಲೈವಾಸ್ ಈ ಸೋಲಿನೊಂದಿಗೆ 11ನೇ ಸ್ಥಾನದಲ್ಲಿದೆ.
ಮುಂಬಾ ತಂಡದ ಪರ ಗುಮಾನ್ ಸಿಂಗ್ ಅಬ್ಬರಿಸಿದರು. ಇವರು ಒಟ್ಟು 12 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 11 ಅಂಕಗಳನ್ನು ಬಾಚಿಕೊಂಡರು. ಇದರಲ್ಲಿ 8 ಟಚ್ ಪಾಯಿಂಟ್, 3 ಬೋನಸ್ ಅಂಕ ಸೇರಿದೆ. ತಲೈವಾಸ್ ಪರ ನರೇಂದ್ರ 10, ಅಜಿಂಕ್ಯ 7 ಅಂಕಗಳನ್ನು ಕಲೆ ಹಾಕಿದರು.
ಮುಂಬಾ ತಂಡದ ಮೊದಲಾವಧಿಯಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಈ ಅವಧಿಯಲ್ಲಿ ಮುಂಬಾ 27-16 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು. ದಾಳಿಯಲ್ಲೇ ಹೆಚ್ಚಿನ ಅಂಕಗಳನ್ನು ಮುಂಬಾ ತಂಡ ಕಲೆ ಹಾಕಿತು. ಎರಡನೇ ಅವಧಿಯಲ್ಲಿ ತಲೈವಾಸ್ ಪುಟಿದೇಳುವ ಸೂಚನೆ ನೀಡಿದರೂ, ಈ ಪ್ರದರ್ಶನ ಗೆಲುವಿಗೆ ಸಾಕಾಗಲಿಲ್ಲ. ತಲೈವಾಸ್ ತಂಡಕ್ಕಿಂತ ಮುಂಬಾ ರಕ್ಷಣಾ ವಿಭಾಗದ ಆಟ ಮನಮೋಹಕವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications