Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi: ಬಂಗಾಳ ವಾರ್‌ ಗೆದ್ದ ಗುಜರಾತ್

11ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 51ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ 47-28 ಅಂಕಗಳಿಂದ ಬಂಗಾಳ ವಾರಿಯರ್ಸ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಎರಡನೇ ಗೆಲುವಿನ ನಗೆ ಬೀರಿತು. ಈ ಮೂಲಕ ಆಡಿದ 9 ಪಂದ್ಯಗಳಲ್ಲಿ ಜೈಂಟ್ಸ್‌ 2 ಜಯ, 7 ಸೋಲು ಕಂಡಿದ್ದು 12 ಅಂಕಗಳನ್ನು ಕಲೆ ಹಾಕಿತು. ಬಂಗಾಳ ಆಡಿದ 8 ಪಂದ್ಯಗಳಲ್ಲಿ 3 ಜಯ, 3 ಸೋಲು, 2 ಡ್ರಾ ಸಾಧಿಸಿದೆ.

ಬುಧವಾರ ನಡೆದ ಪಂದ್ಯದಲ್ಲಿ ಜೈಂಟ್ಸ್‌ ಅಬ್ಬರದ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಬಂಗಾಳ ತಂತ್ರವನ್ನು ಅರಿತು ಆಡಿದ ಗುಜರಾತ್‌ ಶ್ರೇಷ್ಠ ಪ್ರದರ್ಶನ ನೀಡಿತು. ಮೊದಲಾವಧಿಯ 20 ನಿಮಿಷದಲ್ಲಿ ಜೈಂಟ್ಸ್‌ 24-13 ಅಂಕಗಳಿಂದ ಮುನ್ನಡೆ ಸಾಧಿಸಿತು. ದಾಳಿಯಲ್ಲಿ ಗುಜರಾತ್‌ 11 ಅಂಕವನ್ನು ಕಲೆ ಹಾಕಿತು. ಇದೇ ವೇಳೆ ರಕ್ಷಣಾ ವಿಭಾಗದಲ್ಲೂ ಜೈಂಟ್ಸ್ 8 ಅಂಕ ಸೇರಿಸಿತು. ಮೊದಲಾವಧಿಯಲ್ಲಿ ಬಂಗಾಳ ಎರಡು ಬಾರಿ ಅಂಗಳವನ್ನು ಖಾಲಿ ಮಾಡಿತು.

Gujarat Giants Dominate Bengal Warriors Win 47-28 in Pro Kabaddi

ಗುಜರಾತ್ ಅಬ್ಬರ

ಮೊದಲಾವಧಿಯಲ್ಲಿ ಸಾಧಿಸಿದ್ದ ಅಂಕಗಳ ಮುನ್ನಡೆಯನ್ನು ಗುಜರಾತ್ ಎರಡನೇ ಅವಧಿಯಲ್ಲಿ ಅಂಕಗಳನ್ನು ಸುಲಭವಾಗಿ ಬಿಟ್ಟುಕೊಡಲಿಲ್ಲ. ಈ ಅವಧಿಯಲ್ಲಿ ಜೈಂಟ್ಸ್‌ 23-15ರಿಂದ ಮುನ್ನಡೆ ಸಾಧಿಸಿ ಭಾರೀ ಅಂತರದ ಗೆಲುವು ಸಾಧಿಸಿತು. ಈ ವೇಳೆಯೂ ದಾಳಿ ಹಾಗೂ ಟ್ಯಾಕಲ್‌ನಲ್ಲಿ ವಿಜೇತ ತಂಡ ಅಮೋಘ ಪ್ರದರ್ಶನ ನೀಡಿತು. ಅಲ್ಲದೆ ಈ ವೇಳೆಯೂ ಬಂಗಾಳ ಒಮ್ಮೆ ಆಲೌಟ್ ಆಯಿತು.

ಗುಜರಾತ್ ತಂಡದ ಪರ ಗುಮನ್ ಸಿಂಗ್ 24 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 14 ಟಚ್ ಪಾಯಿಂಟ್‌ ಹಾಗೂ 3 ಬೋನ್ಸ್ ಅಂಕ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಉಳಿದಂತೆ ಎಲ್ಲ ಆಟಗಾರರು ಸ್ಥಿರ ಆಟದ ಪ್ರದರ್ಶನ ನೀಡಿದರು.

ಯುಪಿ, ತೆಲುಗು ಫೈಟ್‌

ಗುರುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಯುಪಿ ಯೋಧಾಸ್‌, ತೆಲುಗು ಟೈಟಾನ್ಸ್‌ ತಂಡವನ್ನು ಎದುರಿಸಲಿದೆ. ತಮಿಳು ತಲೈವಾಸ್‌ ಹಾಗೂ ಯು ಮುಂಬಾ ತಂಡಗಳು ಗೆಲುವಿಗಾಗಿ ಕಾದಾಟ ನಡೆಸಲಿವೆ.

Gujarat Giants Dominate Bengal Warriors Win 47-28 in Pro Kabaddi

ಸ್ಟೀಲರ್ಸ್‌ಗೆ ಅಗ್ರ ಪಟ್ಟ

ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ 37-32 ರಿಂದ ಪಾಟ್ನಾ ಪೈರೇಟ್ಸ್‌ ತಂಡವನ್ನು ಮಣಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಹರಿಯಾಣ ಆಡಿದ 9 ಪಂದ್ಯಗಳಲ್ಲಿ 7 ಜಯ, 2 ಸೋಲು ಕಂಡಿದ್ದು, 36 ಅಂಕಗಳನ್ನು ಕಲೆ ಹಾಕಿದೆ. ಪಾಟ್ನಾ ಪೈರೇಟ್ಸ್‌ ಆಡಿದ 9 ಪಂದ್ಯಗಳಲ್ಲಿ 4 ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಹರಿಯಾಣ 20-14 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಈ ಅವಧಿಯಲ್ಲಿ ದಾಳಿಯಲ್ಲಿ ಉಭಯ ತಂಡಗಳ ಸಮಯೋಚಿತ ಆಟದ ಪ್ರದರ್ಶನ ನೀಡಿದವು. ಆದರೆ ಟ್ಯಾಕಲ್‌ನಲ್ಲಿ 5 ಅಂಕವನ್ನು ಸ್ಟೀಲರ್ಸ್‌ ಕಲೆ ಹಾಕಿತು.

ಈ ಅವಧಿಯಲ್ಲಿ ಪಾಟ್ನಾ ಒಂದು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯಲ್ಲಿ ಅಬ್ಬರದ ಆಟವನ್ನು ಆಡಿದ ಪಾಟ್ನಾ ಒಂದು ಅಂಕ ಕಲೆ ಹಾಕಿದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ಸ್ಟೀಲರ್ಸ್‌ ಒಂದು ಬಾರಿ ಆಲೌಟ್ ಆಯಿತು. ಸ್ಟೀಲರ್ಸ್ ತಂಡದ ಎಲ್ಲ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡಿ ಗೆಲುವಿನಲ್ಲಿ ಮಿಂಚಿದರು.

Story first published: Wednesday, November 13, 2024, 22:17 [IST]
Other articles published on Nov 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+