PKL 2024: PKL 2024: ಕ್ರಿಕೆಟ್ ಆಟಗಾರರಂತೆ ಕೋಟಿ ರೂ.ಗೆ ಸೇಲ್ ಆದ ಕಬಡ್ಡಿ ಪ್ಲೇಯರ್ಸ್ ಪಟ್ಟಿ ಇಲ್ಲಿದೆ
2024ರ ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಅಕ್ಟೋಬರ್ 18 ರಿಂದ ಪ್ರಾರಂಭವಾಗಲಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಸರಣಿ ಮುಗಿದ ಬಳಿಕ ಪ್ರೊ ಕಬಡ್ಡಿ ಲೀಗ್ ಶುರುವಾಗಲಿದೆ.
ಸತತ ಮೂರು ತಿಂಗಳು ನಡೆಯಲಿರುವ ಪಿಕೆಎಲ್‌ನಲ್ಲಿ 12 ಬಲಿಷ್ಠ ತಂಡಗಳು ಕಾದಾಡಲಿವೆ. ಜನವರಿ 4 ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ. ಅಲ್ಲದೆ ಈ ಫೈನಲ್ ಪಂದ್ಯಕ್ಕೆ ಮೀಸಲು ದಿನವನ್ನು (ಜನವರಿ 5) ನಿಗದಿಪಡಿಸಲಾಗಿದೆ.

ಇತ್ತೀಚೆಗೆ ಮುಂಬೈನಲ್ಲಿ ಪಿಕೆಎಲ್ ಮೆಗಾ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ಈ ಹರಾಜಿಯಲ್ಲಿ ಕೆಲವು ಆಟಗಾರರು ಭಾರಿಮ ಮೊತ್ತವನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ. ಪಿಕೆಎಲ್ ಹರಾಜಿ ಪ್ರಕ್ರಿಯೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಎಂಟು ಆಟಗಾರರು 1 ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತಕ್ಕೆ ಬಿಡ್ ಆಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಸಚಿನ್ ತನ್ವಾರ್
2024ರ ಪ್ರೊ ಕಬಡ್ಡಿ ಲೀಗ್ ಹರಾಜಿನ ಮೊದಲ ದಿನದಂದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ 20 ಆಟಗಾರರನ್ನು 12 ತಂಡಗಳು ಖರೀದಿ ಮಾಡಿದ್ದವು. ಇದರಲ್ಲಿ ಅತಿಹೆಚ್ಚು ಮೊತ್ತ ಪಡೆದ ಆಟಗಾರನಾಗಿ ಸಚಿನ್ ತನ್ವಾರ್ ಹೊರಹೊಮ್ಮಿದ್ದಾರೆ. ತಮಿಳ್ ತಲೈವಾಸ್ ಇವರಿಗೆ 2.15 ಕೋಟಿ ರೂ. ನೀಡಿ ಬಾಜಿ ಗೆದ್ದಿದೆ. 11ನೇ ಆವೃತ್ತಿಯಲ್ಲಿ ಸಚಿನ್ ತಮಿಳು ಪರ ಮ್ಯಾಟ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಮೊಹಮ್ಮದ್ರೇಜಾ ಕಮಾಲ್
ಹರಿಯಾಣ ಸ್ಟೀಲರ್ಸ್ ತಂಡವು ಇರಾನ್‌ನ ಆಲ್‌ರೌಂಡರ್ ಮೊಹಮ್ಮದ್ರೇಜಾ ಶಾದ್ಲೌಯಿ ಚಿಯಾನೆಹ್ ಅವರನ್ನು 2.07 ಕೋಟಿ ರೂ.ಗಳಿಗೆ ಖರೀದಿ ಮಾಡಿದೆ. ಇದರೊಂದಿಗೆ ಮೊಹಮ್ಮದ್ರೇಜಾ ಅವರು ಸತತ ಎರಡನೇ ಬಾರಿಗೆ ಹರಾಜಿನಲ್ಲಿ 2 ಕೋಟಿ ರೂ.ಗಳ ಗಡಿ ದಾಟಿದ ಮೊದಲ ಅಂತಾರಾಷ್ಟ್ರೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಗುಮಾನ್ ಸಿಂಗ್
2024ರ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಅತಿಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರ ಪಟ್ಟಿಯಲ್ಲಿ ಗುಮಾನ್ ಸಿಂಗ್ ಸ್ಥಾನ ಪಡೆದಿದ್ದಾರೆ. ಗುಜರಾತ್ ಜೈಂಟ್ಸ್ ಅವರಿಗೆ 1.97 ಕೋಟಿ ರೂ.ಗಳನ್ನು ನೀಡಿದೆ.
ಪವನ್ ಸೆಹ್ರಾವತ್
ಪಿಕೆಎಲ್‌ನಲ್ಲಿ ಸ್ಟಾರ್ ರೈಡರ್‌ಗಳಲ್ಲಿ ಪವನ್ ಸೆಹ್ರಾವತ್ ಕೂಡ ಒಬ್ಬರು. ಈ ಆಟಗಾರ ಬೆಂಗಳೂರು ಬುಲ್ಸ್ ತಂಡದಲ್ಲಿ ಇದ್ದುಕೊಂಡು ಸಾಕಷ್ಟು ಹೆಸರು ಮಾಡಿದ್ದಾರೆ. ಹೀಗಾಗಿ ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಪವನ್ ಅವರಿಗೆ 1.725 ಕೋಟಿ ರೂ.ಗಳನ್ನು ನೀಡುವ ಮೂಲಕ ತೆಲುಗು ಟೈಟಾನ್ಸ್ ಖರೀದಿ ಮಾಡಿದೆ.
ಭರತ್
ಬೆಂಗಳೂರು ಬುಲ್ಸ್ ತಂಡದಲ್ಲಿ ಭರತ್ ರೈಡರ್ ಆಗಿ ಮಿಂಚಿದ್ದರು. ಇವರು ಕೂಡ ಪಿಕೆಎಲ್‌ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದರು. ಆದರೆ ಬುಲ್ಸ್ ಈ ಬಾರಿ ಭರತ್ ಅವರನ್ನು ಕೈ ಬಿಟ್ಟಿತ್ತು. ಇದರ ಸಂಪೂರ್ಣ ಲಾಭವನ್ನು ಯುಪಿ ಪಡೆದಿದೆ. ಈ ಅವಕಾಶವನ್ನು ಪಡೆದುಕೊಂಡ ಯುಪಿ ಯೋಧಾಸ್ ಅವರನ್ನು 1.30 ಕೋಟಿ ರೂ. ಬಿಡ್ ಮಾಡಿತ್ತು.
ಮಣಿಂದರ್ ಸಿಂಗ್
ಸ್ಟಾರ್ ರೈಡರ್ ಆದ ಮಣಿಂದರ್ ಸಿಂಗ್ ಅವರನ್ನು ಬಿಡ್ ಮಾಡಲು ಭಾರೀ ಪೈಪೋಟಿ ನಡೆದಿತ್ತು. ಬೆಂಗಳೂರು ಬುಲ್ಸ್ ಕೊನೆವರಗೂ ಅವರನ್ನು ಖರೀದಿಸಲು ಪ್ರಯತ್ನಿಸಿತ್ತು. ಆದರೆ ಅಂತಿಮವಾಗಿ ಬೆಂಗಾಲ್ ವಾರಿಯರ್ಸ್ 1.15 ಕೋಟಿ ರೂ. ಕೊಟ್ಟು ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.
ಅಜಿಂಕ್ಯ ಪವಾರ್
ಬೆಂಗಳೂರು ಬುಲ್ಸ್ ತಂಡ ಕಳೆದ ಎರಡು ಪಿಕೆಎಲ್ ಆವೃತ್ತಿಗಳಿಂದ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಬಲಿಷ್ಠ ತಂಡದೊಂದಿಗೆ ಅಂಗಳಕ್ಕೆ ಇಳಿಯುವ ನಿರ್ಧಾರ ಬುಲ್ಸ್ ತಂಡದ್ದಾಗಿದೆ. ಹರಾಜಿನಲ್ಲಿ ದುಬಾರಿ ಬೆಲೆಗೆ ಸ್ಟಾರ್ ರೈಡರ್ ಅಜಿಂಕ್ಯ ಅಶೋಕ್ ಪವಾರ್ ಅವರಿಗೆ 1.107 ಕೋಟಿ ರೂ. ನೀಡಿತ್ತು. ಜೊತೆಗೆ ಪಿಕೆಎಲ್ ದಾಖಲೆಗಳ ರಾಜ ಪರ್ದೀಪ್ ನರ್ವಾಲ್ ಅವರನ್ನು 70 ಲಕ್ಷ ರೂ.ಗಳಿಗೆ ಪ್ರಮುಖ ರೈಡರ್ ಪಡೆದಿದೆ.
ಸುನೀಲ್ ಕುಮಾರ್
ಸುನೀಲ್ ಕುಮಾರ್ 1.15 ಕೋಟಿ ರೂ.ಗಳಿಗೆ ಯು ಮುಂಬಾ ತಂಡವನ್ನು ಸೇರುವ ಮೂಲಕ ಹೊಸ ದಾಖಲೆ ಬರೆದಿದ್ದರು. ಪಿಕೆಎಲ್‌ನಲ್ಲಿ ಭಾರತದ ಅತ್ಯಂತ ದುಬಾರಿ ಬೆಲೆ ಬಿಡ್ ಮಾಡಿದ ಡಿಫೆಂಡರ್ ಆಗಿ ಇತಿಹಾಸ ನಿರ್ಮಿಸಿದ್ದರು. ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆಹ್ ಮತ್ತು ಗುಮಾನ್ ಸಿಂಗ್ ಅವರಂತಹ ಸ್ಟಾರ್ ಆಟಗಾರರೊಂದಿಗೆ ಅವರು 1 ಕೋಟಿ ರೂ. ಕ್ಲಬ್ ಸೇರಿದ್ದರು.
2024ರ ಪಿಕೆಎಲ್ ಹರಾಜಿನಲ್ಲಿ ಅತಿಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರು
1) ಸಚಿನ್ ತನ್ವಾರ್- ತಮಿಳು ತಲೈವಾಸ್- 2.15 ಕೋಟಿ ರೂ
2) ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆಹ್ -ಹರಿಯಾಣ ಸ್ಟೀಲರ್ಸ್- 2.07 ಕೋಟಿ ರೂ
3) ಗುಮಾನ್ ಸಿಂಗ್- ಗುಜರಾತ್ ಜೈಂಟ್ಸ್ -1.97 ಕೋಟಿ ರೂ
4) ಪವನ್ ಸೆಹ್ರಾವತ್- ತೆಲುಗು ಟೈಟಾನ್ಸ್- 1.725 ಕೋಟಿ ರೂ
5) ಭರತ್- ಯುಪಿ ಯೋಧಾಸ್- 1.30 ಕೋಟಿ ರೂ
5) ಮನಿಂದರ್ ಸಿಂಗ್- ಬೆಂಗಾಲ್ ವಾರಿಯರ್ಸ್- 1.15 ಕೋಟಿ ರೂ
6) ಅಜಿಂಕ್ಯ ಅಶೋಕ್ ಪವಾರ್- ಬೆಂಗಳೂರು ಬುಲ್ಸ್- 1.107 ಕೋಟಿ ರೂ
7) ಸುನಿಲ್ ಕುಮಾರ್- ಯು ಮುಂಬಾ- 1.015 ಕೋಟಿ ರೂ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications