For Quick Alerts
ALLOW NOTIFICATIONS  
For Daily Alerts

ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ: ಹೀರೋಸ್‌ಗೆ ಶರಣಾದ ಬುಲ್ಸ್‌

IIPKL 2019: Haryana Heros defeats Telugu Bulls by 44-36

ಮೈಸೂರು, ಮೇ 27: ಸಮಬಲದ ಹೋರಾಟದಿಂದ ಸಾಗಿದ್ದ ಹಣಾಹಣಿಯ ಅಂತಿಮ ಎರಡು ಕ್ವಾರ್ಟರ್‌ಗಳಲ್ಲಿ ಪ್ರಾಬಲ್ಯ ಮೆರೆದ ಹರಿಯಾಣ ಹೀರೋಸ್‌ ತಂಡ ಚೊಚ್ಚಲ ಆವೃತ್ತಿಯ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಟೂರ್ನಿಯ ಇಂಟರ್‌ ಝೋನ್‌ ಪಂದ್ಯದಲ್ಲಿ ತೆಲುಗು ಬುಲ್ಸ್‌ ವಿರುದ್ಧ ಗೆಲುವು ದಕ್ಕಿಸಿಕೊಂಡಿತು.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂನರ್ನಿಯ ಲೇಟೆಸ್ಟ್‌ ಸುದ್ದಿಗಳು

ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ 'ಎ' ಗುಂಪಿನ ನಾಲ್ಕನೇ ಸ್ಥಾನಿ ಹರಿಯಾಣ ಹೀರೋಸ್‌ ತಂಡ 44-36 ಅಂಕಗಳಿಂದ 'ಬಿ' ಗುಂಪಿನ ನಾಲ್ಕನೇ ಸ್ಥಾನಿಯಾಗಿರುವ ತೆಲುಗು ಬುಲ್ಸ್‌ ಎದುರು ಸುಲಭ ಜಯ ತನ್ನದಾಗಿಸಿಕೊಂಡಿತು.

ಟೂರ್ನಿಯ ಎರಡು ಝೋನ್‌ಗಳಲ್ಲಿ ಅಂಕಪಟ್ಟಿಯ ತಳದಲ್ಲಿರುವ ಹರಿಯಾಣ ಹೀರೋಸ್‌ ಮತ್ತು ತೆಲುಗು ಬುಲ್ಸ್‌ ನಡುವಣ ಕಾದಾಟದಲ್ಲಿ ಯಾರು ಗೆಲ್ಲುತ್ತಾರೆಂಬ ಕುತೂಹಲ ಸಾಕಷ್ಟಿತ್ತು. ಅಂತೆಯೇ ಸಂಘಟಿತ ಹೋರಾಟ ನಡೆಸಿದ ಹೀರೋಸ್‌, ಬುಲ್ಸ್‌ ಬಳಗವನ್ನು ಬೇಟೆಯಾಡಿ ಟೂರ್ನಿಯಲ್ಲಿ ತನ್ನ ಎರಡನೇ ಜಯ ದಾಖಲಿಸಿತು. ಆದರೂ 'ಎ' ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದಿರುವ ಹೀರೋಸ್‌, ಆಡಿದ 8 ಪಂದ್ಯಗಳಿಂದ 5 ಸೋಲು, 2 ಜಯ ಮತ್ತೊಂದು ಟೈ ಫಲಿತಾಂಶದೊಂದಿಗೆ 5 ಅಂಕಗಳನ್ನು ಗಳಿಸಿದೆ.

ಮತ್ತೊಂದೆಡೆ ಸತತ ವೈಫಲ್ಯಗಳಿಂದ ಹೊರಬರಲು ಒದ್ದಾಡುತ್ತಿರುವ ತೆಲುಗು ಬುಲ್ಸ್‌ ತಂಡ ಟೂರ್ನಿಯಲ್ಲಿ 8ನೇ ಸೋಲಿನ ಮುಖಭಂಗಕ್ಕೆ ಒಳಗಾಗಿದೆ. ಕೇವಲ 1 ಪಂದ್ಯವನ್ನಷ್ಟೇ ಗೆದ್ದಿರುವ ಬುಲ್ಸ್‌, 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ. ಇದರೊಂದಿಗೆ ಲೀಗ್‌ನಲ್ಲಿ ಮುಂದಿನ ಹಂತಕ್ಕೇರುವ ಬಾಗಿಲು ಬುಲ್ಸ್‌ ಪಾಲಿಗೆ ಬಹುತೇಕ ಮುಚ್ಚಿದಂತಾಗಿದೆ.

ಟೂರ್ನಿಯಲ್ಲಿ ಉಳಿದೆಲ್ಲಾ ತಂಡಗಳಿಗಿಂತಲು ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ತೆಲುಗು ಬುಲ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಪಾಂಡಿಚೆರಿ ಪ್ರೆಡೇಟರ್ಸ್‌ ಎದುರು ಇಂಟರ್‌ ಝೋನ್‌ ಪೈಪೋಟಿ ನಡೆಸಲಿದೆ. ಮತ್ತೊಂದೆಡೆ ಎರಡನೇ ಜಯ ದಾಖಲಿಸಿದ ಆತ್ಮವಿಶ್ವಾಸದಲ್ಲಿರುವ ಹರಿಯಾಣ ಹೀರೋಸ್‌ ತಂಡಕ್ಕೆ ಚೆನ್ನೈ ಚಾಲೆಂಜರ್ಸ್‌ ತಂಡದ ಕಠಿಣ ಸವಾಲೆದುರಾಗಲಿದೆ.

ಇನ್ನು ಪಂದ್ಯದ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಅಲ್ಪ ಮೇಲುಗೈ ಸಾಧಿಸಿದ್ದ ತೆಲುಗು ಬುಲ್ಸ್‌, 10-6 ಮತ್ತು 9-8 ಅಂಕಗಳಿಂದ ಒಟ್ಟಾರೆ 5 ಅಂಕಗಳ ಮುನ್ನಡೆಯಲ್ಲಿತ್ತು. ಆದರೆ, ಮೂರನೇ ಮತ್ತು ನಾಲ್ಕನೇ ಅವಧಿಯಲ್ಲಿ ತಿರುಗಿ ಬಿದ್ದ ಹರಿಯಾಣ ಹೀರೋಸ್‌ ಮಿಂಚಿನ ಆಟವಾಡಿ 16-9 ಮತ್ತು 14-8ರಲ್ಲಿ ಬುಲ್ಸ್‌ ಪಡೆಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಹೀರೋಸ್‌ ಆಕ್ರಮಣಕಾರಿ ದಾಳೆ ಎದುರು ಉತ್ತರಿಸುವಲ್ಲಿ ವಿಫಲಗೊಂಡ ಬುಲ್ಸ್‌ 8ನೇ ಸೋಲಿನ ಆಘಾತಕ್ಕೊಳಗಾಯಿತು.

Story first published: Monday, May 27, 2019, 21:39 [IST]
Other articles published on May 27, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+