For Quick Alerts
ALLOW NOTIFICATIONS  
For Daily Alerts

ಇಂಡೊ ಇಂಟರ್‌ನ್ಯಾಷನಲ್‌ ಕಬಡ್ಡಿ: ಸೆಮಿಫೈನಲ್ಸ್‌ಗೆ ಚೆನ್ನೈ ಚಾಲೆಂಜರ್ಸ್‌

IIPKL: Chennai Challengers take down Pondicherry Predators by 50-42 in a close fight

ಮೈಸೂರು, ಮೇ 28: ಇದರೊಂದಿಗೆ 'ಬಿ' ಗುಂಪಿನಲ್ಲಿ ಆಡಿದ ಒಟ್ಟು 9 ಪಂದ್ಯಗಳಿಂದ 5 ಗೆಲುವು, 3 ಸೋಲು ಮತ್ತೊಂದು ಪಂದ್ಯದಲ್ಲಿ ಟೈ ಫಲಿತಾಂಶದೊಂದಿಗೆ 11 ಅಂಕಗಳನ್ನು ಗಳಿಸಿರುವ ಚೆನ್ನೈ ಚಾಲೆಂಜರ್ಸ್‌ ತಂಡ ಸೆಮಿಫೈನಲ್ಸ್‌ ಹಂತಕ್ಕೆ ರಹದಾರಿ ಪಡೆದುಕೊಂಡಿದೆ. ಆದರೂ, ಲೀಗ್‌ ಹಂತದಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ವಿರುದ್ಧ ಗೆದ್ದು ಗೆಲುವಿನ ಲಯ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಪ್ರಿಡಿಕ್ಷನ್‌

ಮತ್ತೊಂದೆಡೆ 'ಎ' ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿರುವ ಪಾಂಡಿಚೆರಿ ಪ್ರೆಡೇಟರ್ಸ್‌ ತಂಡ 9 ಪಂದ್ಯಗಳಲ್ಲಿ 3 ಜಯ ಮತ್ತು 6 ಸೋಲಿನೊಂದಿಗೆ 6 ಅಂಕಗಳನ್ನು ಗಳಿಸಲಷ್ಟೇ ಶಕ್ತವಾಗಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ತನ್ನ ಅಭಿಯಾನ ಅಂತ್ಯಗೊಳಿಸಲಿದೆ. ಆದರೂ ತನ್ನ ಪಾಲಿನ ಕೊನೆಯ ಲೀಗ್‌ ಪಂದ್ಯದಲ್ಲಿ ದಿಲರ್‌ ಡೆಲ್ಲಿ ತಂಡಕ್ಕೆ ಆಘಾತ ನೀಡಿ ಜಯದೊಂದಿಗೆ ವಿದಾಯ ಹೇಳುವುದನ್ನು ಎದುರು ನೋಡುತ್ತಿದೆ.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೇಟೆಸ್ಟ್‌ ಸುದ್ದಿಗಳು

ಪಂದ್ಯದಲ್ಲಿ ಚೆನ್ನೈ ತಂಡದ ಪರ ಭರ್ಜರಿ ಆಟವಾಡಿದ ರಾಜೇಶ್‌ ಧಿಮಾನ್‌, ತಮ್ಮ ಆಲ್‌ರೌಂಡ್‌ ಆಟದ ಮೂಲಕ 17 ಅಂಕಗಳನ್ನು ಸಂಪಾದಿಸಿ ಮಿಂಚಿದರು. ರೇಡಿಂಗ್‌ನಲ್ಲಿ 7 ಅಂಕಗಳನ್ನು ಗಳಿಸಿದ ರಾಜೇಶ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅಲ್ಲದೆ ಡಿಫೆನ್ಸ್‌ನಲ್ಲಿ 10 ಟ್ಯಾಕಲ್‌ ಅಂಕಗಳನ್ನು ಗಳಿಸಿ ಪಂದ್ಯದ ಅತ್ಯುತ್ತಮ ಡಿಫೆಂಡರ್‌ ಗೌರವವನ್ನೂ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಗೆಲ್ಲುವ ನೆಚ್ಚಿನ ತಂಡ ಯಾವುದು ಎಂದು ಪ್ರಿಡಿಕ್ಟ್‌ ಮಾಡಲಿ ಇಲ್ಲಿ ಕ್ಲಿಕ್‌ ಮಾಡಿ

ಎದುರಾಳಿ ಪಾಂಡಿಚೆರಿ ಪ್ರೆಡೇಟರ್ಸ್‌ ತಂಡದ ಪರ ಅಂತಿಮ ಕ್ಷಣದವರೆಗೂ ಹೋರಾಟ ನಡೆಸಿದ ರೇಡರ್‌ ಕರುಣಾನಿಧಿ 13 ಅಂಕಗಳನ್ನು ಗಳಿದರೆ, ಅವರಿಗೆ ಆರ್‌ ಸುರೇಶ್‌ ಕುಮಾರ್‌ 11 ಅಂಕಗಳನ್ನು ಗಳಿಸಿ ಉತ್ತಮ ಸಾಥ್‌ ನೀಡಿದರು. ಆದರೆ, ನಾಲ್ಕನೇ ಹಾಗೂ ನಿರ್ಣಾಯಕ ಕ್ವಾರ್ಟರ್‌ನಲ್ಲಿ 9-15 ಅಂಕಗಳ ಹಿನ್ನಡೆ ಅನುಭವಿಸಿದ್ದ ಪ್ರೆಡೇಟರ್ಸ್‌ ಸೋಲಿಗೆ ಪ್ರಮುಖ ಕಾರಣವಾಯಿತು. ಸುರೇಶ್‌ ಕುಮಾರ್‌ ಪಂದ್ಯದ ಅತ್ಯುತ್ತಮ ಪ್ರೊಡಕ್ಟೀವ್‌ ರೇಡರ್‌ ಗೌರವಕ್ಕೆ ಪಾತ್ರರಾದರು.

ಕ್ವಾರ್ಟರ್‌ಗಳ ವಿವರ

1ನೇ ಕ್ವಾರ್ಟರ್‌: ಪಾಂಡಿಚೆರಿ 13-14 ಚೆನ್ನೈ

2ನೇ ಕ್ವಾರ್ಟರ್‌: ಪಾಂಡಿಚೆರಿ 11-09 ಚೆನ್ನೈ

3ನೇ ಕ್ವಾರ್ಟರ್‌: ಪಾಂಡಿಚೆರಿ 09-12 ಚೆನ್ನೈ

4ನೇ ಕ್ವಾರ್ಟರ್‌: ಪಾಂಡಿಚೆರಿ 09-15 ಚೆನ್ನೈ

Story first published: Wednesday, May 29, 2019, 22:28 [IST]
Other articles published on May 29, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+