Kabaddi World Cup 2025: ಆಂಗ್ಲರ ನಾಡಿನಲ್ಲಿ ದೇಶೀಯ ಕ್ರೀಡೆ ಹವಾ
ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಭಾಗವಹಿಸಲು ವಿಶ್ವದ ನಾನಾ ಸ್ಟಾರ್ ಆಟಗಾರರು ಈಗ ಭಾರತದತ್ತ ಮುಖ ಮಾಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಸೋಮವಾರ (ಮಾರ್ಚ್ 17) ರಿಂದ ದೇಶೀಯ ಕ್ರೀಡೆಯಾಗಿರುವ ಕಬಡ್ಡಿ ಹವಾ ಆರಂಭವಾಗಲಿದೆ. ಈ ಕ್ರೀಡೆ ಈಗ ಪ್ರಪಂಚದಾದ್ಯಂತ ಖ್ಯಾತಿ ಪಡೆದಿದೆ. ಪ್ರಾಚಿನ ಕಾಲದಿಂದಲೂ ಭಾರತೀಯರು ಈ ಕ್ರೀಡೆಯನ್ನು ಆಡುತ್ತಿದ್ದಾರೆ. ಈಗ ಈ ಕ್ರೀಡೆಯ ವಿಶ್ವಕಪ್ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿದೆ.
ಎರಡನೇ ಆವೃತ್ತಿಯ ಕಬಡ್ಡಿ ವಿಶ್ವಕಪ್ ಇಂಗ್ಲೆಂಡ್‌ನಲ್ಲಿ ಪ್ರಾರಂಭವಾಗಲಿದೆ. ಈ ಟೂರ್ನಿ ಇಂಗ್ಲೆಂಡ್‌ನ ನಾಲ್ಕು ಸ್ಥಳಗಳಲ್ಲಿ ನಡೆಯಲಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ಸೇರಿದಂತೆ ವಿಶ್ವದ 10 ತಂಡಗಳು ಭಾಗವಹಿಸಲಿವೆ. ಈ 10 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ತಲಾ ಐದು ತಂಡಗಳು ಸ್ಥಾನ ಪಡೆದಿವೆ. ಭಾರತ ಪುರುಷರ ಕಬಡ್ಡಿ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಪ್ರತಿ ಗುಂಪಿನಿಂದ ಅಗ್ರ 4 ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಬಳಿಕ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.

ಇದೇ ವೇಳೆ ಮಹಿಳಾ ಕಬಡ್ಡಿ ವಿಶ್ವಕಪ್ ಸಹ ಆಯೋಜಿಸಲಾಗಿದ್ದು, ಒಟ್ಟು ಈ ಟೂರ್ನಿಯಲ್ಲಿ 6 ತಂಡಗಳು ಭಾಗವಹಿಸುತ್ತಿವೆ. 6 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಟಾಪ್ 2 ಸ್ಥಾನವನ್ನು ಪಡೆದ ತಂಡಗಳು ಸೆಮಿಫೈನಲ್ ತಲುಪುತ್ತವೆ. ಇದರಲ್ಲಿ ಭಾರತ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ.
ಭಾರತ ಪುರುಷರ ಮಹಿಳಾ ತಂಡ ಹಾಲಿ ಚಾಂಪಿಯನ್ಸ್
ಟೂರ್ನಿಯಲ್ಲಿ ಭಾರತದ ಮಹಿಳಾ ಹಾಗೂ ಪುರುಷರ ತಂಡಗಳು ಹಾಲಿ ಚಾಂಪಿಯನ್ ಎಂಬ ಹಣೆ ಪಟ್ಟಿಯೊಂದಿಗೆ ಕಣಕ್ಕೆ ಇಳಿಯಲಿವೆ. ಕಳೆದ ಬಾರಿ ನಡೆದ ವಿಶ್ವಕಪ್ ಪುರುಷರ ಫೈನಲ್ ಪಂದ್ಯದಲ್ಲಿ ಭಾರತ 57-27 ಅಂಕಗಳಿಂದ ಇರಾಕ್ ತಂಡವನ್ನು ಸೋಲಿಸಿತ್ತು. ಇನ್ನು ಮಹಿಳಾ ತಂಡ 47-29 ಅಂಕಗಳಿಂದ ತೈವಾನ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.

ಎರಡು ಗುಂಪುಗಳ ವಿವರ
ಗುಂಪು ಎ: ಹಂಗೇರಿ, ಇಂಗ್ಲೆಂಡ್, ಪೋಲೆಂಡ್, ಜರ್ಮನಿ, ಯುಎಸ್ಎ
ಗುಂಪು ಬಿ: ಭಾರತ, ಇಟಲಿ, ಸ್ಕಾಟ್ಲೆಂಡ್, ವೇಲ್ಸ್, ಹಾಂಗ್ ಕಾಂಗ್, ಚೀನಾ
ಭಾರತ ಪುರುಷರ ವೇಳಾಪಟ್ಟಿ
ಮಾರ್ಚ್ 17, ಭಾರತ vs ಇಟಲಿ
ಮಾರ್ಚ್ 18, ಭಾರತ vs ಸ್ಕಾಟ್ಲೆಂಡ್
ಮಾರ್ಚ್ 19, ಭಾರತ vs ಹಾಂಗ್ ಕಾಂಗ್ ಚೀನಾ
ಮಾರ್ಚ್ 20, ಭಾರತ vs ವೇಲ್ಸ್
ಮಹಿಳಾ ಗುಂಪುಗಳು:
ಗುಂಪು ಎ: ಭಾರತ, ವೇಲ್ಸ್, ಪೋಲೆಂಡ್
ಗುಂಪು ಬಿ : ಹಾಂಗ್ ಕಾಂಗ್, ಚೀನಾ, ಹಂಗೇರಿ, ಇಂಗ್ಲೆಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications