ಇನ್ನು 4 ದಿನಗಳಲ್ಲಿ ಪ್ರೊ ಕಬಡ್ಡಿ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಮಹತ್ವದ ಲೀಗ್‌ನಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ಮತ್ತೊಮ್ಮೆ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ. ಈ ಬಾರಿ ತಂಡಕ್ಕೆ ಕನ್ನಡಿಗ ರಮೇಶ್ ಅವರು ಕೋಚ್ ಮಾಡುತ್ತಿದ್ದಾರೆ. ಹೀಗಾಗಿ ನವ ಉತ್ಸಾಹ ತುಂಬಿದೆ. ಆಗಸ್ಟ್ 29ರಿಂದ ಆರಂಭವಾಗಲಿರುವ ಪ್ರೊ ಕಬಡ್ಡಿ ಲೀಗ್‌ಗೂ ಮುನ್ನ ಬೆಂಗಳೂರು ಬುಲ್ಸ್ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಈ ಪ್ರೊಮೋದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದಾರೆ.
2018-19ರಲ್ಲಿ ಬೆಂಗಳೂರು ಬುಲ್ಸ್ ಫೈನಲ್‌ನಲ್ಲಿ ಗುಜರಾತ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಅಲ್ಲಿಂದ ಈ ವರೆಗೆ ಮತ್ತೊಮ್ಮೆ ಕಪ್‌ಗೆ ಮುತ್ತಿಡುವ ಬುಲ್ಸ್ ಆಸೆ, ಫಲಿಸಲಿಲ್ಲ. ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಿರುವ ಬುಲ್ಸ್ ಎರಡನೇ ಪ್ರಶಸ್ತಿಯನ್ನು ಎದುರು ನೋಡುತ್ತಿದೆ. ಬೆಂಗಳೂರು ತಂಡದಲ್ಲಿ ಈ ಬಾರಿ ಸ್ಟಾರ್ ಹಾಗೂ ಅನುಭವಿ ಆಟಗಾರರ ದಂಡೇ ಇದ್ದು ಎರಡನೇ ಬಾರಿ ಚಾಂಪಿಯನ್ ಪಟ್ಟದೇ ಮೇಲೆ ಕಣ್ಣು ನೆಟ್ಟಿದೆ. ಈ ಟೂರ್ನಿ ಆರಂಭಕ್ಕೂ ಮುನ್ನವೇ ಬುಲ್ಸ್ ಪ್ರೊಮೋ ಒಂದನ್ನು ರಿಲೀಸ್ ಮಾಡಿದೆ. ಈ ಪ್ರೊಮೋ ಈಗ ಸಖತ್ ವೈರಲ್ ಆಗುತ್ತಿದೆ.

ಪ್ರೊಮೋದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಕಾಣಿಸಿಕೊಂಡಿದ್ದಾರೆ. ಕಾರ್‌ನಲ್ಲಿ ರಾಹುಲ್ ತಮ್ಮ ಸ್ನೇಹಿತರೊಂದಿಗೆ ಪ್ರಯಾಣ ಮಾಡುವ ವಿಡಿಯೋವನ್ನು ಪ್ರೊಮೋದಲ್ಲಿ ಕಾಣಬಹುದಾಗಿದೆ. ಈ ವೇಳೆ ರಾಹುಲ್ ಬಿಳಿ ಟಿಶರ್ಟ್ ಹಾಗೂ ಕೆಂಪು ಬಣ್ಣದ ಜಾಕೆಟ್ ಹಾಕಿಕೊಂಡಿದ್ದಾರೆ. ಈ ಸ್ನೇಹಿತರ ಗುಂಪು ರಸ್ತೆಯಲ್ಲಿ ಸಾಗುತ್ತಿದ್ದಾಗ ರಸ್ತೆಯ ಮಧ್ಯದಲ್ಲಿ ಗೂಳಿ ಕಾಣಿಸಿಕೊಳ್ಳುತ್ತದೆ. ಆಗ ರಾಹುಲ್ ರಿವರ್ಸ್ ಹಾಕಿಕೊಳ್ಳಿ ಎಂದು ತಿಳಿಸುತ್ತಾರೆ. ಆದರೆ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ಚಾಲಕ ನಾವೇಕೆ ಹಿಂದೆ ಹೋಗೋಣ ಎಂದಾಗ, ರಾಹುಲ್ ಪಂಚ್ ಡೈಲಾಗ್ ಹೊಡೆಯುತ್ತಾರೆ.
ಲೈಫ್‌ನಲ್ಲಿ ರಿಸ್ಕ್ ತೆಗೆದುಕೊಳ್ಳೋಣ ಆದ್ರೆ, ಇಲ್ಲಿ ಬೇಡ. ಇದು ಮಾಮೂಲಿ ಗೂಳಿ ಅಲ್ಲ. ಬೆಂಗಳೂರಿನ ಗೂಳಿ ನುಗ್ಗಿ ಹೊಡೆಯುತ್ತದೆ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬೆಂಗಳೂರು ಬುಲ್ಸ್ ಅಗಸ್ಟ್ 29 ರಂದು ಪುಣೇರಿ ಪಲ್ಟನ್ ವಿರುದ್ಧ ಮೊದಲ ಪಂದ್ಯದಲ್ಲಿ ಕಾದಾ ನಡೆಸಲಿದೆ.
ಬೆಂಗಳೂರು ತಂಡ: ಚಂದ್ರನಾಯಕ್ ಎಂ, ಲಕ್ಕಿ ಕುಮಾರ್, ಮಂಜೀತ್, ಪಂಕಜ್, ಅಂಕುಶ್ ರಾಠೀ, ಯೋಗೇಶ್ ಬಿಜೇಂದರ್ ದಹಿಯಾ, ಸಂಜಯ್ ಕ್ರಿಶನ್ ಧುಲ್, ಧೀರಜ್, ಅಲಿರೇಜಾ ಮಿರ್ಜೈಯಾನ್, ಮನೀಷ್, ಅಹ್ಮದರೇಜಾ ಅಸ್ಗರಿ, ಸತ್ಯಪ್ಪ ಮಟ್ಟಿ, ಆಕಾಶ್ ಸಂತೋಷ್ ಶಿಂಧೆ, ಮಹಿಪಾಲ್, ಸಚಿನ್, ಶುಭಂ ಠಾಕ್ತಾಕೆ, ಸುಹಾಸ್ ರಾಣೆ,