For Quick Alerts
ALLOW NOTIFICATIONS  
For Daily Alerts

Pro Kabaddi: ಪುಣೇರಿಗೆ ಮೊದಲ ಸೋಲು: ತಲೈವಾಸ್‌ ಅಬ್ಬರ

ನರೇಂದ್ರ ಕಂಡೋಲಾ ಹಾಗೂ ಸಚಿನ್‌ ಅವರ ಸ್ಥಿರ ಪ್ರದರ್ಶನದ ಫಲವಾಗಿ ತೆಲುಗು ಟೈಟನ್ಸ್‌ 11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ 11ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡವನ್ನು ಮಣಿಸಿತು.

ಬುಧವಾರ ಹೈದರಾಬಾದ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಟೂರ್ನಿಯ ಮೊದಲ ಸೋಲು ಕಂಡಿತು. ಪುಣೇರಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಜಯ, ಒಂದು ಸೋಲು ಕಂಡಿದ್ದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ತಮಿಳು ತಲೈವಾಸ್‌ ಆಡಿದ ಎರಡೂ ಪಂದ್ಯಗಳಲ್ಲಿ ಜಯ ದಾಖಲಿಸಿದೆ.

Narendra Kandola Shines as Telugu Titans Defeat Puneri Paltan in Pro Kabaddi League

ಮೊದಲಾವಧಿಯ ಆಟದಲ್ಲಿ ತಲೈವಾಸ್‌ 19-15 ಅಂಕಗಳಿಂದ ಪುಣೇರಿ ವಿರುದ್ಧ ಮುನ್ನಡೆ ಸಾಧಿಸಿತು. ಉಭಯ ತಂಡಗಳು ಮೊದಲ 20 ನಿಮಿಷದಲ್ಲಿ ರೈಡಿಂಗ್‌ನಲ್ಲಿ ತಲಾ 11 ಅಂಕಗಳನ್ನು ಕಲೆ ಹಾಕಿದವು. ಆದರೆ ಟ್ಯಾಕಲ್‌ನಲ್ಲಿ ಆರು ಅಂಕಗಳನ್ನು ಸೇರಿಸಿತು. ಎರಡನೇ ಅವಧಿಯಲ್ಲಿ ಆಟ ಸಹ ಜಿದ್ದಾಜಿದ್ದಿನಿಂದ ಕೂಡಿತ್ತು. ಮೊದಲಾವಧಿಯಲ್ಲಿ ಪುಣೇರಿ ಒಂದು ಬಾರಿ ಆಲೌಟ್ ಆಯಿತು.

ಎರಡನೇ ಅವಧಿಯಲ್ಲೂ ತಲೈವಾಸ್ ಆರ್ಭಟ

ಎರಡನೇ ಅವಧಿಯ ಆಟದಲ್ಲಿ ತಲೈವಾಸ್‌ 16-15 ಅಂಕಗಳಿಂದ ಮುನ್ನಡೆ ಸಾಧಿಸಿತು. ದಾಳಿಯಲ್ಲಿ ಉಭಯ ತಂಡಗಳ ಸಮಬಲ ಸಾಧಿಸಿದವು. ಈ ಅವಧಿಯಲ್ಲಿ ಪುಣೇರಿ ಟ್ಯಾಕಲ್‌ನಲ್ಲಿ 9 ಅಂಕ ಕಲೆ ಹಾಕಿತು. ಆದರೆ ಈ ಅವಧಿಯಲ್ಲಿ ಪಲ್ಟನ್‌ ಒಂದು ಬಾರಿ ಅಂಗಳ ಖಾಲಿ ಮಾಡಿತು.

ತಲೈವಾಸ್‌ ನರೇಂದ್ರ ಕಂಡೋಲಾ 9, ಸಚಿನ್‌ 8 ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ಪುಣೇರಿ ಪರ ಮೋಹಿತ್‌ 13 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಆಕರ್ಷಿಸಿದರು.

ಯು-ಮುಂಬಾಗೆ ಜಯ

ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಯು ಮುಂಬಾ 33-27 ಅಂಕಗಳಿಂದ ಗುಜರಾತ್ ಟೈಟನ್ಸ್‌ ವಿರುದ್ಧ ಜಯ ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಮೊದಲ ಜಯವನ್ನು ಮುಂಬಾ ದಾಖಲಿಸಿದೆ.

ಮುಂಬಾ ತಂಡದ ಪರ ಅಮೀರ್ಮೊಹಮ್ಮದ್ ಒಟ್ಟು 14 ರೈಡ್‌ಗಳನ್ನು ನಡೆಸಿ ಒಟ್ಟು 10 ಅಂಕಗಳನ್ನು ಕಲೆ ಹಾಕಿತು. ಇದರಲ್ಲಿ 8 ಟಚ್‌ ಪಾಯಿಂಟ ಹಾಗೂ 2 ಟ್ಯಾಕಲ್‌ ಸಹ ಸೇರಿವೆ. ಮೊದಲಾವಧಿಯಿಂದಲೂ ಮುಂಬಾ 14-13 ರಿಂದ ಗುಜರಾತ್ ವಿರುದ್ಧ ಮುನ್ನಡೆ ಸಾಧಿಸಿತು. ಈ ವೇಳೆ ರೈಡಿಂಗ್ ಹಾಗೂ ಟ್ಯಾಕಲ್‌ನಲ್ಲಿ ಮುಂಬಾ ಸಮಬಲ ಸಾಧಿಸಿತು. ಎರಡನೇ ಅವಧಿಯಲ್ಲೂ ಮುಂಬಾ ಸ್ಥಿರ ಪ್ರದರ್ಶನ ನೀಡಿದರು. ಈ ಬಾರಿ ಮುಂಬಾ ಒಂದು ಬಾರಿ ಎದುರಾಳಿಯನ್ನು ಆಲೌಟ್ ಮಾಡಿತು. ಗುಜರಾತ್‌ ಪರ ಪ್ರತೀಕ್ ದಹಿಯಾ ಹಾಗೂ ಸಂಬೀರ್ ತಲಾ ಐದು ಅಂಕಗಳನ್ನು ಕಲೆ ಹಾಕಿತು.

ಬಂಗಾಲ್‌, ಯುಪಿ ಕಾದಾಟ

ಗುರುವಾರ ನಡೆಯುವ ಮೊದಲ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್‌ ಹಾಗೂ ಯುಪಿ ಯೋಧಾಸ್‌ ತಂಡವನ್ನು ಎದುರಿಸಲಿದೆ. ಬಂಗಾಳ ಟೂರ್ನಿಯಲ್ಲಿ ಮೊದಲ ಗೆಲುವಿನ ಕನಸು ಕಾಣುತ್ತಿದೆ. ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡವನ್ನು ಎದುರಿಸಲಿದೆ.

Story first published: Wednesday, October 23, 2024, 22:15 [IST]
Other articles published on Oct 23, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+