ಒಲಿಂಪಿಕ್ಸ್‌ನಲ್ಲಿ ಕಬಡ್ಡಿ ಸೇರಿಸೋದು ನಮ್ಮ ಅಂತಿಮ ಗುರಿ: ಕಿರಣ್ ರಿಜಿಜು

ನವದೆಹಲಿ, ಏಪ್ರಿಲ್ 27: ಭಾರತದ ಮಣ್ಣಿನ ಕ್ರೀಡೆ ಕಬಡ್ಡಿಯನ್ನು ಭಾರತದಲ್ಲಿ, ಏಷ್ಯಾದಲ್ಲಿ ಜನಪ್ರಿಯಗೊಳಿಸುವುದಷ್ಟೇ ಅಲ್ಲ, ವಿಶ್ವದಲ್ಲಿ ಅದರಲ್ಲೂ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸೋದು ನಮ್ಮ ಅಂತಿಮ ಗುರಿ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸೋಮವಾರ (ಏಪ್ರಿಲ್ 27) ಹೇಳಿದ್ದಾರೆ.
'ಸದ್ಯಕ್ಕೆ ಕಬ್ಬಡ್ಡಿ ಏಷ್ಯನ್ ಗೇಮ್ಸ್‌ನಲ್ಲಿ ಸೇರ್ಪಡೆಗೊಂಡಿದೆ. ಹೀಗಾಗಿ ಬರೀ ಭಾರತವಲ್ಲ, ಎಲ್ಲಾ ಏಷ್ಯನ್ ರಾಷ್ಟ್ರಗಳು ಕಬ್ಬಡ್ಡಿಯನ್ನು ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸಲು ಒಟ್ಟುಗೂಡಬೇಕು. ಇದು ನಮ್ಮ ಅಂತಿಮ ಗುರಿ ಎಂದು ರಿಜಿಜು ಅಭಿಪ್ರಾಯಿಸಿದ್ದಾರೆ.
'ಕಬಡ್ಡಿಯನ್ನು ಒಲಿಂಪಿಕ್ಸ್‌ಗೆ ಸೇರಿಸುವ ಗುರಿಯನ್ನು ನಾವು ತಲುಪಬೇಕಾದರೆ ನಾವು ಕಬ್ಬಡಿ ಕ್ರೀಡೆಯ ಸ್ಟ್ಯಾಂಡರ್ಡ್ ಹೆಚ್ಚಿಸಬೇಕು. ಇಷ್ಟೇ ಅಲ್ಲದೆ ಭಾರತವೂ ಸೇರಿದಂತೆ ಉಳಿದ ದೇಶಗಳಲ್ಲೂ ಕಬಡ್ಡಿಯನ್ನು ಪ್ರಚಾರಗೊಳಿಸಬೇಕು,' ಎಂದು ಕಿರಣ್ ವಿವರಿಸಿದರು.
ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾವು (ಸಾಯ್) ಕೊರಿಯಾ, ಮಲೇಷ್ಯಾ ಸೇರಿದಂತೆ ಇಡೀ ಭಾರತದಿಂದಲೂ ಸೇರಿ ಸುಮಾರು 700 ಕಬಡ್ಡಿ ಕೋಚ್‌ಗಳಿಗೆ ಆನ್‌ಲೈನ್‌ನಲ್ಲಿ ಜ್ಞಾನವರ್ಧನೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಿಜಿಜು ಕೋಚ್‌ಗಳನ್ನು ಉದ್ದೇಶಿಸಿ ಮಾತನಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications