For Quick Alerts
ALLOW NOTIFICATIONS  
For Daily Alerts

Pro Kabaddi: ಬೆಂಗಳೂರು ಬುಲ್ಸ್‌ ತಂಡಕ್ಕೆ ಆನೆ ಬಲ ತುಂಬಿದ ರೈಡರ್ಸ್‌

ಇನ್ನೇನು ಕೆಲವೇ ದಿನಗಳಲ್ಲಿ ಕಬಡ್ಡಿ ಹವಾ ಇಡೀ ದೇಶದಲ್ಲಿ ಆವರಿಸಲಿದೆ. ಗುರುವಾರ ನಡೆದ ಆಟಗಾರರ ಹರಾಜಿನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಭಿಮಾನಿಗಳ ಚಿತ್ತ ಹರಾಜಿನ ಮೇಲೆ ನೆಟ್ಟಿತ್ತು. ಬೆಂಗಳೂರು ಬುಲ್ಸ್ ತಂಡ ಯಾವೆಲ್ಲಾ ಆಟಗಾರರನ್ನು ಖರೀದಿಸುತ್ತೆ ಎಂಬುದನ್ನು ಕಾದು ನೋಡುತ್ತಿದ್ದರು.

ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಈ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿತ್ತು. ಬೆಂಗಳೂರು ತಂಡ ಆನಂತರ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಈಗ ಬೆಂಗಳೂರು ಬುಲ್ಸ್ ಮ್ಯಾನೇಜ್ಮೆಂಟ್‌ ಮಾಸ್ಟರ್‌ ಪ್ಲ್ಯಾನ್‌ ಒಂದನ್ನು ರಚಿಸಿದೆ. ಇದಕ್ಕೆ ಪೂರಕವಾಗಿ ಬುಲ್ಸ್‌ ತಂಡ ಹರಾಜಿನಲ್ಲಿ ಸ್ಟಾರ್‌ ಆಟಗಾರರಿಗೆ ಬಲೆ ಹಾಕಿದೆ.

Pardeep Narwal Acquired by Bengaluru Bulls for 70 Lakh in PKL 2024 Auction

ತಂಡಕ್ಕೆ ಸ್ಟಾರ್‌ ರೈಡರ್ಸ್ ಎಂಟ್ರಿ

ಬೆಂಗಳೂರು ಬುಲ್ಸ್‌ ತಂಡ ಹರಾಜಿನಲ್ಲಿ ಸ್ಟಾರ್‌ ರೈಡರ್ಸ್‌ಗಳಿಗೆ ಮಣೆ ಹಾಕಿದೆ. ಈ ಪ್ಲೇಯರ್‌ಗಳಿಗೆ ಕೋಟಿ ಕೋಟಿ ರೂ.ಗಳನ್ನು ಸುರಿದಿದೆ. ಈ ಮೂಲಕ ತನ್ನ ನ್ಯೂನತೆಗಳನ್ನು ಮೆಟ್ಟಿನಿಲ್ಲಲು ಪ್ಲ್ಯಾನ್ ಮಾಡಿಕೊಂಡಿದೆ. ನಿಜಕ್ಕೂ ಈ ಸ್ಟಾರ್‌ ಪ್ಲೇಯರ್‌ಗಳ ಹೆಸರೇ ಕೆಳಿದ್ರೆ ಎದುರಾಳಿಗಳ ಎದೆಯಲ್ಲಿ ನಡುಕ ಶುರುವಾಗುತ್ತದೆ.

ಬುಲ್ಸ್‌ ತಂಡ ಸೇರಿದ ಪ್ರದೀಪ್‌

ಬೆಂಗಳೂರು ಬುಲ್ಸ್ ತಂಡ ಈ ಬಾರಿ ಸ್ಟಾರ್ ಆಟಗಾರರಿಂದ ಕಣಕ್ಕೆ ಇಳಿಯಲಿದೆ. ಪ್ರೊ ಕಬಡ್ಡಿ 11ನೇ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಬೆಂಗಳೂರು, ಪ್ರೊ ಕಬಡ್ಡಿ ಇತಿಹಾಸದ ಸ್ಟಾರ್‌ ಆಟಗಾರ ಪ್ರದೀಪ್‌ ನರ್ವಾಲ್‌ ಅವರಿಗೆ ಮಣೆ ಹಾಕಿದೆ. ಇವರು ಪ್ರೊ ಕಬಡ್ಡಿಯಲ್ಲಿ ಹಲವು ದಾಖಲೆಗಳಿಗೆ ತಮ್ಮ ಹೆಸರು ನಮೂದಿಸಿದ್ದಾರೆ.

ಪ್ರದೀಪ್‌ ನರ್ವಾಲ್‌ ಹೆಸರು ಕೇಳಿದರೆ ಎದುರಾಳಿ ತಂಡಕ್ಕೆ ಭಯ ಆರಂಭವಾಗುತ್ತದೆ. ಇವರು ಪ್ರೊ ಕಬಡ್ಡಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಕಲೆ ಹಾಕಿದ ರೈಡರ್ ಎಂಬ ಶ್ರೇಯವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು 170 ಪಂದ್ಯಗಳಲ್ಲಿ 1690 ಅಂಕಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.

Pardeep Narwal Acquired by Bengaluru Bulls for 70 Lakh in PKL 2024 Auction

ಪ್ರದೀಪ್‌ ನರ್ವಾಲ್‌ ಅವರ ಅಂಕಿ ಅಂಶಗಳನ್ನು ನೋಡಿದರೆ, ಇವರಿಗೆ ಎಷ್ಟು ಹಣ ನೀಡಬಹುದು ಎಂಬ ಲೆಕ್ಕಾಚಾರ ನಿಮ್ಮ ತಲೆಗೆ ಬರಬಹುದು. ಈ ಸ್ಟಾರ್‌ಗೆ ಬೆಂಗಳೂರು 70 ಲಕ್ಷ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇವರು ಆಗಮನ ನಿಜಕ್ಕೂ ಬುಲ್ಸ್‌ ತಂಡಕ್ಕೆ ಆನೆ ಬಲ ತುಂಬಿದೆ.

ಬುಲ್ಸ್‌ಗೆ ಅಜಿಂಕ್ಯ ಎಂಟ್ರಿ

ಬೆಂಗಳೂರು ಬುಲ್ಸ್‌ ತಂಡದ ರೈಡಿಂಗ್ ವಿಭಾಗವನ್ನು ಅಜಿಂಕ್ಯ ಪವಾರ್ ಬಲ ಪಡಿಸಿದ್ದಾರೆ. ಇವರಿಗೆ ಬುಲ್ಸ್‌ 1.1 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ಇವರು ತಮ್ಮ ಅನುಭವದ ಧಾರೆಯನ್ನು ತಂಡಕ್ಕೆ ಎರೆಯಬಹುದು. ಇವರ ಎಂಟ್ರಿಯಿಂದ ಬೆಂಗಳೂರು ತಂಡ ಬಲಿಷ್ಠವಾದಂತೆ ಕಾಣುತ್ತಿದೆ. ಅಜಿಂಕ್ಯ ಪವರ್‌ ಸಹ ತಮ್ಮ ಮೊನಚಾದ ರೈಡಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಬಲ್ಲರು. ಎರಡನೇ ಬಾರಿಗೆ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ಬುಲ್ಸ್‌ ಸ್ಟಾರ್ ಆಟಗಾರರ ಆಗಮನದಿಂದ ನವ ಉತ್ಸಾಹದಿಂದ ತುಂಬಿದೆ.

Story first published: Friday, August 16, 2024, 10:17 [IST]
Other articles published on Aug 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+