PKL 10: ಡಿ.2ರಿಂದ ಪ್ರೊ ಕಬಡ್ಡಿ ಲೀಗ್; ಯಾವ ಚಾನೆಲ್‌ನಲ್ಲಿ ನೇರಪ್ರಸಾರ, ಲೈವ್ ಸ್ಟ್ರೀಮಿಂಗ್?
ಶನಿವಾರ, ಡಿಸೆಂಬರ್ 2ರಿಂದ ವಿವೋ ಪ್ರೊ ಕಬಡ್ಡಿ ಲೀಗ್ (PKL) 10ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಗಲಿದ್ದು, ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗುವ ಹೈ-ವೋಲ್ಟೇಜ್ ಪಂದ್ಯದಲ್ಲಿ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಕಣಕ್ಕಿಳಿಯಲಿದೆ. ಈ ವೇಳೆ ಸ್ಟಾರ್ ಆಟಗಾರರಾದ ಫಾಜೆಲ್ ಅತ್ರಾಚಲಿ ಮತ್ತು ಪವನ್ ಸೆಹ್ರಾವತ್ ಮುಖಾಮುಖಿಯಾಗಲಿದ್ದು, ಅಭಿಯಾನಕ್ಕೆ ರೋಮಾಂಚನಕಾರಿ ಆರಂಭ ಭರವಸೆ ನೀಡಲಿದೆ.

ಕುತೂಹಲದಿಂದ ಕಾಯುತ್ತಿರುವ ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯು ನಾಲ್ಕು ವರ್ಷಗಳ ನಂತರ, ಎಲ್ಲಾ 12 ಫ್ರಾಂಚೈಸಿಗಳ ತವರಿನ ಅಂಗಳದಲ್ಲಿ ಪರಸ್ಪರ ಆಡಲು ಸಿದ್ಧವಾಗಿದೆ. ಕಬಡ್ಡಿ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ತಮ್ಮ ನಗರಗಳಲ್ಲಿ ನಿಕಟವಾಗಿ ಮತ್ತು ನೇರವಾಗಿ ವೀಕ್ಷಿಸಲು ಎದುರು ನೋಡುತ್ತಿದ್ದಾರೆ.
ಡಿಸೆಂಬರ್ 2ರಂದು ಪ್ರಾರಂಭವಾಗಿ 2024ರ ಫೆಬ್ರವರಿ 21ರವರೆಗೆ ನಡೆಯುವ ಲೀಗ್ ಹಂತದ ಪಂದ್ಯಗಳು ತೀವ್ರ ಹಣಾಹಣಿಯ ಭರವಸೆ ನೀಡಲಿದೆ.
ಪ್ರೊ ಕಬಡ್ಡಿ ಲೀಗ್ 2023 ಲೈವ್ ಸ್ಟ್ರೀಮಿಂಗ್
ಪ್ರೊ ಕಬಡ್ಡಿ ಲೀಗ್‌ನ ಯಶಸ್ವಿ 10ನೇ ಆವೃತ್ತಿಯು ಅತ್ಯುತ್ಸಾಹದಿಂದ ಹಿಂದಿರುಗಿದ ಕಾರಣ, 2023ರ ಡಿಸೆಂಬರ್ 2ರಿಂದ ಲೇ ಪಂಗಾ... ಎನ್ನಲು ಬರುತ್ತಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು ಮತ್ತು ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಪ್ರೊ ಕಬಡ್ಡಿ ಲೀಗ್ 2023 ನೇರಪ್ರಸಾರ ಚಾನಲ್
ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳ ಸಮಗ್ರ ಶ್ರೇಣಿಯಲ್ಲಿ 2023ರ ಪ್ರೊ ಕಬಡ್ಡಿ ಲೀಗ್ ಪಂದ್ಯಗಳು ನೇರಪ್ರಸಾರವಾಗಲಿವೆ. ಸ್ಟಾರ್ ಸ್ಪೋರ್ಟ್ಸ್ 1 (SD+HD), ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ (SD+HD), ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಮತ್ತು ಸ್ಟಾರ್ ಸ್ಪೋರ್ಟ್ಸ್ 2 (HD+SD) ನಲ್ಲಿ ವೈವಿಧ್ಯಮಯ ಚಾನೆಲ್‌ಗಳಾದ್ಯಂತ ರೋಮಾಂಚಕ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಬಹುದು.
ಪ್ರೊ ಕಬಡ್ಡಿ ಲೀಗ್ ತಂಡಗಳು ಮತ್ತು ನಾಯಕರು
ಬೆಂಗಾಲ್ ವಾರಿಯರ್ಸ್ - ಮಣಿಂದರ್ ಸಿಂಗ್
ಬೆಂಗಳೂರು ಬುಲ್ಸ್ - ವಿಕಾಶ್ ಕಂಡೋಲ (ಸಂಭಾವ್ಯ)
ದಬಾಂಗ್ ದೆಹಲಿ - ನವೀನ್ ಕುಮಾರ್
ಗುಜರಾತ್ ಜೈಂಟ್ಸ್ - ಫಝಲ್ ಅತ್ರಾಚಲಿ
ಹರಿಯಾಣ ಸ್ಟೀಲರ್ಸ್ - ಜೈದೀಪ್ (ಸಂಭಾವ್ಯ)
ಜೈಪುರ ಪಿಂಕ್ ಪ್ಯಾಂಥರ್ಸ್ - ಸುನಿಲ್ ಮಲಿಕ್
ಪಾಟ್ನಾ ಪೈರೇಟ್ಸ್ - ನೀರಜ್ ಕುಮಾರ್ (ಸಂಭಾವ್ಯ)
ಪುಣೇರಿ ಪಲ್ಟನ್ - ಅಸ್ಲಂ ಇನಾಮದಾರ
ತಮಿಳು ತಲೈವಾಸ್ - ಸಾಗರ್ ರಥಿ (ಸಂಭಾವ್ಯ)
ತೆಲುಗು ಟೈಟಾನ್ಸ್ - ಪವನ್ ಕುಮಾರ್ ಸೆಹ್ರಾವತ್
ಯು ಮುಂಬಾ - ಸುರೀಂದರ್ ಸಿಂಗ್ ಅಥವಾ ರಿಂಕು (ಸಂಭಾವ್ಯ)
ಯುಪಿ ಯೋಧಾ - ನಿತೇಶ್ ಕುಮಾರ್ (ಸಂಭಾವ್ಯ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications