For Quick Alerts
ALLOW NOTIFICATIONS  
For Daily Alerts

ಇಂದಿನಿಂದ ಕಬಡ್ಡಿ ಹವಾ.. ಎಲ್ಲಿ, ಯಾವಾಗ, ಹೇಗೆ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ

ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿ ಇಂದಿನಿಂದ (ಶನಿವಾರ, ಡಿಸೆಂಬರ್ 2) ಪ್ರಾರಂಭವಾಗಲಿದೆ. ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನ ಅರೆನಾದಿಂದ ಪ್ರಾರಂಭವಾಗುವ ಈ ಋತು ದೇಶದಾದ್ಯಂತ 12 ನಗರಗಳಲ್ಲಿ ಆಯೋಜಿಸಲಾಗುತ್ತದೆ.

ಪಿಕೆಎಲ್‌ನ 10ನೇ ಪಂದ್ಯಾವಳಿಯ ಮೊದಲ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟನ್ಸ್ ನಡುವೆ ಶನಿವಾರ ರಾತ್ರಿ 8 ಗಂಟೆಯಿಂದ ಆರಂಭವಾಗಲಿದೆ.

ಉಭಯ ತಂಡಗಳು ಗೆಲುವಿನೊಂದಿಗೆ ಟೂರ್ನಿ ಆರಂಭಿಸುವ ನಿರೀಕ್ಷೆಯಲ್ಲಿವೆ. ಗುಜರಾತ್ ಜೈಂಟ್ಸ್ ತಮ್ಮ ತವರು ನೆಲವಾದ ಅಹಮದಾಬಾದ್‌ನಲ್ಲಿ ಶುಭಾರಂಭ ಮಾಡುವ ಯೋಜನೆ ಹಾಕಿಕೊಂಡಿದೆ. ಗುಜರಾತ್ ಜೈಂಟ್ಸ್ ಪಿಕೆಎಲ್ 2023ರ ಬಲಿಷ್ಠ ತಂಡವೆಂದು ಕಾಣುತ್ತಿದೆ.

 PKL 10 Starts From December 2: Know Where to Watch Pro Kabaddi League Live, TV Channel, OTT Details

ಮತ್ತೊಂದೆಡೆ, ಹೈ-ಫ್ಲೈಯರ್ ಪವನ್ ಕುಮಾರ್ ಸೆಹ್ರಾವತ್ ತೆಲುಗು ಟೈಟಾನ್ಸ್ ತಂಡದಲ್ಲಿರುವುದು ದೊಡ್ಡ ಶಕ್ತಿ ಬಂದಂತಾಗಿದೆ. ಈ ಆವೃತ್ತಿಯಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪವನ್ ರೆಡಿಯಾಗಿದ್ದಾರೆ.

ಗುಜರಾತ್ ಜೈಂಟ್ಸ್ ವಿರುದ್ಧ ತೆಲುಗು ಟೈಟನ್ಸ್ ಹೆಡ್-ಟು-ಹೆಡ್ ರೆಕಾರ್ಡ್ ನೋಡಿದರೆ, ಗುಜರಾತ್ ಜೈಂಟ್ಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದೆ. ಟೈಟಾನ್ಸ್ ವಿರುದ್ಧ ಆಡಿದ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿದೆ, ಆದರೆ ತೆಲುಗು ಟೈಟಾನ್ಸ್ 1 ಬಾರಿ ಮಾತ್ರ ಗೆಲುವು ದಾಖಲಿಸಿದೆ.

ಪಿಕೆಎಲ್ ಸೀಸನ್ 9ರಲ್ಲಿ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಮುಖಾಮುಖಿಯಲ್ಲಿ ಗುಜರಾತ್ ಜೈಂಟ್ಸ್ ಗೆದ್ದು ಬೀಗಿತ್ತು.

ಪ್ರೊ ಕಬಡ್ಡಿ ಲೀಗ್ 2023-24 ಪಂದ್ಯವನ್ನು ವೀಕ್ಷಿಸುವುದು ಎಲ್ಲಿ?

ಪ್ರೊ ಕಬಡ್ಡಿ ಲೀಗ್ 2023-24 ಸೀಸನ್‌ನ ಲೈವ್ ಆಕ್ಷನ್ ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಇದರೊಂದಿಗೆ, ನೀವು ಸ್ಟಾರ್ ನೆಟ್‌ವರ್ಕ್‌ನಲ್ಲಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪಂದ್ಯಗಳನ್ನು ಸಹ ನೋಡಬಹುದು.

ಪ್ರೊ ಕಬಡ್ಡಿ ಲೀಗ್ 2023-24ರ ಪಂದ್ಯಗಳನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಬಹುದು. ಟೂರ್ನಿಯ ಎಲ್ಲಾ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗಲಿವೆ.

ಗುಜರಾತ್ ಜೈಂಟ್ಸ್ ತಂಡ

ರೋಹನ್ ಸಿಂಗ್, ಅರ್ಕಮ್ ಶೇಖ್, ಮೊಹಮ್ಮದ್ ಎಸ್ಮಾಯಿಲ್ ನಬಿಬಕ್ಷ್, ರೋಹಿತ್ ಗುಲಿಯಾ, ಬಾಲಾಜಿ ಡಿ, ವಿಕಾಸ್ ಜಗ್ಲಾನ್, ಜೀತೇಂದ್ರ ಯಾದವ್, ಸೌರವ್ ಗುಲಿಯಾ, ಮನುಜ್, ಫಜಲ್ ಅತ್ರಾಚಲಿ, ಸೋಂಬಿರ್, ರವಿಕುಮಾರ್, ದೀಪಕ್ ರಾಜೇಂದ್ರ ಸಿಂಗ್, ನಿತೇಶ್ ಮತ್ತು ಆಕಾಶ್

ತೆಲುಗು ಟೈಟಾನ್

ಪವನ್ ಸೆಹ್ರಾವತ್, ವಿನಯ್ ರೆಧು, ರಾಬಿನ್ ಚೌಧರಿ, ಪ್ರಫುಲ್ಲ ಜವ್ರೆ, ಓಂಕಾರ್ ಪಾಟೀಲ್, ಪರ್ವೇಶ್ ಭೈನ್‌ವಾಲ್, ಮಿಲಾದ್ ಜಬ್ಬಾರಿ, ಮೋಹಿತ್, ನಿತಿನ್, ಗೌರವ್ ದಹಿಯಾ, ಅಜಿತ್ ಪನ್ವಾರ್, ಅಂಕಿತ್ ಜಗ್ಲಾನ್, ರಜನೀಶ್ ದಲಾಲ್, ಶಂಕರ್ ಗಡಾಯಿ, ಹಮೀದ್ ನಾದರ್, ಓಂಕಾರ್ವಿ ಮತ್ತು ಎಸ್ ಸಂಜೆ ಮೋರೆ.

Story first published: Saturday, December 2, 2023, 16:15 [IST]
Other articles published on Dec 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+