ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರೋಹಿತ್ ಆಕರ್ಷಕ ಆಟ, ಯುಪಿ ಯೋಧ ಮಣಿಸಿದ ಬೆಂಗಳೂರು ಬುಲ್ಸ್

PKL 2018: Bengaluru Bulls beat UP Yoddha

ಲಕ್ನೋ, ನವೆಂಬರ್ 3: ಉತ್ತರಪ್ರದೇಶದ ಶಾಹೀದ್ ವಿಜಯ್ ಸಿಂಗ್ ಪಾಠಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಶನಿವಾರ (ನವೆಂಬರ್ 3) ನಡೆದ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಯುಪಿ ಯೋಧ ವಿರುದ್ಧ ಬೆಂಗಳೂರು ಬುಲ್ಸ್ 35-29ರ ವಿಜಯವನ್ನಾಚರಿಸಿದೆ. ಬೆಂಗಳೂರು ಬುಲ್ಸ್ ಗೆ ಇದು ನಾಲ್ಕನೇ ಗೆಲುವು.

ಪ್ರೊ ಕಬಡ್ಡಿ: ಯುಪಿ ಯೋಧ ವಿರುದ್ಧ ತಮಿಳ್ ತಲೈವಾಸ್ ಗೆ ಭರ್ಜರಿ ಜಯಪ್ರೊ ಕಬಡ್ಡಿ: ಯುಪಿ ಯೋಧ ವಿರುದ್ಧ ತಮಿಳ್ ತಲೈವಾಸ್ ಗೆ ಭರ್ಜರಿ ಜಯ

ಬೆಂಗಳೂರು ಪರ ರೋಹಿತ್ ಭರ್ಜರಿ ಆಟವಾಡಿದರು. 9 ರೈಡಿಂಗ್ ಪಾಯಿಂಟ್ಸ್ ಮತ್ತು 5 ಬೋನಸ್ ಸೇರಿ ಒಟ್ಟಿಗೆ ರೋಹಿತ್ 14 ಪಾಯಿಂಟ್ ಸೇರಿಸಿದ್ದು ತಂಡದ ಗೆಲುವನ್ನು ಬರೆಯಿತು. ಅತಿಥೇಯ ರಿಶಾಂಕ್ ದೇವಾಡಿಗ ಬಳಗಕ್ಕೆ ತಲುವನ್ನು ತಂದುಕೊಳ್ಳಲಾಗಲಿಲ್ಲ.

ಬೆಂಗಳೂರು ಪರ ಪವನ್ ಕುಮಾರ್ 4 ರೈಡಿಂಗ್, 1 ಟ್ಯಾಕ್ಲ್‌, 1 ಬೋನಸ್ ಪಾಯಿಂಟ್ ಸೇರಿಸಿ ತಂಡವನ್ನು ಗೆಲುವಿನೆಡೆಗೆ ತಂದರು. ಯೋಧ ತಂಡದ ಪರ ಪ್ರಶಾಂತ್ ಕುಮಾರ್ ರೈ 7 ಪಾಯಿಂಟ್ ಸೇರಿಸಿ ಗೆಲುವಿನ ನೆಲೆಯಲ್ಲಿ ಹೋರಾಟ ನಡೆಸಿದರಾದರೂ ಬೆಂಗಳೂರು ಒಗ್ಗಟ್ಟಿನ ಆಟದ ಮುಂದೆ ಸೋಲಬೇಕಾಯಿತು.

ಬಿ ಝೋನ್ ಪಾಯಿಂಟ್ ಟೇಬಲ್ ನಲ್ಲಿ ಬೆಂಗಳೂರು 5ರಲ್ಲಿ 4 ಪಂದ್ಯ ಗೆದ್ದು, 1 ಪಂದ್ಯ ಸೋಲಿನೊಂದಿಗೆ ಒಟ್ಟು 21 ಅಂಕ ಕಲೆ ಹಾಕಿ ದ್ವಿತೀಯ ಸ್ಥಾನದಲ್ಲಿದೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಯು ಮುಂಬಾ 31-22ರ ಭರ್ಜರಿ ಜಯ ಸಾಧಿಸಿತ್ತು.

Story first published: Saturday, November 3, 2018, 23:39 [IST]
Other articles published on Nov 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X