ಪ್ರೊ ಕಬಡ್ಡಿ 2018: ಯುಪಿ ಯೋಧ ಸೋಲಿಸಿದ ಬೆಂಗಳೂರು ಬುಲ್ಸ್

ಪುಣೆ, ನವೆಂಬರ್ 27: ಪುಣೆಯ ಶ್ರೀ ಶಿವ್ ಛತ್ರಪತಿ ರಸ್ಲಿಂಗ್ ಹಾಲ್‌ನಲ್ಲಿ ಸೋಮವಾರ (ನವೆಂಬರ್ 26) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಯುಪಿ ಯೋಧ ವಿರುದ್ಧ ಬೆಂಗಳೂರು ಬುಲ್ಸ್ 37-27ರ ಗೆಲುವನ್ನಾಚರಿಸಿದೆ. ಇದು ಬೆಂಗಳೂರಿಗೆ ಲಭಿಸಿದ 9ನೇ ಜಯ.
ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ 10, ರೋಹಿತ್ ಕುಮಾರ್ 7 ಅಂಕ ಸೇರಿಸಿ ತಂಡವನ್ನು ಗೆಲುವಿನತ್ತ ಎಳೆದು ತಂದರು. ಮಣೀಂದರ್ ಸಿಂಗ್ 5, ಕಾಶಿಲಿಂಗ್ ಅಡಕೆ ಮತ್ತು ಅಮಿತ್ ಶಿಯೋರಾನ್ ತಲಾ 4 ಅಂಕ ಸೇರಿಸಿದ್ದೂ ಗೆಲುವಿನ ನೆಲೆಯಲ್ಲಿ ತಂಡಕ್ಕೆ ನೆರವಾಯ್ತು.
ಯುಪಿ ಯೋಧ ಪರ ಶ್ರೀಕಾಂತ್ ಜಾಧವ್ ಒಬ್ಬರೇ ಗಮನಾರ್ಹ ಹೋರಾಟ ನಡೆಸಿದರು. ಶ್ರೀಕಾಂತ್ ಭರ್ಜರಿ 12 ಅಂಕಗಳನ್ನು ತಂಡದ ಖಾತೆಗೆ ಸೇರಿಸಿದರು. ಆದರೆ ಗೆಲುವು ಬೆಂಗಳೂರಿನ ಪರ ವಾಲಿತು. ಈ ಪಂದ್ಯದ ಬಳಿಕ ಬೆಂಗಳೂರು 52 ಅಂಕಗಳೊಂದಿಗೆ ಅಂಕಪಟ್ಟಿಯ ಅಗ್ರ ಸ್ಥಾನದಲ್ಲೇ ಉಳಿದಿದೆ.
Story first published: Tuesday, November 27, 2018, 2:49 [IST]
Other articles published on Nov 27, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications