ಪ್ಯಾಂಥರ್ಸ್ ಮಣಿಸಿದಂತೆ ವಾರಿಯರ್ಸ್ ಎದುರೂ ಬೀಗುತ್ತಾ ಬೆಂಗಳೂರು?

ಬೆಂಗಳೂರು, ನವೆಂಬರ್ 19: ಪವನ್ ಕುಮಾರ್ ಅವರ 'ಒನ್ ಮ್ಯಾನ್ ಆರ್ಮಿ' ಆಟದ ನೆರವಿನಿಂದ ಭಾನುವಾರ (ನವೆಂಬರ್ 18) ನಡೆದ ಪ್ರೊ ಕಬಡ್ಡಿ 70ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಜೈಪುರ್ ಪಿಂಕ್ ಪ್ಯಾಂಥರ್ಸ್ ಎದುರು ಗೆದ್ದು ಬೀಗಿತ್ತು.
ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಟ್ರಾನ್ಸ್‌ಸ್ಟೇಡಿಯಾ ಇಂಡೋರ್ ಅರೇನಾದಲ್ಲಿ ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವನ್ನು ಭರ್ಜರಿ 45-32ರ ಅಂತರದಿಂದ ಸೋಲಿಸಿತ್ತು.
ಇನ್ನು ನವೆಂಬರ್ 23ರಂದು ಪುಣೆಯಲ್ಲಿ ಬೆಂಗಳೂರು ತಂಡ ಬೆಂಗಾಲ್ ವಾರಿಯರ್ಸ್ ಸವಾಲು ಸ್ವೀಕರಿಸಲಿದೆ. ಬಿ ಝೋನ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಬೆಂಗಳೂರು ತಂಡ ವಾರಿಯರ್ಸ್ ವಿರುದ್ಧವೂ ಗೆದ್ದರೆ ಪ್ರಶಸ್ತಿ ಸುತ್ತಿನ ದಾರಿ ಸುಲಭವಾಗಲಿದೆ.

ಒನ್ ಮ್ಯಾನ್ ಆರ್ಮಿ ಆಟ
ಭಾನುವಾರ (ನ.19) ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಅದ್ಭುತ ಆಟ ಆಡಿದ್ದರು. 18 ರೈಡಿಂಗ್ ಮತ್ತು 1 ಬೋನಸ್ ಸೇರಿ ಪವನ್ ಒಟ್ಟು 19 ಅಂಕಗಳನ್ನು ಸೇರಿಸಿದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಬಲ ತುಂಬಿದ ಕಾಶಿಲಿಂಗ್, ಮಣೀಂದರ್
ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಪವನ್ ಬಿಟ್ಟರೆ ಬೆಂಗಳೂರು ಪರ ಮಣೀಂದರ್ ಸಿಂಗ್ ಮತ್ತು ಕಾಶಿಲಿಂಗ್ ಅಡಕೆ ಅಂಕದ ಕೊಡುಗೆ ತಂಡವನ್ನು ಬೆಂಬಲಿಸಿತು. ಮಣೀಂದರ್ ಮತ್ತು ಕಾಶಿಲಿಂಗ್ ಇಬ್ಬರೂ ತಲಾ 5 ಅಂಕಗಳನ್ನು ತಂಡಕ್ಕೆ ಸೇರಿಸಿದ್ದರು.

ಗೆಲ್ಲೋ ಪಂದ್ಯ ಸಮಬಲ
ಈ ಪಂದ್ಯಕ್ಕೂ ಮುನ್ನ ಶನಿವಾರ (ನವೆಂಬರ್ 17) ನಡೆದಿದ್ದ ಗುಜರಾತ್ ವಿರುದ್ಧದ ಇಂಟರ್ ಝೋನ್ ರೋಚಕ ಪಂದ್ಯವನ್ನು ಬೆಂಗಳೂರು 30-30ರಿಂದ ಸಮಬಲ ಗೊಳಿಸಿಕೊಂಡಿತ್ತು. ಆ ಪಂದ್ಯದ ಡ್ರಾ ಬೆಂಗಳೂರಿಗೆ ಕೊಂಚ ನಕಾರಾತ್ಮಕವಾಗಿ ಮತ್ತು ಗುಜರಾತ್ ಗೆ ಸಕಾರಾತ್ಮಕವಾಗಿಯೂ ಅಂಕಪಟ್ಟಿಯಲ್ಲಿ ಪರಿಣಾಮ ಬೀರಿತ್ತು.

ತಂಡಗಳ ಬಲಾಬಲ
ಭಾನುವಾರದ 70ನೇ ಪಂದ್ಯದ ಮುಕ್ತಾಯದ ಬಳಿಕ ಝೋನ್ 'ಎ'ಯಲ್ಲಿ ಯು ಮುಂಬಾ (56 ಅಂಕ) ಅಗ್ರ ಸ್ಥಾನದಲ್ಲಿದ್ದರೆ, ಗುಜರಾತ್ ಫಾರ್ಚೂನ್ ಜೈಂಟ್ಸ್ ಮತ್ತು ಪುಣೇರಿ ಪಲ್ಟಾನ್ ಅನಂತರದ ಸ್ಥಾನಗಳಲ್ಲಿವೆ. 'ಬಿ' ಝೋನ್ ನಲ್ಲಿ ಬೆಂಗಳೂರು ಬುಲ್ಸ್ (40 ಅಂಕ), ಪಾಟ್ನಾ ಪೈರೇಟ್ಸ್ (33), ಬೆಂಗಾಲ್ ವಾರಿಯರ್ಸ್ (32) ಮೊದಲ ಮೂರು ಸ್ಥಾನಗಳಲ್ಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications