ಪ್ರೊ ಕಬಡ್ಡಿ: ಯುಪಿ ಯೋಧ ಸೋಲಿಸಿ ತವರಿನಲ್ಲಿ ಗೆದ್ದು ಬೀಗಿದ ಯು ಮುಂಬಾ

ಮುಂಬೈ, ನವೆಂಬರ್ 14: ಮುಂಬೈಯಲ್ಲಿನ ಸರ್ದಾರ್ ವಲ್ಲಭ ಭಾಯ್ ಪಟೇಲ್ ಇಂಡೋರ್ ಸ್ಟೇಡಿಯಂನಲ್ಲಿ ಮಂಗಳವಾರ (ನವೆಂಬರ್ 13) ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಯುಪಿ ಯೋಧವನ್ನು 41-24 ಅಂತರದಿಂದ ಸೋಲಿಸಿ ಯು ಮುಂಬಾ ತಂಡ ತವರಿನಲ್ಲಿ ಎರಡನೇ ಗೆಲುವನ್ನಾಚರಿಸಿದೆ.
ದರ್ಶನ್ ಕಡಿಯಾನ್, ಸಿದ್ಧಾರ್ಥ್ ದೇಸಾಯಿ ಮತ್ತು ಸುರೀಂದರ್ ಸಿಂಗ್ ಅದ್ಭುತ ಆಟ ಮುಂಬೈಗೆ ಸುಲಭ ಗೆಲುವನ್ನು ನೀಡಿತು. ಮೂವರೂ ತಲಾ 7 ಅಂಕಗಳನ್ನು ತಂಡದ ಖಾತೆಗೆ ತುಂಬಿದರು. ಮುಂಬೈಯ ಮತ್ತೊಬ್ಬ ಸ್ಟಾರ್ ಆಟಗಾರ ಫಝಲ್ ಅಟ್ರಾಚಲಿ 6 ಅಂಕ ನೀಡಿ ತಂಡವನ್ನು ಬೆಂಬಲಿಸಿದರು.
ಯುಪಿ ಯೋಧ ಪರ ನರೇಂದರ್ ಮತ್ತು ಸಚಿನ್ ಕುಮಾರ್ ತಲಾ 5 ಅಂಕ ಸೇರಿಸಿದರಾದರೂ ತಂಡವನ್ನು ಗೆಲುವಿನತ್ತ ಎಳೆಯಲು ಸಾಧ್ಯವಾಗಲಿಲ್ಲ. ನಾಯಕ ರಿಶಾಂಕ್ ದೇವಾಡಿಗ ಆಟದ ಪ್ರಖರತೆ ಕಳೆದುಕೊಂಡಿದ್ದು, ತಂಡದ ಸೋಲಿಗೆ ಕಾರಣವಾಯ್ತು. ರಿಶಾಂಕ್ 2 ಅಂಕಗಳನ್ನಷ್ಟೇ ಸೇರಿಸಿದರು. ಪಂದ್ಯದ ಬಳಿಕ ಮುಂಬೈ ಝೋನ್ ಎ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಭದ್ರವಾಗಿದೆ.
Story first published: Wednesday, November 14, 2018, 1:13 [IST]
Other articles published on Nov 14, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications